ಮೈತ್ರಿ ಸರ್ಕಾರ ಇರುತ್ತೆ, ಸಿಎಂ ಬದಲಾಗಬಹುದು: ರಾಮಪ್ಪ

Team Udayavani, Jul 12, 2019, 5:44 AM IST

ದಾವಣಗೆರೆ: ಮೈತ್ರಿ ಸರಕಾರದಲ್ಲಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಹರಿಹರ ಶಾಸಕ ಎಸ್‌.ರಾಮಪ್ಪಅವರು, ಸಮ್ಮಿಶ್ರ ಸರಕಾರಕ್ಕೆ ಏನೂ ತೊಂದರೆ ಇಲ್ಲ. ಆದರೆ, ಮುಖ್ಯಮಂತ್ರಿ ಬದಲಾಗಬಹುದು ಎಂದು ಹೊಸಬಾಂಬ್‌ ಸಿಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ನ ಕೆಲ ಶಾಸಕರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಉಳಿಯುತ್ತದೆ. ಆದರೆ,ಮುಖ್ಯಮಂತ್ರಿ ಬದಲಾಗಬಹುದು ಎಂದರು.

ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಯತ್ನ ನಡೆಸುತ್ತಲೇ ಇದೆ. ನನಗೆ ಈಗಲೂ ಬಿಜೆಪಿಗೆ ಬರುವಂತೆ ದೂರವಾಣಿ ಕರೆ ಬರುತ್ತಿದೆ. ಆದರೆ, ಪಕ್ಷಕ್ಕೆ ನಿಷ್ಠನಾಗಿದ್ದು, ಕಾಂಗ್ರೆಸ್‌ ಬಿಡಲ್ಲ. ಮೊದಲಿನಿಂದಲೂ ಬಿಜೆಪಿಗೆ ಬರುವಂತೆ ಒತ್ತಾಯ ಮಾಡುತ್ತಲೇ ಇದ್ದಾರೆ. ನಾನು ಪಕ್ಕಾ ಕಾಂಗ್ರೆಸ್‌. ಹಾಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಬಿಜೆಪಿಯವರಿಗೆ ಹೇಳಿದ್ದೇನೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ