ಡಿ. 17ರಂದು ಕಂಬಳಬೆಟ್ಟು ಶಾಲೆ ಶತಮಾನೋತ್ಸವ


Team Udayavani, Dec 10, 2017, 4:27 PM IST

10-Dec-17.jpg

ವಿಟ್ಲ : ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟಟ್ಟಿನಲ್ಲಿ 1906ರಲ್ಲಿ ಉರಿಮಜಲು ಮನೆತನದವರಿಂದ ಸ್ಥಾಪಿಸಲ್ಪಟ್ಟ ಕಂಬಳಬೆಟ್ಟು ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ನೂತನ ಶತಮಾನೋತ್ಸವ ಸ್ಮಾರಕ ಕಟ್ಟಡ ಹಾಗೆ ನವೀಕೃತ ರಂಗ ಮಂದಿರ ನಿರ್ಮಾಣಗೊಂಡಿದ್ದು, ಉದ್ಘಾಟನೆ ಹಾಗೂ ಶತ – ಸಂವತ್ಸರ ಸಂಭ್ರಮ 2017-18ರ ಡಿ. 17ರಂದು ಕಂಬಳಬೆಟ್ಟು ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕ.ಶಿ. ವಿಶ್ವನಾಥ ಉರಿಮಜಲು ತಿಳಿಸಿದರು.

ವಿಟ್ಲ ಪ್ರಸ್‌ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ಮಂದಿರ ನಿರ್ಮಾಣಕ್ಕೆ ಹಿಂದೆ ಚೆನ್ನಪ್ಪ ಕೋಟ್ಯಾನ್‌ ಅವರ ಅನುದಾನದಲ್ಲಿ 1 ಲಕ್ಷ ರೂ. ಬಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗ ಮಂದಿರ ನವೀಕರಣಕ್ಕೆ ಜಯಶ್ರೀ ಕೋಡಂದೂರು ಮೂಲಕ 1 ಲಕ್ಷ ರೂ. ಬಿಡುಗಡೆಯಾಗಿದೆ. ಊರ ದಾನಿಗಳು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದ ಮೂಲಕ ನಿರ್ಮಾಣವಾಗುತ್ತಿರುವ ಶತಮಾನೋತ್ಸವ ಸ್ಮಾರಕ ಕಟ್ಟಡಕ್ಕೆ 10 ಲಕ್ಷ ರೂ. ಅಂದಾಜಿಸಲಾಗಿದ್ದು, ಸುಮಾರು 5 ಲಕ್ಷ ರೂ.ಗಳಷ್ಟು ಸಂಗ್ರಹವಾಗಿದೆ. ತಾ.ಪಂ. ಸದಸ್ಯೆ ವನಜಾಕ್ಷಿ ಭಟ್‌ ಅವರ ಮೂಲಕ ಸುಮಾರು 65 ಸಾವಿರ ರೂ. ಅನುದಾನ ಲಭಿಸಿದೆ. ಶತಮಾನೋತ್ಸವ ಸಮಿತಿ ವತಿಯಿಂದ ಶೌಚಾಲಯ ನವೀಕರಣ ಹಾಗೂ ಪ್ರಯೋಗಾಲಯ ಮತ್ತು ವಿಜ್ಞಾನ ಸಾಮಗ್ರಿಗಳ ಆಧುನಿಕ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಸಚಿವರಿಂದ ಉದ್ಘಾಟನೆ
ಬೆಳಗ್ಗೆ 10 ಗಂಟೆಗೆ ಶತಮಾನೋತ್ಸವ ಸಮಾರಂಭದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ರಮಾನಾಥ ರೈ ನಡೆಸಲಿದ್ದು, ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಲಿದ್ದಾರೆ. ಜಿ.ಪಂ.ಸದಸ್ಯೆ ಜಯಶ್ರೀ ಕೋಡಂದೂರು ನವೀಕೃತ ರಂಗ ಮಂದಿರದ ಉದ್ಘಾಟಿಸಲಿದ್ದು, ಮಂಜನಾಡಿ ಜುಮ್ಮಾ ಮಸೀದಿ ಉಸ್ತಾದ್‌ ಅಬ್ದುಲ್‌ಖಾದರ್‌ ಮದನಿ ಶುಭ ಹಾರೈಸಲಿದ್ದಾರೆ. ನಲಿಕಲಿ ತರಗತಿಯ ಟೈಲ್ಸ್‌ ಅಳವಡಿಕೆಯನ್ನು ವಿಟ್ಲ ಗ್ರಾಮೀಣ ಸಹಕಾರ ಬ್ಯಾಂಕ್‌ ನಿರ್ದೇಶಕ ಅನಂತ ಭಟ್‌ ನೀರ್ಕಜೆ, ವಾಚನಾಲಯ ಕೊಠಡಿ ಯನ್ನು ಬಾಬು ಪುರುಷ ಅರ್ಕೆಜಾರು, ಕಂಪ್ಯೂಟರ್‌ ಕೊಠಡಿಯನ್ನು ಹಾಸನ ಜನಪ್ರಿಯ ಹಾಸ್ಪಿಟಲ್‌ ಮುಖ್ಯಸ್ಥ ಅಬ್ದುಲ್‌ಬಶೀರ್‌ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್‌ ಅವರು ಸ್ಥಾಪಕರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ., ಶಾಲಾ ಸ್ಥಳ ದಾನಿ ನೂಜಿ ವೆಂಕಟೇಶ್ವರ ಭಟ್‌ ವಿವಿಧ ಗಣ್ಯರಿಗೆ ಗೌರವಾರ್ಪಣೆ ಮಾಡಲಿದ್ದು, ಎಸ್‌.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಅಬ್ದುಲ್‌ಖಾದರ್‌ ನೆನಪಿನ ಕೃತಿ ಬಿಡುಗಡೆಗೊಳಿಸಲಿದ್ದಾರೆ. ವಿವಿಧ ಜನ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್‌ ಶೆಟ್ಟಿ ಮೂಡೈಮಾರ್‌, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್‌ರಹಿಮಾನ್‌ ಯಾನೆ ಅದ್ರು, ಮುಖ್ಯ ಶಿಕ್ಷಕಿ ವಾರಿಜಾ ಬಿ.ಎ., ಸಹ ಶಿಕ್ಷಕ ರಾಧಾಕೃಷ್ಣ ವರ್ಮ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮ್ಮಾನ
ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಫಲಕ ದಾನಿಗಳ ಅನಾವರಣವನ್ನು ಒಡಿ ಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನಡೆಸಲಿದ್ದು, ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಮಾದರಿ ಶಾಲೆಯ ಮುಖ್ಯಶಿಕ್ಷಕ ಬಿ. ವಿಶ್ವನಾಥ ಗೌಡ ಅವರು ಉಪನ್ಯಾಸ ನೀಡಲಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ವಿಟ್ಲ ಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಉಪಾ ಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ ,ಸದಸ್ಯರು ಭಾಗವಹಿಸಲಿದ್ದಾರೆ. ವಿಶೇಷ ವಾಗಿ ಶಾಲೆಯ ಹಳೆ ವಿದ್ಯಾರ್ಥಿಗಳು, ನಿವೃತ್ತ ಸೈನಿಕರಾದ ನಾರಾಯಣ ಗೌಡ, ಚಂದ್ರಮೋಹನ ಅವರನ್ನು ಸಮ್ಮಾನಿಸಲಾಗುವುದು ಎಂದು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕ.ಶಿ. ವಿಶ್ವನಾಥ ಉರಿಮಜಲು ತಿಳಿಸಿದರು.

ಟಾಪ್ ನ್ಯೂಸ್

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

astrology

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಘಾತಕ್ಕೀಡಾದರೂ ಪರೀಕ್ಷೆ ಬರೆದು ಗೆದ್ದಳು

ಅಪಘಾತಕ್ಕೀಡಾದರೂ ಪರೀಕ್ಷೆ ಬರೆದು ಗೆದ್ದಳು

ಬಂಟ್ವಾಳ: ಅಪ್ರಾಪ್ತ ವಯಸ್ಕ ಬಾಲಕಿಯ ಜತೆ ದೈಹಿಕ ಸಂಪರ್ಕ; ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ

ಬಂಟ್ವಾಳ: ಅಪ್ರಾಪ್ತ ವಯಸ್ಕ ಬಾಲಕಿಯ ಜತೆ ದೈಹಿಕ ಸಂಪರ್ಕ; ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ

e-property

ಭೂ ಮಾಲಕತ್ವಕ್ಕೆ ಇ-ಪ್ರಾಪರ್ಟಿ ಕಾರ್ಡ್‌

waste-management

ರೆಂಕೆದಗುತ್ತು ಪ್ರಾಯೋಗಿಕ ಯೋಜನೆಗೇ ಅಪಸ್ವರ

ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ

ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

manikkara

ಅಂದು ಬಿಸಿಲಾಯಿತು ಇಂದು ಮಳೆಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ

kallumutlu

ವಿವಿಧೆಡೆ ಮುಂದುವರಿದ ಮಳೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.