Udayavni Special

ಇಎಸ್‌ಐ ಆಸ್ಪತ್ರೆಯಿನ್ನು ಕೋವಿಡ್‌ ಸೆಂಟರ್‌


Team Udayavani, May 6, 2021, 9:44 PM IST

6-9

ದಾವಣಗೆರೆ: ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಎಸ್‌ಐ ಆಸ್ಪತ್ರೆಯಲ್ಲಿ 80 ಬೆಡ್‌ ವ್ಯವಸ್ಥೆಯ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬುಧವಾರ ಪರಿಶೀಲನೆ ನಡೆಸಿದರು.

ಇಎಸ್‌ಐ ಆಸ್ಪತ್ರೆಯಲ್ಲಿ 40 ಆಕ್ಸಿಜನ್‌ ಮತ್ತು 40 ಐಸೊಲೇಶನ್‌ ಬೆಡ್‌ಗಳು ಸೇರಿದಂತೆ ಒಟ್ಟು 80 ಬೆಡ್‌ಗಳ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಅಗತ್ಯತೆಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಆಸ್ಪತ್ರೆ ಅಧೀಕ್ಷಕ ಡಾ| ಬಸವನಗೌಡ ಮಾತನಾಡಿ, ಆಕ್ಸಿಜನ್‌ ಮತ್ತು ವೆಂಟಿಲೇಟರ್‌ ವ್ಯವಸ್ಥೆಗೆ 19 ಪಾಯಿಂಟ್‌ ಇವೆ. 2 ಕಡೆ ಲೀಕೇಜ್‌ ಆಗುತ್ತಿದ್ದು, ಇನ್ನೊಬ್ಬ ಟೆಕ್ನಿಷಿಯನ್‌ ಅಗತ್ಯವಿದೆ. ಬೆಡ್‌, ಸಿಲಿಂಡರ್‌, ಫ್ಯಾನ್‌ ಸೇರಿದಂತೆ ಮೂಲ ಸೌಕರ್ಯ, ಮಾನವ ಸಂಪನ್ಮೂಲ ಕೊರತೆ ಇದ್ದು ಸಾಧ್ಯವಾದಷ್ಟು ಜಿಲ್ಲಾಡಳಿತಕ್ಕೆ ಸಹಾ ಯ ಮಾಡಲು ಬದ್ಧರಿದ್ದೇವೆ ಎಂದರು.

ಅರಿವಳಿಕೆ ತಜ್ಞೆ ಡಾ| ನಂದಿನಿ ಮಾತನಾಡಿ, ಆಸ್ಪತ್ರೆಯಲ್ಲಿ ಐಸಿಯು ಇಲ್ಲವಾದ್ದರಿಂದ ಸಿಬ್ಬಂದಿಗಳಿಗೆ ಐಸಿಯು ನಿರ್ವಹಣೆ ಅನುಭವ ಇಲ್ಲ. ಒಂದು ವಾರದ ತರಬೇತಿ ಕೊಟ್ಟಲ್ಲಿ ಅನುಕೂಲವಾಗುತ್ತದೆ. ಆಸ್ಪತ್ರೆಯಲ್ಲಿ 19 ಬೆಡ್‌ಗಳಿಗೆ ಆಕ್ಸಿಜನ್‌ ವ್ಯವಸ್ಥೆ ಇದೆ. 11 ಜಂಬೋ, 26 ಸಣ್ಣ ಸಿಲಿಂಡರ್‌ ಹಾಗೂ 15 ಔಟ್‌ಲೆಟ್‌ ಬೇಕಾಗುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಬೀಳಗಿ ಮಾತನಾಡಿ, ಆಸ್ಪತ್ರೆಗೆ 100 ಜಂಬೋ ಸಿಲಿಂಡರ್‌ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ರಕ್ಷಣಾಧಿಕಾರಿಗೆ ವಹಿಸಲಾಗುವುದು. 70 ಮಂಚಗಳನ್ನು ಹೊರಗಡೆಯಿಂದ ತರಿಸಲಾಗುವುದು. ಕಾಟನ್‌ ಬೆಡ್‌, ಫ್ಯಾನ್‌, ಐವಿ ಡ್ರಿಪ್‌, ಆಕ್ಸಿಜನ್‌ ಸಿಲಿಂಡರ್‌, ಬಿಪಿ ಆಪರೇಟರ್ ಗಳನ್ನು ದಾನಿಗಳಿಂದ ಪೂರೈಸುತ್ತೇವೆ. ಟ್ರಾಲಿ, ವ್ಹೀಲ್‌ಚೇರ್‌ ಇತರೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರೆ ಪೂರೈಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಹೊರರೋಗಿಗಳ ಚಿಕಿತ್ಸೆಗೆ ಧಕ್ಕೆ ಆಗದಂತೆ ಕೋವಿಡ್‌ ಚಿಕಿತ್ಸೆ ಪ್ರಾರಂಭಿಸಬೇಕು. ಸಾಮಾನ್ಯ ಹಾಗೂ ಕೋವಿಡ್‌ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ದ್ವಾರ ಮಾಡಬೇಕು ಹಾಗೂ ಸಂಬಂಧಪಟ್ಟ ವೈದ್ಯರು, ಸಿಬ್ಬಂದಿಗಳು ಸಹ ಆಯಾ ದ್ವಾರಗಳ ಮೂಲಕವೇ ಹೋಗಿ ಬರಬೇಕು. ಸೋಂಕಿತರಿಗೆ ಬಿಸಿನೀರು ವ್ಯವಸ್ಥೆ ಮಾಡಲು ಮತ್ತು ಆಸ್ಪತ್ರೆಗೆ ಬಂದ ರೋಗಿಗಳು ಬಿಸಿ ನೀರು ಕುಡಿಯಲು 2 ಯೂನಿಟ್‌ಗೆ ಒಂದರಂತೆ ಸ್ಟೌವ್‌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಡಾ| ಸಂಜಯ್‌ ಮಾತನಾಡಿ, ಆಸ್ಪತ್ರೆಯಲ್ಲಿ ಸಿಟಿ ಸ್ಕಾನ್‌ ವ್ಯವಸ್ಥೆ ಇಲ್ಲ. ಎಕ್ಸ್‌ರೇ ಇದ್ದರೂ ಆದರೆ ಲ್ಮ್ಗಳು ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತದ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಕೋವಿಡ್‌ ಸೋಂಕಿತರನ್ನು ಈ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್‌ ವೈದ್ಯಾಧಿ ಕಾರಿಗಳು, ಸಿಬ್ಬಂದಿ, ಡಿ ಗ್ರೂಪ್‌ ನೌಕರ ವರ್ಗದವರು ಸೇರಿ ಒಟ್ಟು 3 ತಂಡ ರಚಿಸಿಕೊಳ್ಳಬೇಕು. ಪ್ರತಿ ತಂಡಕ್ಕೂ 3 ವೈದ್ಯರು, 3 ಸ್ಟಾಫ್‌ ನರ್ಸ್‌, 3 ಡಿ-ಗ್ರೂಪ್‌ ಸೇರಿದಂತೆ 9 ಜನರ ತಂಡ ರಚಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಪ್ರತಿ ಆಸ್ಪತ್ರೆಗೂ ಒಬ್ಬ ನೋಡಲ್‌ ಅ ಧಿಕಾರಿ ನೇಮಿಸಲಾಗಿದೆ. ಆಸ್ಪತ್ರೆಯ ಪ್ರತಿ ವಿಭಾಗದ ವರದಿ ನೋಡಿಕೊಳ್ಳುವ ಮೂಲಕ ಪ್ರತಿನಿತ್ಯ ವರದಿ ನೀಡುತ್ತಿದ್ದಾರೆ.

ಅನಗತ್ಯವಾಗಿ ಆಕ್ಸಿಜನ್‌ ಬಳಕೆ ಮಾಡಬಾರದು. ಅದನ್ನು ಔಷ  ಧಿಯಂತೆ ಸಮರ್ಪಕವಾಗಿ ಬಳಸಬೇಕು ಎಂದರು. ಜಿಪಂ ಸಿಇಒ ಡಾ| ವಿಜಯ ಮಹಾಂತೇಶ ದಾನಮ್ಮನವರ್‌, ಕೋವಿಡ್‌ ನೋಡಲ್‌ ಅ ಧಿಕಾರಿ ಪ್ರಮೋದ್‌ ನಾಯಕ್‌, ಡಾ| ಸಂಧ್ಯಾರಾಣಿ, ಡಾ| ಅಣ್ಣಪ್ಪಸ್ವಾಮಿ, ಡಾ| ಚಿದಾನಂದ, ಡಾ| ನಂದಿನಿ, ಡಾ| ಚಂದನ, ಡಾ| ಪ್ರಸನ್ನ, ಡಾ| ಅನಿತಾರಾಣಿ ಇತರರು ಇದ್ದರು.

ಟಾಪ್ ನ್ಯೂಸ್

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-11

ಸ್ವಯಂ ಜಾಗೃತಿಯಿಂದ ಕೊರೊನಾ ನಿಯಂತ್ರಣ: ಸ್ವಾಮೀಜಿ

15-10

ಸರ್ವೋನ್ನತ ಏಳಿಗೆಗೆ ಯೋಗ ಸಹಕಾರಿ: ಡಾ| ಶಂಕರ ಗೌಡ

15-9

ಜಿಲ್ಲೆಯ 3.81 ಲಕ್ಷ ಜನರಿಗೆ ಕೊರೊನಾ ಲಸಿಕೆ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

MUST WATCH

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

ಹೊಸ ಸೇರ್ಪಡೆ

ದ್ಗಹಜಹಗ್ದ್ಗಹಜ

ಲಸಿಕೆಯೊಂದಿಗೆ ಹಳ್ಳಿ ಗೆ ಸಾರಿಗೆ ಬಸ್‌

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಸದ್ಗಹಜಹಗ್ದರತಯು

ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ

j15srs4

ಮಣ್ಣು ಬದು ನಿರ್ಮಾಣಕ್ಕೆ ಪುನಃ ಅವಕಾಶ

್ಗಹಯತರೆರತಯು

ಅರುಣ್ ಸಿಂಗ್ ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕ್ತಾರೆ : ರವಿಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.