ದೇಗುಲಗಳಲ್ಲಿ  ಸಕಲ ಸಿದ್ಧತೆ; ಹೂವು, ತರಕಾರಿ ಖರೀದಿ ಭರಾಟೆ


Team Udayavani, Sep 2, 2018, 9:51 AM IST

2-september-1.jpg

ಮಹಾನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ನಾಡು ಸಜ್ಜಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರಾದ್ಯಂತ ಸಿದ್ಧತೆಗಳು ಬಿರುಸುಗೊಂಡಿವೆ. ಸಾರ್ವಜನಿಕರು ಹೂ, ಹಣ್ಣು, ತರಕಾರಿ ಖರೀದಿಯಲ್ಲಿ ತೊಡಗಿದ್ದರಿಂದ ವ್ಯಾಪಾರ ವಹಿವಾಟುಗಳು ಭರದಿಂದ ನಡೆಯುತ್ತಿವೆ.

ಅಷ್ಟಮಿ, ತೆನೆ ಹಬ್ಬ, ಚೌತಿ ಹೀಗೆ ಸಾಲಾಗಿ ಹಬ್ಬಗಳು ಆಗಮಿಸುತ್ತಿರುವುದರಿಂದ ಹೊರ ಜಿಲ್ಲೆಗಳ ಹೂವು ಮಾರಾಟಗಾರರು ನಗರಕ್ಕಾಗಮಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಮೂಡೆ, ಹೂವು, ತರಕಾರಿ, ಸಿಹಿ ತಿಂಡಿ ವ್ಯಾಪಾರ ಜೋರಾಗಿ ನಡೆಯುತ್ತಿರುವುದು ಕಂಡುಬಂತು. ನಗರದ ಸೆಂಟ್ರಲ್‌ ಮಾರುಕಟ್ಟೆ, ಸ್ಟೇಟ್‌ಬ್ಯಾಂಕ್‌, ಕಾರ್‌ಸ್ಟ್ರೀಟ್‌ ಭಾಗದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.

ತರಕಾರಿ ಬೆಲೆ ಏರಿಕೆ
ಅಷ್ಟಮಿ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ.  ಸ್ಥಳೀಯ ಬೆಂಡೆ ಕೆ.ಜಿ.ಗೆ ಈ ಹಿಂದೆ 100 ರೂ. ಇದ್ದರೆ ಶನಿವಾರ 160 ರೂ.ಕ್ಕೆ ತಲುಪಿದೆ. ಸ್ಥಳೀಯ ಹಾಗಲಕಾಯಿ 70 ರೂ. ನಿಂದ 100, ಅಲಸಂಡೆ 50ರಿಂದ ನಿಂದ 75 ರೂ., ಮೆಣಸು 80 ರೂ. 100, ಸ್ಥಳೀಯ ಮುಳ್ಳುಸೌತೆ 50 ರೂ. ನಿಂದ 80 ರೂ. ಹೆಚ್ಚಾಗಿದೆ.

ಮೂಡೆಗೆ ಹೆಚ್ಚಿದ ಬೇಡಿಕೆ
ಅಷ್ಟಮಿಗೆ ಮೂಡೆ ತಯಾರಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೂಡೆ ಖರೀದಿ ಸುವವರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ಮೂಡೆ ದರದಲ್ಲಿ ಏರಿಕೆಯಾಗಿದೆ. 100 ರೂ.ಗೆ ದೊಡ್ಡ ಗಾತ್ರದ 5, ಸಣ್ಣ ಗಾತ್ರದ 7, ಹಲಸಿನ ಎಲೆಯ ಗುಂಡ 100 ರೂ.ಗೆ 8 ಲಭ್ಯವಾಗುತ್ತಿವೆ.

ಹೂ, ಹಣ್ಣು ದರ ಸ್ಥಿರ
ಹೆಚ್ಚಾಗಿ ಬಳಸಲ್ಪಡುವ ಹೂ, ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಕೆಲವು ಹಣ್ಣುಗಳಿಗೆ 10ರಿಂದ 15 ರೂ. ನಷ್ಟು ಏರಿಕೆಯಾಗಿದೆ. ಆ್ಯಪಲ್‌ ಕಿ.ಗ್ರಾಂ. ಗೆ 100-120 ರೂ., ಮುಸಂಬಿ 30, ದ್ರಾಕ್ಷಿ 50, ಕಿತ್ತಳೆ 40, ದಾಳಿಂಬೆ 60, ಚಿಕ್ಕು 40, ಕಲ್ಲಂಗಡಿ 15, ಅನಾನಸು 30, ಚಿಪ್ಪಡ್‌ 20, ಪೇರಳೆ 60, ಬಾಳೆಹಣ್ಣು ಕದಳಿ 60 ರೂ. ಇದೆ. ಗುಲಾಬಿ 100, ಜೀನ್ಯ 100 ರೂ., ಶುಂಠಿ ಗಿಡಕ್ಕೆ 30, ಸೇವಂತಿಗೆ ಮಾರ್‌ ಒಂದಕ್ಕೆ 100 ರೂ., ಬಿಳಿ ಸೇವಂತಿಗೆ 80, ಕಾಕಡ ಮಲ್ಲಿಗೆ 60 ಇದೆ. 

ಅಷ್ಟಮಿ, ಮೊಸರು ಕುಡಿಕೆ 
ಅಷ್ಟಮಿ ಹಾಗೂ ಮೊಸರು ಕುಡಿಕೆಗೆ ವಿವಿಧ ಸಂಘ – ಸಂಸ್ಥೆಗಳ ಯುವಕರು ಸಿದ್ಧತೆ ನಡೆಸುತ್ತಿದ್ದಾರೆ. ರವಿವಾರ ಶ್ರೀ ಕ್ಷೇತ್ರ ಕದ್ರಿ ಹಾಗೂ ವಿವಿಧ ಭಾಗಗಳಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗೂ ಇತರ ಕಾರ್ಯಕ್ರಮಗಳು, ಸೋಮವಾರ ಮೊಸರು ಕುಡಿಕೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿವೆ.

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.