ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ
Team Udayavani, May 21, 2022, 9:29 PM IST
ಬಂಟ್ವಾಳ : ಪಾಣೆಮಂಗಳೂರು ಗೂಡಿನಬಳಿಯ ನೇತ್ರಾವತಿ ಹಳೆಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಬಂಟ್ವಾಳದ ತ್ಯಾಗರಾಜನಗರ ನಿವಾಸಿ ಸವಿತಾ ಭಟ್(67) ಆತ್ಮಹತ್ಯೆ ಮಾಡಿಕೊಂಡವರು.
ಅವರು ಶನಿವಾರ ಮಧ್ಯಾಹ್ನದ ವೇಳೆಗೆ ಸೇತುವೆಯಿಂದ ನದಿಗೆ ಹಾರಿದ್ದು, ತತ್‌ಕ್ಷಣ ಸ್ಥಳೀಯ ಈಜುಪಟುಗಳು ಅವರನ್ನು ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ 155 ಪಾಸಿಟಿವ್ ವರದಿ: ಸೋಂಕಿನ ಪಾಸಿಟಿವ್ ದರ ಶೇ.77ಕ್ಕೆ ಏರಿಕೆ