Udayavni Special

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ


Team Udayavani, May 7, 2021, 10:30 PM IST

covid effect

ದಾವಣಗೆರೆ: ಕೊರೊನಾ ಎರಡನೇ ಅಲೆ ಪ್ರಾರಂಭದನಂತರ ಬೆಂಗಳೂರು ಒಳಗೊಂಡಂತೆ ಇತರೆಭಾಗಗಳಲ್ಲಿದ್ದ 1550 ಕ್ಕೂ ಹೆಚ್ಚು ಜನ ಜಿಲ್ಲೆಯವಿವಿಧ ಗ್ರಾಮಗಳಿಗೆ ಮರಳಿದ್ದಾರೆ. ಬೆಂಗಳೂರು ಒಳಗೊಂಡಂತೆ ಇತರೆ ಭಾಗಗಳಲ್ಲಿನಜನ ವಾಪಸ್‌ ಆಗಿರುವ ಬಗ್ಗೆ ತಾಲೂಕು ಆಡಳಿತ,ಗ್ರಾಮ ಪಂಚಾಯತ್‌ಗಳು ಸಂಗ್ರಹಿಸಿರುವಮಾಹಿತಿ ಅನ್ವಯ ಈ ವರೆಗೆ 1550 ಕ್ಕೂ ಹೆಚ್ಚುಜನ ಪತ್ತೆಯಾಗಿದ್ದಾರೆ. ಇತರೆ ಭಾಗಗಳಿಂದಗ್ರಾಮೀಣ ಭಾಗಕ್ಕೆ ಬಂದವರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ದಾವಣಗೆರೆ ತಾಲೂಕಿಗೆ 276, ಹೊನ್ನಾಳಿಗೆ406, ಜಗಳೂರಿಗೆ 149, ಚನ್ನಗಿರಿಗೆ 333, ಹರಿಹರತಾಲೂಕಿನ ವಿವಿಧ ಗ್ರಾಮಗಳಿಗೆ 386 ಜನರುವಾಪಾಸ್‌ ಆಗಿದ್ದಾರೆ. ದಾವಣಗೆರೆ ತಾಲೂಕಿನ ವಿವಿಧಗ್ರಾಮಗಳಿಗೆ 296 ಜನ ಹಿಂತಿರುಗಿದ್ದಾರೆ. ಕೊರೊನಾಪರೀಕ್ಷೆ ಸಂದರ್ಭದಲ್ಲಿ ತಾಲೂಕಿನ ಬೇತೂರುಗ್ರಾಮದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.ಸರ್ಕಾರದ ಮಾರ್ಗಸೂಚಿ ಅನ್ವಯ ಹೋಂಐಸೋಲೇಷನ್‌ಗೆ ಒಳಪಡಿಸಿ ನಿಗಾ ವಹಿಸಲಾಗಿದೆ.

ಹರಿಹರ ತಾಲೂಕಿನ ಬೆಳ್ಳೊಡಿ ಗ್ರಾಮಕ್ಕೆ40, ಭಾನುವಳ್ಳಿಗೆ 30, ದೇವರಬೆಳಕೆರೆಗೆ 40,ಹೊಳೆಸಿರಿಗೆರೆಗೆ 37, ಕೆ. ಬೇವಿನಹಳ್ಳಿಗೆ 14,ಉಕ್ಕಡಗಾತ್ರಿಗೆ 5, ಬಿಳಸನೂರಿಗೆ 27, ನಂದಿಗುಡಿಗೆ12, ಮಲೇಬೆನ್ನೂರುಗೆ 58, ಹರ್ಲಾಪುರಕ್ಕೆ 70,ಬೆಂಕಿನಗರಕ್ಕೆ 53 ಜನ ಹಿಂತಿರುಗಿದ್ದಾರೆ. ಕೋವಿಡ್‌ಪರೀಕ್ಷೆಯಲ್ಲಿ ಮಲೇಬೆನ್ನೂರುನಲ್ಲಿ ಮೂವರು,ಹರ್ಲಾಪುರ ಮತ್ತು ಬೆಳ್ಳೊಡಿಯಲ್ಲಿ ತಲಾ ಒಬ್ಬರಲ್ಲಿಸೋಂಕು ಇರುವುದು ದೃಢಪಟ್ಟಿದೆ.ಹೊನ್ನಾಳಿ ತಾಲೂಕಿಗೆ ವಿವಿಧ ಭಾಗಗಳಿಂದ406 ಜನ ಬಂದಿದ್ದಾರೆ.

ಅವರಲ್ಲಿ ಬೆಂಗಳೂರಿನಿಂದಬಂದವರ ಸಂಖ್ಯೆಯೇ ಹೆಚ್ಚು. 306 ಜನಬೆಂಗಳೂರಿನಿಂದ ವಿವಿಧ ಗ್ರಾಮಗಳಿಗೆಆಗಮಿಸಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ಸೋಗಿಲುಗ್ರಾಮದ 8 ಜನರಲ್ಲಿ ಸೋಂಕು ಪತ್ತೆಯಾಗಿದೆ.ಜಗಳೂರು ತಾಲೂಕಿನ ಗ್ರಾಮಗಳಿಗೆ 149 ಜನಹಿಂತಿರುಗಿದ್ದು, ಪರೀಕ್ಷೆ ನಡೆಸಿದಾಗ ಈ ವರೆಗೆಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ 333ಜನ ವಾಪಸ್‌ ಆಗಿದ್ದು, 6 ಮಂದಿಗೆ ಕೊರೊನಾಇರುವುದು ದೃಢಪಟ್ಟಿದೆ.  ಸೋಂಕು ಕಂಡುಬಂದವರನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರಹೋಂ ಐಸೋಲೇಷನ್‌ ಒಳಗೊಂಡಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ.

ಡಂಗುರದ ಮೂಲಕ ಪ್ರಚಾರ: ಬೆಂಗಳೂರುಒಳಗೊಂಡಂತೆ ವಿವಿಧೆಡೆಯಿಂದ ಹಳ್ಳಿಗಳಿಗೆಬಂದವರ ಬಗ್ಗೆ ಮಾಹಿತಿ ನೀಡುವಂತೆ ಬಹುತೇಕಎಲ್ಲ ಗ್ರಾಮಗಳಲ್ಲಿ ಡಂಗುರದ ಮೂಲಕ ಪ್ರಚಾರನಡೆಸಲಾಗುತ್ತಿದೆ. ಹೊರಗಡೆ ಬಂದವರು ಸಹಸ್ವಯಂ ಪ್ರೇರಣೆಯಿಂದ ಕೋವಿಡ್‌ ಪರೀಕ್ಷೆಗೆಒಳಗಾಗಬೇಕು. ಹಳ್ಳಿಗಳಿಗೆ ವಾಪಾಸ್ಸಾದ ನಂತರ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಗ್ರಾಮಗಳಲ್ಲಿನ ಕಾರ್ಯಪಡೆಯ ಮೂಲಕ ಬೇರೆಕಡೆಯಿಂದ ಬಂದಂತಹವರ ಮಾಹಿತಿ ಸಂಗ್ರಹಿಸುವಕೆಲಸವೂ ನಡೆಯುತ್ತಿದೆ.

ಕೋವಿಡ್‌ ಸೋಂಕು ಹೆಚ್ಚು ಇರುವ ರಾಜ್ಯ,ಜಿಲ್ಲೆಗಳಿಂದ ಊರಿಗೆ, ಓಣಿಗೆ, ಮನೆ ಪಕ್ಕಕ್ಕೆಯಾರಾದರೂ ಬಂದಿದ್ದಲ್ಲಿ, ಅಂತಹವರಲ್ಲಿರೋಗ ಲಕ್ಷಣಗಳಿರುವುದು ಕಂಡುಬಂದಲ್ಲಿಕೂಡಲೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು.ಅಂತಹವರಿಗೆ ಕೋವಿಡ್‌ ಟೆಸ್ಟ್‌ ಮಾಡಿ, ಅಗತ್ಯಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕರುಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಡಳಿತಸಾರ್ವಜನಿಕರಲ್ಲಿ ಮನವಿ ಮಾಡಿದೆ.

ರಾ. ರವಿಬಾಬು

ಟಾಪ್ ನ್ಯೂಸ್

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

incident held at kapu

ಪೊಲಿಪು : ಮೂರು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-10

ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ: ಸಚಿವ ಈಶ್ವರಪ್ಪ

Davanagere

ಕಾರ್ಮಿಕರ ಕೊರತೆಗೆ ಚೆಲ್ಲು ಭತ್ತ ಪದ್ಧತಿ ಪರಿಹಾರ

19-12

ಹೊನ್ನಾಳಿ-ನ್ಯಾಮತಿಯಲ್ಲಿ ಉತ್ತಮ ಮಳೆ

19-11

ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಬಳಕೆ: ಜನರ ಆಕ್ರೋಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 120 ಕೇಂದ್ರ, 22,561 ವಿದ್ಯಾರ್ಥಿಗಳು!

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 120 ಕೇಂದ್ರ, 22,561 ವಿದ್ಯಾರ್ಥಿಗಳು!

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

20-13

ಎಚ್‌. ವಿಶ್ವನಾಥ್‌ ಪಕ್ಷ ಬಿಡಬಾರದು: ಈಶ್ವರಪ್ಪ

20-12

ಟಿಬಿ ಡ್ಯಾಂ ಒಳ ಹರಿವು ಹೆಚ್ಚಳ

covid news

ಮಂಡ್ಯ ಅನ್‌ಲಾಕ್‌, ಹಾಸನ ಲಾಕ್

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

covid news

ಕೋವಿಡ್‌ಗೆ ಬಲಿ ಆದ ರೈತರ ಕೈಹಿಡಿದ ಅಪೆಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.