ಸ್ವಚ್ಛತೆಗಾಗಿ ಸೈಕಲ್‌ ಏರಿದ 72ರ ಉಮಾಪತಿ

Team Udayavani, Dec 10, 2017, 4:08 PM IST

10-Dec16.jpg

ಬೆಳ್ತಂಗಡಿ: ಅವರದ್ದು 72ರ ಇಳಿವಯಸ್ಸು. ಸೈಕಲ್‌ ಏರಿ ಹೊರಟರೆಂದರೆ ತಮಗೆ ಆರೋಗ್ಯ ಸಮಸ್ಯೆ ಇದ್ದರೂ ಈ ವಯಸ್ಸಲ್ಲೂ ಇರುವ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಸೈಕಲ್‌ ಪೆಡಲ್‌ ತುಳಿಯುತ್ತಿದ್ದಾರೆ. 

ಇವರ ಹೆಸರು ಉಮಾಪತಿ ಮೊದಲಿಯಾರ್‌. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಲಿಮಗುರಿ ಸಾಲೇಕಲ್ಲಿನವರು. ಯುವಕರನ್ನೂ ನಾಚಿಸುವ ಜೀವನೋತ್ಸಾಹ. ಅದಕ್ಕೆ ಆರಿಸಿಕೊಂಡದ್ದು ಸೈಕಲ್‌ ಯಾತ್ರೆ. ಸೈಕಲ್‌ ಆದರೆ ಇಂಧನವೂ ಉಳಿತಾಯ ಎಂಬುದು ಲೆಕ್ಕಾಚಾರ.

ಈ ಮೊದಲು ಭ್ರಷ್ಟಾಚಾರ, ಎಚ್‌ ಐವಿ ಸೋಂಕು, ಪರಿಸರ ಮಾಲಿನ್ಯ, ಗೋಹತ್ಯೆ ನಿಷೇಧ ಮೊದಲಾದ ವಿಷಯಗಳ ಜಾಗೃತಿಗೆ ಸೈಕಲ್‌ ತುಳಿದಿದ್ದರು. ಇವರ ಸೈಕಲ್‌ ಯಾತ್ರೆ ಧರ್ಮಸ್ಥಳದಿಂದ ಹೊರಟಿದ್ದು, ರಾಜ್ಯಾದ್ಯಂತ ಪರ್ಯಟನೆ ಮಾಡಿ 2019ರ ಅ. 2ರಂದು ಮೈಸೂರಿನಲ್ಲಿ ಮುಕ್ತಾಯವಾಗಲಿದೆ.

ದಿಲ್ಲಿಗೂ ಸೈಕಲ್‌ ಸವಾರಿ!
ಈ ಮೊದಲು ಗೋಹತ್ಯೆ ಮಸೂದೆಗೆ ಅಂಕಿತ ಹಾಕಿ ಎಂದು ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್‌ ಅವರಿಗೆ ಮನವಿ ಸಲ್ಲಿಸಲು ದಿಲ್ಲಿಗೂ ಇವರು ಸೈಕಲ್‌ ಸವಾರಿ ನಡೆಸಿದ್ದರು. ಶಿವಮೊಗ್ಗದ ಹೊಸನಗರದ ರಾಮಚಂದ್ರಾಪುರ ಮಠದಿಂದ ಹೊರಟು ದಿಲ್ಲಿಯವರೆಗೆ 3,105 ಕಿ.ಮೀ. ದೂರ ಕ್ರಮಿಸಿದ್ದರು. ಆದರೆ ರಾಷ್ಟ್ರಪತಿ ಭೇಟಿ ಸಾಧ್ಯವಾಗಿರಲಿಲ್ಲ. ಕೊನೆಗೆ ಸೈಕಲನ್ನು ದಿಲ್ಲಿಯ ಕರ್ನಾಟಕ ಭವನದಲ್ಲೇ ಬಿಟ್ಟು ಬಂದರು. ಇಂತಹ ಛಲದಂಕ ಮಲ್ಲನಿಗೆ ಆ ವರ್ಷ ರಾಜ್ಯೋತ್ಸವದಂದು ಹಾಸನ ರೋಟರಿ ಕ್ಲಬ್‌ನವರು ಸೈಕಲ್‌ ಉಡುಗೊರೆ ನೀಡಿ ಸಮ್ಮಾನಿಸಿದ್ದರು.

ವರ್ಷದ ಮೂರು ತಿಂಗಳು ಸೈಕಲ್‌ ಯಾತ್ರೆ
ಉಮಾಪತಿಯವರು ಸಂಸಾರಿ. ಅವರ ಪತ್ನಿ ಮಾನಸಿಕ ಅಸ್ವಸ್ಥೆಯಂತೆ. ಈ ಕಾರಣಕ್ಕೆ ಬಾಲಕಿಯೊಬ್ಬಳನ್ನು ದತ್ತು ಪಡೆದು ಬಳಿಕ ಆಕೆಗೆ ವಿವಾಹವನ್ನೂ ಮಾಡಿಸಿದ್ದಾರೆ. ಇವರು ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್‌. ವರ್ಷದ ಮೂರು ತಿಂಗಳು ಸಾಮಾಜಿಕ ಜಾಗೃತಿಗಾಗಿ ಸೈಕಲ್‌ ಏರುತ್ತಾರೆ. 2001ರಿಂದ ಒಟ್ಟು 22,000 ಕಿ.ಮೀ. ಸೈಕಲ್‌ ತುಳಿದಿದ್ದಾರೆ. ಪ್ರವಾಸಗಳೂ ಸೈಕಲ್‌ನಲ್ಲೇ. ಅಷ್ಟೇ ಅಲ್ಲ ಇವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವೂ ಹೌದು. 2008ರಿಂದ ಈವರೆಗೆ 8 ಚಿನ್ನದ ಪದಕ, 6 ಬೆಳ್ಳಿ, 7 ಕಂಚಿನ ಪದಕ ಪಡೆದಿದ್ದಾರೆ. 11 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದದ್ದು ಇವರ ಹೆಗ್ಗಳಿಕೆ. ಇತ್ತೀಚೆಗೆ ಮಾಸ್ಟರ್ಸ್‌ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಉಡುಪಿಯಲ್ಲಿ ಆಯೋಜಿಸಿದ 400 ಮೀ. ಓಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಡಾ| ಹೆಗ್ಗಡೆ ಶುಭಾಶಯ ಜಾಗೃತಿಗಾಗಿ ಸೈಕಲ್‌ ಏರಿದ ಉಮಾಪತಿ ಅವರಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶುಭಾಶಯ ಕೋರಿದ್ದಾರೆ. ಹೆಗ್ಗಡೆಯವರು ಜಾಥಾಕ್ಕೆ ಚಾಲನೆ ನೀಡಬೇಕೆಂದು ಕೆಲವು ದಿನ ಕಾದು ಅವರ ಭೇಟಿಯಾದ ಬಳಿಕವಷ್ಟೇ ಯಾತ್ರೆ ಆರಂಭಿಸಿದ್ದಾರೆ .

ಈ ಬಾರಿಯೂ ನದಿ ಜೋಡಣೆ ಉದ್ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕೆಂದು ದಿಲ್ಲಿವರೆಗೆ ಸೈಕಲ್‌ ತುಳಿದಿದ್ದೇನೆ. ನಾನು ಹೋದಲ್ಲೆಲ್ಲ ಜಾಥಾ ಮಾಡಿಸಿ ಮಕ್ಕಳು, ಹಿರಿಯರ ಮನಸ್ಸಿನಲ್ಲೂ ಜಾಗೃತಿ ಮೂಡಿಸುತ್ತಿದ್ದೇನೆ.
 – ಉಮಾಪತಿ ಮೊದಲಿಯಾರ್‌

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.