ರಾಜಕೀಯ ಲಾಭಕ್ಕಾಗಿ ಧರ್ಮದ ವಿಷಯದಲ್ಲಿ ಪ್ರಚೋದಿಸುವವರನ್ನು ಬಹಿಷ್ಕರಿಸಬೇಕು: ರಮಾನಾಥ ರೈ

Team Udayavani, Jan 18, 2020, 12:55 PM IST

ಮಂಗಳೂರು: ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಪ್ರಚೋದನೆ ಹುಟ್ಟಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಶನಿವಾರದಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕನಕಪುರದಲ್ಲಿ ಏಸುವಿನ ಪ್ರತಿಮೆಯನ್ನು ಸ್ಥಾಪನೆ ವಿಚಾರವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಲಾಭಕ್ಕಾಗಿ ಧರ್ಮದ ವಿಷಯದಲ್ಲಿ ಪ್ರಚೋದನೆ ಮಾಡುವವರನ್ನು ಸಮಾಜ ಬಹಿಷ್ಕಾರ ಮಾಡಬೇಕು. ಕಲ್ಲಡ್ಕ ಶಾಲೆಗೆ ಕೊಲ್ಲೂರಿನಿಂದ ಒಂದು ಕೆ.ಜಿ ಅಕ್ಕಿ ಹೋಗಲಿಲ್ಲ, ಎಲ್ಲ ಹಣ ಚೆಕ್ ಮೂಲಕ ಹೋಗುತ್ತಿತ್ತು. ಭಕ್ತರು ಹುಂಡಿಗೆ ಹಾಕಿದ ಹಣ ಪಡೆಯುತ್ತಿದ್ದರು. ಅಲ್ಪಸಂಖ್ಯಾತರು ಮತೀಯವಾದಿಗಳಾದರೇ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತರು ಮತೀಯವಾದಿಗಳಾದರೇ ದೇಶಕ್ಕೆ ಅಪಾಯ ಎಂದು ಹೇಳಿದರು.

ರಾಜ್ಯದಲ್ಲಿ ಎಸ್‌ಡಿಪಿಐ ಬ್ಯಾನ್ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಲಾಭ ನಷ್ಟ ಲೆಕ್ಕ ಹಾಕಿ ತೀರ್ಮಾನ ಮಾಡಬಹುದು. ಈ ವಿಚಾರದಲ್ಲಿ ನಾನು ಪಕ್ಷದ ತೀರ್ಮಾನಕ್ಕೆ ಬದ್ದವಾಗಿದ್ದೇನೆ. ಬಿಜೆಪಿಗೆ ಲಾಭ ಇದೆ ಎಂದಾದರೇ ಬ್ಯಾನ್ ಮಾಡಬಹುದು. ನಾನು ಯಾವುದೇ ರೀತಿಯಲ್ಲಿ ಮತೀಯವಾದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ