ಮಾತಿನಮತ,ಸಂದರ್ಶನ :ಕೆ.ಅಮರನಾಥ ಶೆಟ್ಟಿ,ಮಾಜಿ ಶಾಸಕ,ಮೂಡಬಿದಿರೆಕ್ಷೇತ್ರ

Team Udayavani, Mar 5, 2018, 2:12 PM IST

5-March-11.jpg

ಅಭಿವೃದ್ಧಿ – ಶಾಸಕರೊಂದಿಗೆ ಸಂಸದರೂ ಗಮನಹರಿಸಲಿ

ಮೂರು ಬಾರಿ ಸಚಿವರಾಗಿದ್ದಿರಿ. ಕ್ಷೇತ್ರಕ್ಕೆ ತಮ್ಮ ಕೊಡುಗೆ…?
 ಮೂಡಬಿದಿರೆ, ಮೂಲ್ಕಿ ಎರಡೂ ಕಡೆಗಳಲ್ಲಿ ನಾಡಕಚೇರಿ, ಕೈಗಾರಿಕಾ ಪ್ರಾಂಗಣ, ಸಬ್‌ ಟ್ರೆಶರಿ, ಮೊರಾರ್ಜಿ ದೇಸಾಯಿ ಶಾಲೆ, ಪ್ರತಿ ಗ್ರಾಮದಲ್ಲೂ ನಜೀರ್‌ ಸಾಬ್‌ ಕಾಲದಲ್ಲಿ ಬೋರ್‌ವೆಲ್‌, ಓವರ್‌ಹೆಡ್‌ ಟ್ಯಾಂಕ್‌, ಮೂಡಬಿದಿರೆಗೆ ಪುಚ್ಚಮೊಗರು ಫಲ್ಗುಣಿ ಹೊಳೆಯಿಂದ ನೀರು ಪೂರೈಕೆ, ಅಶ್ವತ್ಥಪುರ ಕಿಜನಬೆಟ್ಟು , ಶಿರ್ತಾಡಿ-ಪೆರಾಡಿ, ಮಾನಂಪಾಡಿ, ಇರುವೈಲು ಸೇತುವೆಗಳು, ವೆಂಟೆಡ್‌ ಡ್ಯಾಂ …. ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ.

ಕಳೆದ 2 ದಶಕಗಳಲ್ಲಿ ಶಾಸಕರಾಗಿದ್ದವರ ಸಾಧನೆ ಬಗ್ಗೆ …?
ಸಾಕಷ್ಟು ಕೆಲಸ ಆಗಿದೆ, ಇಲ್ಲವೆಂದಲ್ಲ. ಆದರೆ ಬಹುಕಾಲದಿಂದ ನಿರೀಕ್ಷಿಸುತ್ತಿರುವ, ಮೂಡಬಿದಿರೆಯ ಒಳಚರಂಡಿ ಯೋಜನೆ ಇನ್ನೂ ಸರ್ವೇ ಹಂತದಲ್ಲಿ ಉಳಿದಿದೆ. ಯಾವತ್ತೋ ಆಗಬೇಕಿತ್ತು. ಮಾರುಕಟ್ಟೆ ನಿರ್ಮಾಣಕ್ಕೆ ನಾನು ಅಧ್ಯಕ್ಷನಾಗಿರುವ ಮೂಡಬಿದಿರೆ ಸರ್ವಿಸ್‌ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ 5 ಕೋ.ರೂ. ವರೆಗೆ ಸಾಲ ಕೊಡುವ ಪ್ರಸ್ತಾವನೆಗೆ ಶಾಸಕ ಅಭಯಚಂದ್ರ ಒಮ್ಮೆ ಒಪ್ಪಿದ್ದರೂ ಮುಂದಿನ ಬೆಳವಣಿಗೆಯಲ್ಲಿ ಖಾಸಗಿ ವಲಯದಿಂದ ನಿರ್ಮಾಣವಾಗುವ ಹಂತಕ್ಕೆ ಹೋಯಿತು. ಬೈಪಾಸ್‌ಗೆಂದು ಗುರುತಿಸಿದ ಜಾಗದಲ್ಲಿ ರಿಂಗ್‌ ರೋಡ್‌ ಆಗಿದೆ. ವಿದ್ಯಾಗಿರಿಯ ಹಿಂಭಾಗದಿಂದ ಹೊರಡು ಅಲಂಗಾರು ಸೇರುವ ಹೊಸದಾದ ಬೈಪಾಸ್‌ ರಚನೆಯ ಕುರಿತಾದ ಪ್ರಸ್ತಾವ ಅಸ್ಪಷ್ಟವಾಗಿ ಉಳಿದುಕೊಂಡಿದೆ; ಶಾಸಕರೊಂದಿಗೆ ಸಂಸದರೂ ಈ ಬಗ್ಗೆ ಗಮನಹರಿಸಬೇಕು.

ಮೂಡಬಿದಿರೆ ತಾಲೂಕು ರಚನೆ ?
– ವಿವಿಧ ಸಮಿತಿಗಳ ಮುಂದೆ ಈ ಅಹವಾಲಿಗೆ ಬೇಕಾದ ಸಮರ್ಥನೆಗಳನ್ನು ಮಂಡಿಸಿದ್ದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ತಾಲೂಕು ಘೋಷಿಸಿದರು. ಹಣ ಇಡಲಿಲ್ಲ. ಮುಂದೆ ಸಿದ್ದರಾಮಯ್ಯ ಘೋಷಿಸಿದರು. ಒಂದೊಂದು ತಾಲೂಕು ರಚನೆಗೆ 10 ಕೋಟಿ ರೂ. ಬೇಕಾದೀತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಮೊತ್ತ ಇರಿಸಿಲ್ಲ. ನಿರಾಶೆಯಾಗಿದೆ.

ರಾಜಕೀಯ – ಸಹಕಾರಿ ರಂಗ ಎರಡನ್ನೂ ಹೇಗೆ ನಿಭಾಯಿಸುತ್ತ ಇದ್ದೀರಿ.
ಸಹಕಾರಿ ರಂಗದಲ್ಲಿ ಪಕ್ಷ ರಾಜಕೀಯ ತಂದಿಲ್ಲ. ಮೂಡಬಿದಿರೆ ಸೊಸೈಟಿ ಬ್ಯಾಂಕಲ್ಲಿ ಕಳೆದ 50 ವರ್ಷಗಳಿಂದ ಸಕ್ರಿಯನಾಗಿ, ಸುದೀರ್ಘ‌ ಕಾಲ ಅಧ್ಯಕ್ಷನಾಗಿದ್ದುಕೊಂಡು, ಇದನ್ನು ಬ್ಯಾಂಕಾಗಿಯೇ ಉಳಿಸಿಕೊಂಡು ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನಮಾನ ಗಳಿಸುವಲ್ಲಿ ಪರಿಶ್ರಮಿಸಿದ್ದೇನೆ.

ಈ ಬಾರಿ ಓಟಿಗೆ ನಿಲ್ಲುವಿರಾ ?
ಇನ್ನೂ ನಿರ್ಧಾರ ಆಗಿಲ್ಲ. ಏನಿದ್ದರೂ ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ.

„ಧನಂಜಯ ಮೂಡಬಿದಿರೆ

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.