ರೈಲು ನಿಲ್ದಾಣ ವಾಹನ ನಿಲುಗಡೆ ವ್ಯವಸ್ಥೆ

Team Udayavani, Jan 3, 2018, 2:57 PM IST

ನಗರ: ಕಬಕ -ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ನಿತ್ಯ ರೈಲು ಪ್ರಯಾಣಿಕರ ವಾಹನಗಳಿಗೆ ಮಾಡಲಾಗಿರುವ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ವಾಹನಗಳ ಸುರಕ್ಷತೆಯ ಕುರಿತು ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ. ಮಂಗಳೂರು ಸಹಿತ ವಿವಿಧ ಕಡೆಗಳಿಗೆ ಉದ್ಯೋಗಕ್ಕೆ ಹೋಗುವವರು ವಾಹನಗಳನ್ನು ಇಲ್ಲಿ ನಿಲ್ಲಿಸುತ್ತಾರೆ. ದಿನಂಪ್ರತಿ ಸುಮಾರು 50 ವಾಹನಗಳು ನಿಲುಗಡೆಗೊಳಿಸುತ್ತಿದ್ದು, ಪಾರ್ಕಿಂಗ್‌ ಶುಲ್ಕವನ್ನೂ ಪಾವತಿಸುತ್ತಾರೆ.

ಬೆಳಗ್ಗೆ ಶುಲ್ಕ ಸ್ವೀಕರಿಸುವ ಗುತ್ತಿಗೆದಾರರು ಮತ್ತೆ ಅಲ್ಲಿ ಇರುವುದಿಲ್ಲ. ವಾಹನಗಳ ಸುರಕ್ಷತೆಯ ಕುರಿತೂ ನಿಗಾ ವಹಿಸುವುದಿಲ್ಲ ಎನ್ನುವುದು ಪ್ರಯಾಣಿಕರ ಅಳಲು. ಕೆಲವು ದಿನಗಳ ಹಿಂದೆ ಇಲ್ಲಿ ನಿಲ್ಲಿಸಿದ ವಾಹನಗಳಿಂದ ಪೆಟ್ರೋಲ್‌ ಕಳವು ಮಾಡುವ, ವಾಹನವನ್ನೂ ಕಳವು ಮಾಡಿದ ಘಟನೆಗಳು ನಡೆದಿವೆ. ಆದರೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ಗುತ್ತಿಗೆದಾರರು ವಾಹನಗಳ ಸುರಕ್ಷತೆಯ ಕುರಿತು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎನ್ನುವುದು ಆರೋಪ.

ಹಿಂದೆ ಸುರಕ್ಷಿತವಾಗಿತ್ತು
ಕಬಕ ಪುತ್ತೂರು ರೈಲ್ವೇ ನಿಲ್ದಾಣ ಆದರ್ಶ ರೈಲ್ವೇ ನಿಲ್ದಾಣವಾಗಿ ಮೇಲ್ದರ್ಜೆಗೇರಿದ ಸಂದರ್ಭ ಅಭಿವೃದ್ಧಿ ಕೆಲಸಗಳನ್ನು ನಡೆಸಿದಾಗ ಪ್ರಯಾಣಿಕರ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಮೊದಲು ನಿಲ್ದಾಣದ ಬಳಿಯ ಅಶ್ವತ್ಥಕಟ್ಟೆಯ ಸುತ್ತಲೂ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಪಕ್ಕದಲ್ಲೇ ಅಂಗಡಿಗಳೂ ಇರುವುದರಿಂದ ವಾಹನಗಳು ಸುರಕ್ಷಿತವಾಗಿರುತ್ತಿದ್ದವು. ಆದರೆ ಪ್ರತ್ಯೇಕ ವ್ಯವಸ್ಥೆ ಮಾಡಿದರೂ ಆ ಸುರಕ್ಷತೆ ಇಲ್ಲ ಎನ್ನುವುದು ಸಾರ್ವಜನಿಕರ ಅಹವಾಲು.

ಸುರಕ್ಷತೆಯ ಆತಂಕ
ಬೆಳಗ್ಗಿನ ಪ್ಯಾಸೆಂಜರ್‌ ರೈಲಿನಲ್ಲಿ ಮಂಗಳೂರಿಗೆ ಉದ್ಯೋಗಕ್ಕಾಗಿ ತೆರಳುವುದರಿಂದ ವಾಹನವನ್ನು ನಿಲ್ಲಿಸುತ್ತೇವೆ. ಶುಲ್ಕ ಪಾವತಿಗೆ ಸಂಬಂಧಿಸಿದಂತೆ ತಮ್ಮದು ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಶುಲ್ಕ ಪಾವತಿಸಿಯೂ ನಮ್ಮ ವಾಹನಗಳು ಸುರಕ್ಷಿತವಾಗಿರುತ್ತವೆಯೇ? ಎಂಬ ಕುರಿತು ಆತಂಕ ಇದೆ. ಈ ಕುರಿತು ರೈಲ್ವೇ ಇಲಾಖೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು.
ಶ್ಯಾಮ ಶಾಸ್ತ್ರಿ
  ದೈನಂದಿನ ರೈಲು ಪ್ರಯಾಣಿಕ, ಪುತ್ತೂರು

ಸಿಸಿ ಕೆಮರಾ ಇಲ್ಲ
ರೈಲ್ವೇ ನಿಲ್ದಾಣದ ಬಳಿ ಸಿಸಿ ಕೆಮರಾ ವ್ಯವಸ್ಥೆ ಇದ್ದರೂ ಪಾರ್ಕಿಂಗ್‌ ಏರಿಯಾಗೆ ಈ ಕೆಮರಾದ ದೃಷ್ಟಿ ಹರಿಯುವುದಿಲ್ಲ. ಪಾವತಿ ಪಾರ್ಕಿಂಗ್‌ ಸ್ಥಳವನ್ನು ಬಿಟ್ಟು ನಿಲ್ದಾಣದ ಎದುರು ವಾಹನ ನಿಲ್ಲಿಸಿದರೆ ರೈಲ್ವೇ ಅಧಿಕಾರಿಗಳು ದಂಡ ವಿಧಿಸುತ್ತಾರೆ. ತತ್‌ಕ್ಷಣದ ನಿಲುಗಡೆ‌ಗೆ ಅವಕಾಶ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ