ಮಂಗಳೂರು ಪ್ರಕರಣ: 2 ತಿಂಗಳಲ್ಲಿ 5 ಮೊಬೈಲ್ ಬಳಕೆ ಮಾಡಿದ್ದ ಶಾರೀಕ್!
Team Udayavani, Nov 29, 2022, 9:00 AM IST
ಮಂಗಳೂರು : ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಉಗ್ರ ಶಾರೀಕ್ ಮೊಬೈಲ್ ಬಳಕೆ, ದುರಸ್ತಿ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದ. ಇದರ ಬಗ್ಗೆ ತರಬೇತಿ ಕೂಡ ಪಡೆದುಕೊಂಡಿದ್ದ.
ಮೈಸೂರಿನಲ್ಲಿದ್ದಾಗ 2 ತಿಂಗಳುಗಳಲ್ಲಿ 5 ಮೊಬೈಲ್‌ಗಳನ್ನು ಬಳಸಿದ್ದ. ಮೊಬೈಲ್‌ಗಳಲ್ಲಿದ್ದ ದತ್ತಾಂಶಗಳನ್ನು ಅಳಿಸುತ್ತಿದ್ದ. ಬಳಿಕ ಆ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ. ಕೆಲವು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರ ಆದೇಶ ನಿರೀಕ್ಷೆ
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಇನ್ನೆರಡು ದಿನಗಳೊಳಗೆ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಎನ್‌ಐಎಗೆ ಹಸ್ತಾಂತರವಾಗುವ ನಿರೀಕ್ಷೆಯಿದೆ. ಈಗಾಗಲೇ ರಾಜ್ಯ ಸರಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. ಮುಂದಿನ ಹಂತವಾಗಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಅಧಿಕೃತ ಆದೇಶ ಹೊರಡಿಸಲಿದೆ. ಬಳಿಕ ಎನ್‌ಐಎ ಪ್ರಕರಣ ದಾಖಲಿಸಲಿದೆ.
ಇದನ್ನೂ ಓದಿ: “ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್ ಅಭಿಪ್ರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸರಿಂದ ತನಿಖೆ
ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ
ಬರಲಿದೆ ಕ್ಯೂಆರ್ ಕೋಡ್ ಆಧರಿತ ಕಾಯಿನ್ ವೆಂಡಿಂಗ್ ಮಷಿನ್
ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಸ್ಥಳೀಯರು