ಈ ಬಾರಿ ಕರಾವಳಿ ಭಾಗದಲ್ಲಿ ದೀರ್ಘ‌ ಚಳಿಗಾಲ?

Team Udayavani, Dec 12, 2022, 6:15 AM IST

ಈ ಬಾರಿ ಕರಾವಳಿ ಭಾಗದಲ್ಲಿ ದೀರ್ಘ‌ ಚಳಿಗಾಲ?

ಮಂಗಳೂರು : ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೀರ್ಘ‌ ಚಳಿಗಾಲದ ಅವಧಿ ಇರುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಾರದ ಹಿಂದೆಯೇ ಚಳಿ ಕಾಣಿಸಿಕೊಂಡಿದೆ. ಈ ಬಾರಿಯ ಹಿಂಗಾರು ಋತುವಿನಲ್ಲಿ ಬದಲಾವಣೆಯಾಗಿದೆ. ಹಿಂಗಾರು ಅವಧಿ ಆರಂಭಗೊಂಡು ತಿಂಗಳು ಸಮೀಪಿಸಿದರೂ ಇನ್ನೂ ನಿರೀಕ್ಷಿತ ಮಳೆ ಸುರಿದಿಲ್ಲ. ಸದ್ಯ ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದು, ಮೋಡ ಸೃಷ್ಟಿಯಾಗುತ್ತಿಲ್ಲ. ಇದರಿಂದಾಗಿ ಉಷ್ಣಾಂಶ ಇಳಿಮುಖಗೊಳ್ಳು ತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಡಿಸೆಂಬರ್‌ ಮೂರನೇ ವಾರದವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಇದು ಚಳಿಗಾಲದ ಮೇಲೆ ಪರಿಣಾಮ ಬೀರಲಿದೆ. ಡಿಸೆಂಬರ್‌ ಅಂತ್ಯದ ಬಳಿಕ ಉಷ್ಣಾಂಶ ಮತ್ತೆ ಏರಿಕೆಯಾಗಲಿದೆ.

ಈ ಅವಧಿಯಲ್ಲಿಯೂ ಚಳಿ ಇರಲಿದೆ. ಸದ್ಯದ ಮುನ್ಸೂಚನೆ ಯಂತೆ ಫೆಬ್ರವರಿ ಅಂತ್ಯದವರೆಗೆ ಚಳಿ ಮುಂದು ವರಿಯುವ ಸಾಧ್ಯತೆ ಇದೆ. ಆದರೆ ಕಳೆದ ವರ್ಷ ಉಷ್ಣಾಂಶ ಇಳಿಮುಖ‌ ಪ್ರಕ್ರಿಯೆ ಆರಂಭಗೊಂಡಿದ್ದು ಡಿಸೆಂಬರ್‌ನಲ್ಲಿ. ಆದ್ದರಿಂದ ಚಳಿಗಾಲದ ಅವಧಿಯೂ ಕಡಿಮೆ ಇತ್ತು.

ಕಳೆದ ಕೆಲವು ದಿನದಿಂದ ಹವಾಮಾನ ಬದಲಾವಣೆಯ ಪರಿಣಾಮವನ್ನು ಕರಾವಳಿ ಎದುರಿಸುತ್ತಿದ್ದು, ಬೆಳಗ್ಗೆ ಚಳಿ, ಮಧ್ಯಾಹ್ನ ಸೆಕೆ ಮತ್ತು ಸಂಜೆಯ ವೇಳೆ ತುಸು ಮೋಡದ ವಾತಾವರಣ ಇರುತ್ತಿದೆ. ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿದ್ದೂ ಇದಕ್ಕೆ ಕಾರಣ. ಬೆಳಗ್ಗೆ ಸುಮಾರು 4ರಿಂದ 6ರ ವರೆಗೆ ಕರಾವಳಿಯಲ್ಲಿ ಉಷ್ಣಾಂಶ ತೀರ ಇಳಿಮುಖಗೊಳ್ಳುತ್ತಿದೆ. ಈ ಭಾಗ ಸಮುದ್ರಕ್ಕೆ ಸಮೀಪ ಇರುವುದರಿಂದ ಚಳಿ, ಮಂಜಿನ ವಾತಾವರಣ ಇರುತ್ತದೆ. ಬಿಸಿಲು ಬಂದಂತೆ ಸಮುದ್ರ ಭಾಗದಲ್ಲಿ ಉಷ್ಣಾಂಶ ಏರಿಕೆಯೇ ಸೆಕೆಗೆ ಕಾರಣವಾಗುತ್ತದೆ.

ಸಾಂಕ್ರಾಮಿಕ ರೋಗಗಳಿಗೆ ಎಡೆ
ಹವಾಮಾನ ಬದಲಾವಣೆ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ.
ಚಳಿಗಾಲ ದಲ್ಲಿ ತಾಪಮಾನ ವೈಪರೀತ್ಯ ಉಂಟಾಗುವುದರಿಂದ ಬ್ಯಾಕ್ಟೀರಿಯ, ವೈರಸ್‌ಗಳ ಹರಡುವಿಕೆ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಜನರ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಕೊಂಡು ಕಾಯಿಲೆಗೆ ಒಳಗಾಗುವ ಅಪಾಯವೂ ಇದೆ. ಇದೇ ವೇಳೆ ಬಿಟ್ಟು ಬಿಟ್ಟು ಸುರಿಯುವ ಮಳೆ ಡೆಂಗ್ಯೂ ರೋಗಕ್ಕೂ ಕಾರಣವಾಗುತ್ತಿದೆ.

ಹಿಂಗಾರು ಆರಂಭವಾಗಿ ಕೆಲವು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಬೆಳಗ್ಗಿನ ವೇಳೆ ಚಳಿ, ಬಳಿಕ ಸೆಕೆಯ ವಾತಾವರಣ ಇರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿಗಾಲ ಈಗಲೇ ಆರಂಭಗೊಂಡಿದೆ. ಫೆಬ್ರವರಿ ವರೆಗೆ ಚಳಿಯ ಅನುಭವ ಇರಲಿದೆ.
– ಡಾ| ರಾಜೇಗೌಡ, ಹವಾಮಾನ ವಿಜ್ಞಾನಿ, ಕೃಷಿ ವಿ.ವಿ. ಬೆಂಗಳೂರು

ಟಾಪ್ ನ್ಯೂಸ್

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.