ಇನ್ನೂ ಸುಧಾರಿಸಿಲ್ಲ ಮನೆಯವರ ಪರಿಸ್ಥಿತಿ


Team Udayavani, Sep 17, 2018, 10:20 AM IST

17-sepctember-3.jpg

ಪುತ್ತೂರು: ಜುಲೈ 6ರ ನಟ್ಟನಡು ರಾತ್ರಿ. ಹೆಬ್ಟಾರಬೈಲು ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿತ್ತು. ಮನೆ ಹಿಂಬದಿಯ ಬೃಹತ್‌ ಆವರಣ ಗೋಡೆ ಕುಸಿದು ಕೆಳಭಾಗದ ಮನೆಯನ್ನು ಸಂಪೂರ್ಣ ನಾಶ ಮಾಡಿತ್ತು. ಮನೆಯೊಳಗೆ ಮಲಗಿದ್ದ ಎರಡು ಜೀವಗಳು ಬೊಬ್ಬೆ ಹೊಡೆಯಲೂ ಅವಕಾಶ ಇಲ್ಲದಂತೆ ಕೊನೆಯುಸಿರೆಳೆದಿದ್ದರು.

ಅಜ್ಜಿ (ಪಾರ್ವತಿ), ಮೊಮ್ಮಗ (ಧನುಶ್‌) ಮೃತಪಟ್ಟವರು. ಪುತ್ತೂರು ಪೇಟೆಯ ಸಮೀಪದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೊಂದಿ ಕೊಂಡಂತೆ ಇರುವ ಸಾಲ್ಮರ ಹೆಬ್ಟಾರಬೈಲಿನಲ್ಲಿ ಘಟನೆ ಸಂಭವಿಸಿತ್ತು. ಈ ಘಟನೆಗೆ ನಡೆದು ಎರಡು ತಿಂಗಳು ಸರಿದಿದೆ. ಮನೆಯವರ ಪರಿಸ್ಥಿತಿ ಈಗಲೂ ಅಂದಿನಂತೆಯೇ ಇದೆ. ಸೂತಕದ ಛಾಯೆಯಿಂದ ಇನ್ನೂ ಅವರು ಹೊರಬಂದಂತಿಲ್ಲ.

ವ್ಯವಸ್ಥೆ: ಭರವಸೆ ಮಾತ್ರ
ದುರಂತಕ್ಕೆ ಸಂಬಂಧಿಸಿ 10.90 ಲಕ್ಷ ರೂ. ಪರಿಹಾರದ ಚೆಕ್‌ ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದು, ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಾಗಿದೆ. ಶಾಸಕರು ತಾತ್ಕಾಲಿಕ ಮನೆ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಅದೂ ಕೈಗೂಡಿಲ್ಲ. ಸದ್ಯ ಲಕ್ಷ್ಮೀ ದೇವಿ ಬೆಟ್ಟದವರು ನೀಡಿದ ಒಂದು ಕೋಣೆಯಲ್ಲಿ ಸಂತ್ರಸ್ತ ಮನೆ ಮಂದಿ ಆಶ್ರಯ ಪಡೆದಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಶಾಸಕ ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಅಪರ ಜಿಲ್ಲಾಧಿಕಾರಿ ಕುಮಾರ್‌ ಮೊದಲಾದವರು ಭೇಟಿ ನೀಡಿದ್ದರು. ಯಾರು ಬಂದರೂ ಪರಿಸ್ಥಿತಿ ಸುಧಾರಿಸಿಲ್ಲ.

ಮೇಲ್ಭಾಗದ ಎರಡು ಮನೆಯವರು ಈ ಆವರಣ ಗೋಡೆಯನ್ನು ನಿರ್ಮಿಸಿದ್ದರು. 90 ಡಿಗ್ರಿ ಕೋನದಲ್ಲಿ ಆವರಣ ಗೋಡೆ ಕಟ್ಟುವುದು ಅಪಾಯಕಾರಿ ಎಂದು ಆಗಲೇ ಹೇಳಲಾಗಿತ್ತು. ಇದಕ್ಕೆ ತಲೆಕೆಡಿಸಿಕೊಳ್ಳದ ಅವರು ಅಪಾಯ ಸಂಭವಿಸಿದರೆ ನಾವೇ ಜವಾಬ್ದಾರರು ಎಂದು ಹೇಳಿದ್ದರಂತೆ. ಆದರೆ ಆ ಎರಡೂ ಮನೆಯವರು ಇದುವರೆಗೆ ಸ್ಪಂದಿಸಿಲ್ಲವಂತೆ. ಮನೆ ಮೇಲ್ಭಾಗಕ್ಕೆ ಬಿದ್ದಿರುವ ಆವರಣ ಗೋಡೆ, ಪಿಲ್ಲರ್‌ ತೆರವು ಮಾಡಿಕೊಡಿ ಎಂದು ನಗರಸಭೆಗೆ 2 ಬಾರಿ ಮನವಿ ನೀಡಿದರೂ ಸ್ಪಂದನೆ ಇಲ್ಲ ಎಂದು ಮನೆಮಂದಿ ಅಳಲು ತೋಡಿಕೊಳ್ಳುತ್ತಾರೆ.

ಮನೆಯವರ ಸ್ಥಿತಿ
ದುರಂತ ಸಂಭವಿಸುವ 1 ತಿಂಗಳ ಮೊದಲು ಮನೆ ಯಜಮಾನ ವಿಶ್ವನಾಥ್‌ ಸಾಲ್ಯಾನ್‌ ಮೃತಪಟ್ಟಿದ್ದರು. ಈ ಶೋಕದ ನಡುವೆಯೇ ಮತ್ತೊಂದು  ದುರಂತ ಬಂದೆರಗಿತ್ತು. ಘಟನೆ ಸಂಭವಿಸುವಾಗ ಮನೆಯೊಳಗೆ ಒಟ್ಟು 8 ಮಂದಿ ನಿದ್ರಿಸುತ್ತಿದ್ದರು. ಇಬ್ಬರು ದುರಂತಕ್ಕೆ ಬಲಿಯಾಗಿದ್ದರು. ಮಗನನ್ನು ಕಳೆದುಕೊಂಡ ಮಹೇಶ್‌-ಶಾಲಿನಿ ದಂಪತಿ ಮಾನಸಿಕ ಆಘಾತದಿಂದ ಇನ್ನೂ ಹೊರಬಂದಿಲ್ಲ.

ಹೀಗಿದೆ ಮನೆ
ಎರಡಂತಸ್ತಿನಷ್ಟು ಎತ್ತರದ ಆವರಣ ಗೋಡೆ ಮನೆಯನ್ನು ಪೂರ್ಣವಾಗಿ ನಾಶ ಪಡಿಸಿತು. ಅಳಿದುಳಿದ ಹೆಂಚನ್ನು ತೆಗೆದು ಇಡಲಾಗಿದೆ. ದೈವ, ದೇವರನ್ನು ಒಂದು ಸಣ್ಣ ತಾತ್ಕಾಲಿಕ ಶೆಡ್‌ನ‌ಲ್ಲಿ ಇಡಲಾಗಿದೆ. ಮನೆಮಂದಿ ಹೊಸ ಜೀವನ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಕ್ಯಾಂಟೀನ್‌ ದುಡಿಮೆ ಮತ್ತೆ ಆರಂಭಿಸಿದ್ದಾರೆ.

ದೂರು ನೀಡಿದರೂ ಕ್ರಮವಿಲ್ಲ
ಮನೆ ಹಿಂದಿನ ಬರೆ ಮತ್ತೆ ಬೀಳುವ ಸ್ಥಿತಿಯಲ್ಲಿದೆ. ಇದನ್ನು ತೆಗೆಯದೇ ನಾವಲ್ಲಿ ಕುಳಿತುಕೊಳ್ಳುವುದು ಹೇಗೆ? ಹೆಂಚನ್ನು ತೆಗೆದು ಬದಿಗಿಟ್ಟಿದ್ದೇವಷ್ಟೇ. ಬರೆಯ ಮೇಲೆ ಶೌಚಾಲಯ ಪಿಟ್‌ ಇರುವುದರಿಂದ ಇನ್ನೂ ಅಪಾಯವಿದೆ. ದುರಂತಕ್ಕೆ ಕಾರಣವಾದ ಮನೆಯವರ ವಿರುದ್ಧ ದೂರು ನೀಡಿದ್ದೇವೆ. ಇದುವರೆಗೆ ಯಾವುದೇ ಸ್ಪಂದನೆ ಇಲ್ಲ. ಪತ್ನಿ ಶಾಲಿನಿ ಇನ್ನೂ ಚೇತರಿಸಿಕೊಂಡಿಲ್ಲ. 
– ಮಹೇಶ್‌
ಸಂತ್ರಸ್ತ ಮನೆ ಯಜಮಾನ 

ದೂರು ದಾಖಲಿಸಲು ಹೇಳಿರುವೆ
ದುರಂತಕ್ಕೆ ಕಾರಣವಾದ ಎರಡೂ ಮನೆಗಳ ವಿರುದ್ಧ ದೂರು ದಾಖಲಿಸಲು ನಗರಸಭೆ ಪೌರಾಯುಕ್ತೆಗೆ ಸೂಚಿಸಿದ್ದೇನೆ. ಬಿದ್ದಿರುವ ಆವರಣ ಗೋಡೆ, ಮಣ್ಣನ್ನು ತೆರವು ಮಾಡಿ ಕೊಡಲು ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳಬಹುದಷ್ಟೇ.
– ಎಚ್‌.ಕೆ. ಕೃಷ್ಣಮೂರ್ತಿ
ಸಹಾಯಕ ಆಯುಕ್ತರು, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.