ಮೂಲಸೌಕರ್ಯಕ್ಕೆ 3 ವರ್ಷದಲ್ಲಿ 3 ಲಕ್ಷ ಕೋಟಿ ರೂ. ಸಾಲ ಗುರಿ : ರಾಜ್‌ಕಿರಣ್‌ ರೈ

ಉದಯವಾಣಿ ಸಂದರ್ಶನದಲ್ಲಿ "ನಾಬ್‌ಫಿಡ್‌' ಎಂಡಿ ರಾಜ್‌ಕಿರಣ್‌ ರೈ

Team Udayavani, Sep 6, 2022, 9:25 AM IST

ಮೂಲಸೌಕರ್ಯಕ್ಕೆ 3 ವರ್ಷದಲ್ಲಿ 3 ಲಕ್ಷ ಕೋಟಿ ರೂ. ಸಾಲ ಗುರಿ : ರಾಜ್‌ಕಿರಣ್‌ ರೈ

ಮಂಗಳೂರು: “ಹಣಕಾಸಿನ ಕೊರತೆ ಎದುರಿಸುವ ಮೂಲಸೌಕರ್ಯ ಯೋಜನೆಗಳನ್ನು ಆದ್ಯತೆಯಾಗಿರಿಸಿಕೊಂಡು ಬಂಡವಾಳ ಹೂಡಿಕೆಗೆ ನೆರವು ಒದಗಿಸುವುದೇ ಈ ಹೊಸ ಪರಿಕಲ್ಪನೆಯ ಉದ್ದೇಶ. ಮುಂದಿನ ಮೂರು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂ. ಮೊತ್ತದ ಸಾಲ ವಿತರಣೆ ಮಾಡುವ ಗುರಿ ಹೊಂದಿದೆ ನಾಬ್‌ಫಿಡ್‌.

ನ್ಯಾಶನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನ್‌ಫ್ರಾಸ್ಟಕ್ಚರ್‌ ಆ್ಯಂಡ್‌ ಡೆವಲಪ್‌ಮೆಂಟ್‌ (ನಾಬ್‌ಫಿಡ್‌) ಕೇಂದ್ರ ಸರಕಾರ ನೂತನವಾಗಿ ರಚಿಸಿರುವ ಸಂಸ್ಥೆ. ಬೃಹತ್‌ ಮೂಲ ಸೌಕರ್ಯ ಯೋಜನೆಗಳಿಗೆ ಬೆನ್ನಲುಬಾಗಿ ಇರಲೆಂಬಂತೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಒಂದು ವಿಶೇಷ ಸಂಗತಿಯೆಂದರೆ, ಈ ನೂತನ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಬ್ಬರೂ ಕರಾವಳಿಯವರು. ಅಧ್ಯಕ್ಷರಾಗಿ ಬ್ಯಾಂಕಿಂಗ್‌ ದಿಗ್ಗಜ ಉಡುಪಿ ಜಿಲ್ಲೆಯ ಕುಂದಾಪುರ ವಾಮನ ಕಾಮತ್‌ ಈ ಹಿಂದೆಯೇ ನೇಮಕವಾಗಿದ್ದಾರೆ. ಇತ್ತೀಚೆಗೆ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಜ್‌ ಕಿರಣ್‌ ರೈ ನೇಮಕವಾಗಿದ್ದಾರೆ. ಆಗಸ್ಟ್‌ 8ರಂದು ಅಧಿಕಾರ ಸ್ವೀಕರಿಸಿರುವ ರೈ ಅವರು, ಈ ಹಿಂದೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದವರು. ಈ ಹೊಸ ಸಂಸ್ಥೆಯ ಗುರಿ, ಉದ್ದೇಶ, ವೈಶಿಷ್ಟéಗಳ ಬಗ್ಗೆ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

– ಏನಿದು ನಾಬ್‌ಫಿಡ್‌, ಹೇಗೆ ಇದು ಇತರ ಬ್ಯಾಂಕ್‌ಗಳಿಂದ ಭಿನ್ನ?
ಗತಿಶಕ್ತಿ ಯೋಜನೆಯಡಿ ಪ್ರಧಾನಿಯವರು 110 ಲಕ್ಷ ಕೋಟಿ ರೂ.ನಷ್ಟು ದೊಡ್ಡ ಬಂಡವಾಳವನ್ನು ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಉದ್ದೇಶ ಹೊಂದಿದ್ದಾರೆ. ಇದು 5 ಟ್ರಿಲಿಯನ್‌ ಜಿಡಿಪಿ ಗುರಿ ತಲುಪುವ ಗುರಿಗೂ ಪೂರಕ. ಇವೆಲ್ಲ ಈಡೇರಲು ಹೆಚ್ಚಿನ ಬಂಡವಾಳ ಹರಿದು ಬರಲೇಬೇಕು. ಈಗಿನ ವ್ಯವಸ್ಥೆಯ ಸಾಮರ್ಥಯ ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾಬ್‌ಫಿಡ್‌ ನಂಥ ಮಹತ್ವದ ಬ್ಯಾಂಕ್‌ ಸ್ಥಾಪನೆಯಾಗಿದೆ. ಅಷ್ಟೇ ಅಲ್ಲ ಸರಕಾರ 25 ಸಾವಿರ ಕೋಟಿ ರೂ. ಬಂಡವಾಳ ನಿಧಿಯನ್ನೂ ನೀಡಿದೆ.

– ನಾಬ್‌ಫಿಡ್‌ ನ ತತ್‌ಕ್ಷಣದ ಗುರಿ ಹಾಗೂ ಕಾರ್ಯಗಳೇನು?
ಈಗಾಗಲೇ ಚೇರ್ಮನ್‌ ಆಗಿ ಬ್ಯಾಂಕಿಂಗ್‌ ದಿಗ್ಗಜ ಕೆ.ವಿ. ಕಾಮತ್‌ ಸಂಸ್ಥೆಗೆ ಒಂದು ರೂಪುರೇಖೆ ಹಾಕಿದ್ದಾರೆ. ಬ್ರಿಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ಸಾಕಷ್ಟು ಅನುಭವವುಳ್ಳವರು. ನಾವು ಅಧಿಕಾರಿ ವರ್ಗದವರನ್ನು ನೇಮಿಸಬೇಕು. ಸಂಸ್ಥೆಯ ನಿರ್ವಹಣ ವೆಚ್ಚವನ್ನು ಕನಿಷ್ಠವಾಗಿರಿಸಿಕೊಂಡು ನಮ್ಮ ಗುರಿ ಸಾಧಿಸಬೇಕಿದೆ. ಬೇರೆ ಖಾಸಗಿ, ಸಾರ್ವಜನಿಕ ರಂಗದ ಬ್ಯಾಂಕ್‌ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ನೇಮಿಸಿಕೊಳ್ಳಲಾಗುವುದು. ಒಟ್ಟಾರೆಯಾಗಿ ಎರಡು ತಿಂಗಳಲ್ಲಿ ಇನ್ನು ಎರಡು ತಿಂಗಳಲ್ಲಿ ನಾಬ್‌ಫಿಡ್‌ ಪೂರ್ಣವಾಗಿ ಚಟುವಟಿಕೆ ಆರಂಭಿಸಲಿದೆ.

ಇದನ್ನೂ ಓದಿ : ಸುಳ್ಯದಲ್ಲಿ ಭಾರೀ ಮಳೆ: ರಸ್ತೆ, ತೋಟ ಜಲಾವೃತ, ಜನಜೀವನ ಅಸ್ತವ್ಯಸ್ತ

– ಹೊಸ ಸಂಸ್ಥೆಯ ಕಾರ್ಯವೈಖರಿ ಹೇಗೆ?
ಪ್ರಸ್ತುತ ದೇಶದಲ್ಲಿ ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡುವವರಿಗೆ ದೀರ್ಘಾವಧಿ ಸಾಲ ಸೂಕ್ತವಾಗಿ ಸಿಗುತ್ತಿಲ್ಲ, ವಾಣಿಜ್ಯ ಬ್ಯಾಂಕ್‌ಗಳು ಗರಿಷ್ಠ 15 ವರ್ಷಕ್ಕಷ್ಟೇ ಹೆಚ್ಚು ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದು ಹಿನ್ನಡೆಯಾಗಿದೆ. ಹಾಗಾಗಿ 25-30 ವರ್ಷ ಅವಧಿಗೆ ತೀರಾ ಹೆಚ್ಚೆನಿಸದ ಬಡ್ಡಿದರದಲ್ಲಿ ಸಾಲ ನೀಡುವುದು, ಇದರೊಂದಿಗೆ ಇನ್‌ಫ್ರಾಸ್ಟ್ರಕ್ಚರ್‌ ಕ್ಷೇತ್ರದಲ್ಲಿ ಹೂಡಿಕೆಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಉದ್ದೇಶ. ಕೇವಲ ಸಾಲವಷ್ಟೇ ಅಲ್ಲ, ಈ ಕ್ಷೇತ್ರಕ್ಕೆ ಸಂಬಂಧಿಸಿ ಬಾಂಡ್‌ಗಳನ್ನು ಬಿಡುಗಡೆ ಮಾಡುವುದು ಹಾಗೂ ಅವುಗಳ ಮಾರಾಟಕ್ಕೆ
ಬೇಕಾದ ಮಾರುಕಟ್ಟೆ ಸೃಷ್ಟಿಸುವುದೂ ಸೇರಿದಂತೆ ಹಲವಾರು ಯೋಜನೆಗಳಿವೆ.

– ಮೂಲಸೌಕರ್ಯದಲ್ಲಿ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿದ್ದೀರಾ?
ಮುಖ್ಯವಾಗಿ ಸರಕಾರದ ಪಟ್ಟಿಯಲ್ಲಿ ಏಳೆಂಟು ಕ್ಷೇತ್ರಗಳಿವೆ. ಹೆದ್ದಾರಿ, ವಿದ್ಯುತ್‌ ಮಾರ್ಗ, ಗ್ಯಾಸ್‌ ಪೈಪ್‌ಲೈನ್‌, ರೈಲ್ವೇ, ಒಳನಾಡು ಜಲಮಾರ್ಗ ನಿರ್ಮಾಣ. ವಿಶೇಷವಾಗಿ ಒಳನಾಡು ಜಲಮಾರ್ಗಕ್ಕೆ ಹೆಚ್ಚು ಅವಕಾಶಗಳಿವೆ. ಇವೆಲ್ಲಗಳನ್ನೂ ಗುರಿಯಾಗಿಸಿಕೊಂಡು ಕಾರ್ಯ ಯೋಜನೆ ರೂಪಿಸಲಾಗುವುದು.

– ಸದ್ಯಕ್ಕೆ ನಿಮ್ಮ ಮುಂದೆ ಇರುವ ಸವಾಲು?
ಗ್ರೀನ್‌ಫೀಲ್ಡ್‌ ಯೋಜನೆಗಳು (ಹೊಸ ಯೋಜನೆ) ಸುಲಭದಲ್ಲಿ ಬಂಡವಾಳ ಆಕರ್ಷಿಸುವುದಿಲ್ಲ, ಯಾಕೆಂದರೆ ಅವುಗಳಿಗೆ ಭೂಸ್ವಾಧೀನ, ಪರಿಸರ ಕ್ಲಿಯರೆನ್ಸ್‌ ಇತ್ಯಾದಿ ಅಡ್ಡಿಗಳಿರುತ್ತವೆ. ಈಗೀಗ ಇದು ಸುಧಾರಣೆಯಾಗುತ್ತಿದೆ. ಇದನ್ನು ವಿದೇಶೀ ಹೂಡಿಕೆದಾರರಿಗೆ ಮನದಟ್ಟು ಮಾಡಿ ಭಾರತದತ್ತ ಬಂಡವಾಳ ಹೂಡಿಕೆ ಮಾಡುವಂತೆ ಮಾಡುವುದೇ ಸದ್ಯದ ಸವಾಲು.

– ಕೆ.ವಿ. ಕಾಮತ್‌, ನೀವು ಇಬ್ಬರೂ ಕರಾವಳಿಯವರು… ಅವರೊಂದಿಗೆ ಅನುಭವ ಹೇಗಿದೆ ?
ಕೆ.ವಿ. ಕಾಮತ್‌ರೊಂದಿಗೆ ಬಹಳಷ್ಟು ಸಮಾಲೋಚನೆ ಆಗಿದೆ. ಸಂಸ್ಥೆಗೊಂದು ಪ್ರಭಾವಿ ಮುಖ ಬೇಕು, ಕಾಮತ್‌ ಅವರಿದ್ದರೆ ನಾವು ಯಾರು ಎಂದು ಪರಿಚಯ ಮಾಡಬೇಕಾದ ಅಗತ್ಯವೇ ಇಲ್ಲ. ಅವರ ಮಾರ್ಗದರ್ಶನ ಸಾಕಷ್ಟು ಸಿಗಲಿದೆ.

– ನಾಬ್‌ಫಿಡ್‌ಗೆ ನಿಮ್ಮ ಆಯ್ಕೆಯಾದಾಗ ಹೇಗೆನಿಸಿತು?
– ಬಹಳ ಸಂತೋಷ ಅಯಿತು. 5 ವರ್ಷ ಯೂನಿಯನ್‌ ಬ್ಯಾಂಕ್‌ ಎಂಡಿ ಆಗಿದ್ದೆ, ಎನ್‌ಪಿಎ ಜಾಸ್ತಿ ಇತ್ತು, ಬಳಿಕ ಕಾರ್ಪೊರೇಶನ್‌ ಬ್ಯಾಂಕ್‌ ಯುಬಿಐ ಜತೆ ವಿಲೀನ ಆಯಿತು. ಕೊನೆಯಲ್ಲಿ ಬ್ಯಾಂಕ್‌ ದೃಢವಾದ ಸ್ಥಿತಿಗೆ ಏರಿತು. ಇದೊಂದು ಹೆಮ್ಮೆ ಇದೆ. ಅದಕ್ಕಾಗಿ ನನಗೆ ಈ ಹೊಸ ಹುದ್ದೆಯನ್ನು ಬಹುಮಾನದ ರೂಪದಲ್ಲಿ ಕೊಟ್ಟಿದ್ದಾರೆ ಎಂದು ಅನಿಸುತ್ತದೆ.

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.