ತಾಪಮಾನ ನಿಭಾಯಿಸಲು ಪರಿಸರಸ್ನೇಹಿ ಉಪಕರಣ ಸಿದ್ಧ 


Team Udayavani, Jul 1, 2018, 11:53 AM IST

1-july-9.jpg

ನಗರ : ಪರಿಸರದ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟು ಮಾಡುವ, ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗುವ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳು ಹೊಸ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ.

ಶೀತಲೀಕರಣ ವ್ಯವಸ್ಥೆಯು ಒಂದು ಕೋಣೆಯ ಉಷ್ಣತೆ, ತೇವಾಂಶವನ್ನು ಹೆಚ್ಚು ಅನುಕೂಲಕರ ಸ್ಥಿತಿಗೆ ಬದಲಿಸುವ ಪ್ರಕ್ರಿಯೆಯಾಗಿದೆ. ಸಮಶೀತೋಷ್ಣ ಸೌಕರ್ಯ ಮನುಷ್ಯನ ಆರೋಗ್ಯ, ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ, ಅವನ ಕಾರ್ಯಕ್ಷಮತೆ ಹೆಚ್ಚುತ್ತದೆ. ಈ ಶೈತ್ಯಕಗಳು ತಾಪಮಾನವನ್ನು ಅನುಕೂಲಕರ ಸ್ಥಿತಿಗೆ ತಗ್ಗಿಸುವುದರ ಜತೆಯಲ್ಲಿ ಗಾಳಿಯ ಹರಿವನ್ನು ಹೆಚ್ಚಿಸುತ್ತದೆ.

ಈಗ ಅಸ್ತಿತ್ವದಲ್ಲಿರುವ ವಾತಾನುಕೂಲ ಯಂತ್ರಗಳ ಮುಖ್ಯ ಅನನುಕೂಲವೆಂದರೆ ಹೆಚ್ಚಿನ ವಿದ್ಯುತ್‌ ಬಳಕೆ, ಹೊರಸೂಸುವ ಕ್ಲೋರೋ ಫ್ಲೋರೋ ಕಾರ್ಬನ್‌- ಹೈಡ್ರೋ ಫ್ಲೋರೋ ಕಾರ್ಬನ್‌ನಂತಹ ರಾಸಾಯನಿಕ. ಇವುಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತವೆ. ಈ ನಿಟ್ಟಿನಲ್ಲಿ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿ ಗಳು ಹೊಸತೊಂದು ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳಾದ ರಶ್ಮಿ ಡಿ.ಎಸ್‌., ರಶ್ಮಿತಾ, ರೋಹಿತ್‌ ಬಿ.ಎಲ್‌., ಸಿಂಚನಾ ಪೂಜಾರಿ ಅವರು ಸಹಾಯಕ ಪ್ರಾಧ್ಯಾ ಪಕಿ ಪ್ರೊ| ರಜನಿ ರೈ ಬಿ. ಮಾರ್ಗದರ್ಶನದಲ್ಲಿ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಭಾಗ ಮುಖ್ಯಸ್ಥ ಪ್ರೊ| ಶ್ರೀಕಾಂತ್‌ ರಾವ್‌ ಸಲಹೆ ನೀಡಿ ಸಹಕರಿಸಿದ್ದಾರೆ.

ಹೀಗಿದೆ ಹೊಸ ಉಪಕರಣ
ಇದರಲ್ಲಿ ಟರ್ಮೋ ಎಲೆಕ್ಟ್ರಿಕ್‌ ಜನರೇಟರ್‌ (ಟೆಗ್‌) ಎನ್ನುವ ಸಾಧನವನ್ನು ಬಳಸಿಕೊಳ್ಳಲಾಗಿದೆ. ಟೆಗ್‌ನಲ್ಲಿ ಎರಡು ವಿಭಾಗವಿರುತ್ತವೆ. ಒಂದು ಶೀತವಿರುವ ಭಾಗ, ಮತ್ತೊಂದು ಉಷ್ಣತಾ ಭಾಗ. ಶೀತವಿರುವ ಭಾಗಕ್ಕೆ ನೀರಿನ ಸಂಪರ್ಕವನ್ನು ಜೋಡಿಸಬೇಕು. ಇದರಿಂದ ನೀರಿನ ತೊಟ್ಟಿಯ ಉಷ್ಣತೆ ಕಡಿಮೆಯಾಗುತ್ತದೆ. ನೀರಿನ ತೊಟ್ಟಿಗೆ ಅಲ್ಟ್ರಾಸಾನಿಕ್‌ ಮಿಸ್ಟ್‌ ಮೇಕರನ್ನು ಜೋಡಿಸಲಾಗಿದೆ. ಇದು ಶೀತಲೀಕರಿಸಿದ ನೀರಿನ ಕಣಗಳನ್ನು ಮಂಜಾಗಿ ಪರಿವರ್ತಿಸಿ ವಾತಾವರಣಕ್ಕೆ ಬಿಡುಗಡೆಗೊಳಿಸಿ ಕೊಠಡಿ ತಂಪಾಗುವಂತೆ ಮಾಡುತ್ತದೆ. ಉಷ್ಣತೆಯನ್ನು ಅಳೆಯುವುದಕ್ಕಾಗಿ ಸೂಕ್ತ ಮಾಪಕವನ್ನು ಅಳವಡಿಸಲಾಗಿದೆ. ನೈಸರ್ಗಿಕವಾಗಿ ಸಿಗುವ ಹೈಡ್ರೋಕಾರ್ಬನ್‌ ಮತ್ತು ಗಾಳಿಯನ್ನು ಇದು ಉಪಯೋಗಿಸಿಕೊಳ್ಳುತ್ತದೆ. ಟೆಗ್‌ ಯಾವುದೇ ರೀತಿಯ ರಾಸಾಯನಿಕಗಳನ್ನು ಹೊರಸೂಸುವುದಿಲ್ಲವಾದ್ದರಿಂದ ಇದೊಂದು ಪರಿಸರ ಸ್ನೇಹಿ ಉಪಕರಣವಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.