Udayavni Special

ಚಾರಣ ವೇಳೆ ದುಬಾರಿ ಶುಲ್ಕ : ಹವ್ಯಾಸಿಗಳಲ್ಲಿ  ಬೇಸರ

Team Udayavani, Dec 23, 2018, 10:22 AM IST

23-december-3.gif

ಸುಬ್ರಹ್ಮಣ್ಯ : ಚಳಿಗಾಲ ಬಂತೆಂದರೆ ಸಾಕು ಚಾರಣಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಚಾರಣಕ್ಕೆ ತೆರಳುವ ಹುಮ್ಮಸ್ಸಿನಲ್ಲಿರುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಕುಮಾರ ಪರ್ವತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇಲ್ಲಿ ಚಾರಣಕ್ಕೆ ತೆರಳುವವರಿಗೆ ಚೆಕ್‌ ಪೋಸ್ಟ್‌ನಲ್ಲಿ ವಿಧಿಸುವ ಮೊತ್ತ ಚಾರಣಿಗರಿಗೆ ಬೇಸರ ತರಿಸಿದೆ.

ಪ್ರಕೃತಿ, ಚಾರಣ ಪ್ರೀಯರ ಸ್ವರ್ಗವೆಂದೆಣಿಸಿದ ಕುಮಾರ ಪರ್ವತಕ್ಕೆ ತೆರಳುವ ಚಾರಣಿಗರ ತಂಡಕ್ಕೆ ಚಾರಣ ವೇಳೆ ಬೆಟ್ಟ ಗುಡ್ಡ ಹತ್ತುವುದಕ್ಕಿಂತ ಹೆಚ್ಚು ಭಾರವಾಗುತ್ತಿರುವುದು ಚಾರಣ ವೇಳೆ ಚೆಕ್‌ಪೋಸ್ಟ್‌ನಲ್ಲಿ ವಿಧಿಸಲಾಗುತ್ತಿರುವ ಅಧಿಕ ಶುಲ್ಕ. ಇಲ್ಲಿ ಚಾರಣಿಗರ ತಂಡದ ಪ್ರತಿ ಸದಸ್ಯನಿಂದ 350 ರೂ. ಹಾಗೂ ವಿದೇಶಿ ಪ್ರಜೆಯಿಂದ 1,000 ರೂ. ನಂತೆ ಸ್ವೀಕರಿಸಲಾಗುತ್ತದೆ.

ರಾಜ್ಯದ ಮೂಲೆ ಮೂಲೆಗಳಿಂದ ತಂಡಗಳು ಸುಬ್ರಹ್ಮಣ್ಯದಿಂದ ಪ್ರತಿನಿತ್ಯ ಚಾರಣ ನಡೆಸುತ್ತವೆ. ದಿನಗಳಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ತಂಡಗಳು ಚಾರಣಕ್ಕೆ ತೆರಳುತ್ತಿದ್ದರೆ, ವಾರದ ಕೊನೆಯಲ್ಲಿ ಸುಮಾರು 25ರಿಂದ 30ಕ್ಕೂ ಅಧಿಕ ಚಾರಣಿಗರ ತಂಡ ಕುಮಾರ ಪರ್ವತಕ್ಕೆ ತೆರಳುತ್ತಿರುತ್ತದೆ. ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಏರಬೇಕಾದರೆ 12 ಕಿ.ಮೀ. ಸಾಗಬೇಕು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಿಂದ ದೇವರಗದ್ದೆ ಬಳಿ ಸುಬ್ರಹ್ಮಣ್ಯ ಮೀಸಲು ಅರಣ್ಯ ಪ್ರವೇಶಿಸಿ ತೆರಳಬೇಕು. ಇಲ್ಲಿ ಅರಣ್ಯ ಇಲಾಖೆಯ ಯಾವುದೇ ಚೆಕ್‌ಪೋಸ್ಟ್‌ಗಳು ಇಲ್ಲ. ಮಂದೆ ಗಿರಿಗದ್ದೆ ಎಂಬ ಪ್ರದೇಶದ ಮೂಲಕ ಹಾದು ಹೋಗಬೇಕಾಗಿದ್ದು, ಇದು ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿದೆ.

ಅನುಮತಿ ಕಡ್ಡಾಯ
ಪುಷ್ಪಗಿರಿ ವನ್ಯ ಜೀವಿ ವಿಭಾಗದ ಚೆಕ್‌ ಪೋಸ್ಟ್‌ ಇಲ್ಲಿದೆ. ಆದ್ದರಿಂದ ಮುಂದಕ್ಕೆ ಪರ್ವತ ಹತ್ತಲು ವನ್ಯ ಜೀವಿ ವಿಭಾಗದ ಇಲಾಖೆಯ ಅನುಮತಿ ಪಡೆಯಲೇ ಬೇಕಾಗಿದೆ. ಈ ವೇಳೆ ತಪಾಸಣ ಕೇಂದ್ರದ ಸಿಬಂದಿ ಚಾರಣಿಗರಿಂದ ಮೊತ್ತವನ್ನು ಪಡೆದುಕೊಳ್ಳುತ್ತಿದ್ದು, ಪ್ರತಿಯಾಗಿ ರಶೀದಿ ಕೂಡ ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ 150 ರೂ. ನಂತೆ ಸ್ವೀಕರಿಸಲಾಗುತ್ತಿತ್ತು. ನಿರ್ವಹಣೆಗೆಂದು ಈ ವಸೂಲಾತಿ ನಡೆಯುತ್ತಿದ್ದು,ಇಲ್ಲಿ ಯಾವುದೇ  ರೆ ವ್ಯವಸ್ಥೆಗಳು ಚಾರಣಿಗರಿಗೆ ಒದಗಿಸಲಾಗುತ್ತಿಲ್ಲ. ಮಾರ್ಗದರ್ಶಿ ವ್ಯವಸ್ಥೆಯೂ ಇಲ್ಲಿಲ್ಲ.

ನಿರ್ಮಾಣ ಚಿಂತನೆ
ಕೇಂದ್ರ ವನ್ಯ ಜೀವಿ ವಿಭಾಗದ ಶುಲ್ಕ ಕುಮಾರ ಪರ್ವತದಲ್ಲಿ ಜಾರಿಯಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿ ಪರ್ವತಕ್ಕೆ ಚಾರಣಕ್ಕೆ ತೆರಳುವವ ಪ್ರವಾಸಿಗರಿಗೆ ಅನುಕೂಲವಾಗುವಂತೆ  ಕುಮಾರ ಪರ್ವತದಲ್ಲಿ ವೀಕ್ಷಣಾ ಗೋಪುರ ತೆರೆಯುವ ಚಿಂತನೆ ಇದೆ. ಚಾರಣಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರಲಾಗುವುದು.
-ಆರ್‌. ಶಂಕರ್‌ ,
ಪರಿಸರ ಖಾತೆ ಸಚಿವ 

ಹೆಚ್ಚು ಶುಲ್ಕ ಸರಿಯಲ್ಲ
ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳುವ ವೇಳೆ ಪ್ರತಿಯೋರ್ವ ಚಾರಣಿಗ ಸದಸ್ಯನಿಂದ 350 ರೂ. ಪಡೆಯುತ್ತಿರುವುದು ದುಬಾರಿಯಾಗುತ್ತಿದೆ. ಶುಲ್ಕ ಪಡೆದರೂ ಅಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲ. ಹೀಗಾಗಿ ಕೇಂದ್ರ ವನ್ಯಜೀವಿ ವಿಭಾಗ ಚಾರಣಿಗರಿಗೆ ಅನುಕೂಲವಾಗುವಂತೆ ಸರಳ ಶುಲ್ಕ ನಿಗದಿಪಡಿಸಬೇಕು.
-ಸುರೇಶ್‌ ಬಜಗೋಳಿ,
ಚಾರಣಿಗ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಚಿಪ್ಪು ಸುಡುವುದರಿಂದ ಕೃಷಿಗೆ ಕಂಟಕ ಪರಿಸರಕ್ಕೆ ಧಕ್ಕೆ

ಚಿಪ್ಪು ಸುಡುವುದರಿಂದ ಕೃಷಿಗೆ ಕಂಟಕ, ಪರಿಸರಕ್ಕೆ ಧಕ್ಕೆ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

roop

ಅಮಿತ್‌ ಶಾಗೆ ಶಾಸಕಿ ರೂಪಾಲಿ ಭೇಟಿ : ಹಾಲಕ್ಕಿ ಒಕ್ಕಲಿಗರನ್ನು ಎಸ್ಟಿಗೆ ಸೇರಿಸಲು ಮನವಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.