ಮಂಗಳೂರು:ನಗರದಲ್ಲಿ  ಗ್ಯಾಸ್‌ ಟ್ಯಾಂಕರ್‌ ಪಲ್ಟಿ;ತೆರವು ಕಾರ್ಯಾಚರಣೆ

Team Udayavani, Nov 21, 2018, 8:45 AM IST

ಮಂಗಳೂರು: ನಗರದ ನಂತೂರು ಸರ್ಕಲ್ ನಲ್ಲಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

ಟ್ಯಾಂಕರ್‌ ಬಿದ್ದಿರುವ ಹಿನ್ನಲೆಯಲ್ಲಿ ಕುಲಶೇಖರದಿಂದ ಮಂಗಳೂರು ನಗರದಕ್ಕೆ  ಹೋಗುವ ಬರುವ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಪಡೀಲ್ ಮಾರ್ಗ ವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. 

 ಗ್ಯಾಸ್ ಲೀಕೆಜ್ ಆಗದಂತೆ ಟ್ಯಾಂಕರ್ ಮೇಲೆತ್ತಲು ಅಧಿಕಾರಿಗಳು ಕರ್ತವ್ಯ ನಿರತರಾಗಿದ್ದಾರೆ. 

ಸಾರ್ವಜನಿಕರು ಸಹಕರಿಸುವಂತೆ ಪೋಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

 ಗ್ಯಾಸ್‌ ಸೋರಿಕೆ ಯಾಗಿಲ್ಲ ಎಂದು ತಿಳಿದು ಬಂದಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ