ಕಮ್ ಬ್ಯಾಕ್ ಕೂಟದಲ್ಲೇ ಡಬಲ್ಸ್ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ

Team Udayavani, Jan 18, 2020, 12:53 PM IST

ಹೋಬರ್ಟ್: ಎರಡು ವರ್ಷಗಳ ಬ್ರೇಕ್ ನ ನಂತರ ಮತ್ತೆ ಟೆನ್ನಿಸ್ ಗೆ ಮರಳಿದ ಭಾರತದ ತಾರೆ ಸಾನಿಯಾ ಮಿರ್ಜಾ ಮೊದಲ ಕೂಟದಲ್ಲೇ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ಹೋಬಾರ್ಟ್ ಡಬ್ಲ್ಯೂ ಟಿಎ ಅಂತಾರಾಷ್ಟ್ರೀಯ ಕೂಟದ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ನಾದಿಯಾ ಕಿಚೆನಾಕ್ ಜೋಡಿ ಪ್ರಶಸ್ತಿಗೆ ಮುತ್ತಿಕ್ಕಿತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಚೈನಾದ ಶಾಯ್ ಪೆಂಗ್ –ಶಾಯ್ ಜುಂಗ್ ಜೋಡಿಯನ್ನು ಎದುರಿಸಿದ ಇಂಡೋ- ಉಕ್ರೇನಿಯನ್ ಜೋಡಿ 6-4, 6-4 ಅಂತರದಿಂದ ಗೆಲುವು ಸಾಧಿಸಿತು.

ಸುಮಾರು ಒಂದು ಗಂಟೆ 21 ನಿಮಿಷ ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಸಾನಿಯಾ- ನಾಡಿಯಾ ಜೋಡಿ ನೇರ ಸೆಟ್ ಗಳ ಜಯ ಸಾಧಿಸಿತು.

2007ರಲ್ಲಿ ಬ್ರಿಸ್ಬೇನ್ ಅಂತಾರಾಷ್ಟ್ರೀಯ ಟ್ರೋಫಿಯೊಂದಿಗೆ ಆರಂಭವಾದ ಸಾನಿಯಾ ಡಬಲ್ಸ್ ಆಟದಲ್ಲಿ ಇದುವರೆಗೆ 42 ಪ್ರಶಸ್ತಿ ಗೆದ್ದಿದ್ದಾರೆ.

ಎರಡು ವರ್ಷಗಳ ಕಾಲ ಆಟದಿಂದ ಬ್ರೇಕ್ ಪಡೆದಿದ್ದ ಸಾನಿಯಾ ಮಿರ್ಜಾ 2018 ಮತ್ತು 2019ರ ಋತುವಿನಲ್ಲಿ ಕಣಕ್ಕಿಳಿದಿರಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ