‘ಮರಾಠಾಸ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ 

Team Udayavani, Oct 20, 2017, 10:33 AM IST

ಮಹಾನಗರ : ಕರಾವಳಿ ಮರಾಠಾಸ್‌ ಸಂಘಟನೆಗಳು ನೆಹರೂ ಮೈದಾನಿನಲ್ಲಿ ಏರ್ಪಡಿಸಿದ್ದ ‘ಮರಾಠಾಸ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯದಲ್ಲಿ ಗ್ರೇಟ್‌ ಮರಾಠಾಸ್‌ ತಂಡವು ಆಕರ್ಷಕ ಪ್ರೀಮಿಯರ್‌ ಲೀಗ್‌ ಟ್ರೋಫಿ ಹಾಗೂ 1ಲಕ್ಷ ರೂ. ನಗದು ಪ್ರಶಸ್ತಿಯನ್ನು ಗೆದ್ದುಕೊಡಿತು.

ಶನಿವಾರ ಬಲಿಷ್ಠ ಛತ್ರಪತಿ ವಾರಿಯರ್, ಗ್ರೇಟ್‌ ಮರಾಠಾಸ್‌, ಮರಾಠ ಜಾಧವಾಸ್‌, ಕೆಕೆಎಂಪಿ, ಆರ್ಯನ್‌ ರೈಸಿಂಗ್‌ ಸ್ಟಾರ್‌, ಕಾಸರಗೋಡು ಮರಾಠ ಟೈಗರ್ ತಂಡಗಳ ಜತೆ ಲೀಗ್‌ ಪಂದ್ಯಾಟ ಆರಂಭಗೊಂಡಿತ್ತು.

ರವಿವಾರ ಸಂಜೆ ನಡೆದ ಸೆಮಿಫೈಲ್‌ ಪಂದ್ಯದಲ್ಲಿ ಆರ್ಯನ್ಸ್‌ ಮತ್ತು ಗ್ರೇಟ್‌ ಮರಾಠಾಸ್‌ ತಂಡ ಮುಖಾಮುಖೀಯಾಗಿ ಗ್ರೇಟ್‌ ಮರಾಠ ಫೈನಲ್‌ಗೇರಿದರೆ, ಛತ್ರಪತಿ ವಾರಿಯರ್ ಮತ್ತು ಕಾಸರಗೋಡು ಮರಾಠ ಟೈಗರ್ ಹಣಾಹಣಿಯಲ್ಲಿ ಕಾಸರಗೋಡು ಟೈಗರ್ ತಂಡ ಫೈನಲ್‌ ಪ್ರವೇಶಿಸಿತ್ತು. ಲೀಗ್‌ನಲ್ಲಿ 5 ಓವರ್‌ ಸೀಮಿತವಾದ ಪಂದ್ಯವನ್ನು ಕತ್ತಲಾದ ಕಾರಣ ಫೈನಲ್‌ನಲ್ಲಿ 4 ಓವರ್‌ಗೆ ಇಳಿಸಲಾಯಿತು.

ಫೈನಲ್ಸ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಾಸರಗೋಡು ಮರಾಠ ಟೈಗರ್ ತಂಡವು 4 ಓವರ್‌ಗಳಲ್ಲಿ 25 ರನ್‌ ಪೇರಿಸಿತು. ಅದನ್ನು ಬೆಂಬತ್ತಿದ ಗ್ರೇಟ್‌ ಮರಾಠ ತಂಡ 3.3 ಓವರ್‌ಗಳಲ್ಲೇ 26 ರನ್‌ ಗಳಿಸುವ ಮೂಲಕ ವಿಜಯ ಗಳಿಸಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾಸರಗೋಡು ಮರಾಠ ಟೈಗರ್ ತಂಡದ ವೈಭವ್‌ ಹಾಗೂ ಬೆಸ್ಟ್‌ ಬೌಲರ್‌ ಪ್ರಶಸ್ತಿಯನ್ನು ಅಶ್ವತ್ಥ್  ಚಂದ್ರಮಾನ್‌ ಪಡೆದರು.

ಸಮಾರೋಪದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್‌ ರಾವ್‌ ಪ್ರಶಸ್ತಿ ವಿತರಿಸಿದರು. ಬಿಜೆಪಿ ಮುಖಂಡ ವೇದವ್ಯಾಸ ಕಾಮತ್‌, ಬ್ರಿಜೇಶ್‌ ಚೌಟ, ಚಿತ್ರ ನಿರ್ಮಾಪಕ ತಾರಾನಾಥ ಶೆಟ್ಟಿ ಬೋಳಾರ್‌, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ದೇವೋಜಿ ರಾವ್‌ ಯಾದವ್‌, ಸಚಿನ್‌ ಮೊರಾಯ್‌, ಪ್ರದೀಪ್‌ಚಂದ್ರ ಜಾಧವ್‌, ಧರ್ಮರಾಜ್‌ ಜಾಧವ್‌, ದೀಪಕ್‌ ಚಂದ್ರಮಾನ್‌, ರಾಜ್‌ ಕುಮಾರ್‌ ಲಾಡ್‌, ಯತೀಶ್‌ ವಿ.ರಾವ್‌ ಲಾಡ್‌ ಉಪಸ್ಥಿತರಿದ್ದರು. ರೋಹಿತ್‌ ಉಳ್ಳಾಲ್‌ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ