ಕೊನೆಗೂ ಈಡೇರಲೇ ಇಲ್ಲ ಪುನೀತ್‌ ಆಸೆ!

Team Udayavani, Oct 30, 2021, 12:32 PM IST

ಕೊನೆಗೂ ಈಡೇರಲೇ ಇಲ್ಲ ಪುನೀತ್‌ ಆಸೆ!

ದಾವಣಗೆರೆ: ಸಹೋದರರಾದ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರೊಡಗೂಡಿ ಒಂದೇ ಚಿತ್ರದಲ್ಲಿ ನಟಿಸಬೇಕು ಎಂಬ ಪುನೀತ್‌ ರಾಜ್‌ ಕುಮಾರ್‌ ಮಹದಾಸೆ ವಿಧಿಯಾಟದಿಂದ ಕೊನೆಗೂ ಕೈಗೂಡಲೇ ಇಲ್ಲ!.

ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ ಅವರಿಗೆ ಶಿವಣ್ಣ (ಶಿವರಾಜ್‌ಕುಮಾರ್‌), ರಾಘಣ್ಣ (ರಾಘವೇಂದ್ರ ರಾಜ್‌ಕುಮಾರ್‌) ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಬಹಳ ದಿನಗಳ ಆಸೆಇತ್ತು. ಮೂವರಿಗೂ ಒಪ್ಪುವ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದರು. ಆದರೆ, ವಿಧಿಯ ಕ್ರೂರ ಆಟದಿಂದ ಅದು ಸಾಧ್ಯವಾಗಲೇ ಇಲ್ಲ.

ತಮ್ಮ ಅಭಿನಯದ ನಟಸಾರ್ವಭೌಮ… ಚಿತ್ರ 25 ನೇ ದಿನ ಪ್ರದರ್ಶನ ಕಂಡ ಸಂಭ್ರಮಾಚರಣೆಗೆ 2019 ರ. ಮಾ. 12 ರಂದು ದಾವಣಗೆರೆಗೆ ಆಗಮಿಸಿದ್ದ ಪುನೀತ್‌ ರಾಜ್‌ಕುಮಾರ್‌ ತಮ್ಮ ಬಹುದಿನದ ಆಸೆಯನ್ನು ವ್ಯಕ್ತಪಡಿಸಿದ್ದರು. ಒಳ್ಳೆಯ ಕಥೆ ಸಿಕ್ಕಲ್ಲಿ ಮೂವರು ಒಟ್ಟಿಗೆ ನಟಿಸುತ್ತೇವೆ.ಒಂದೇ ಚಿತ್ರದಲ್ಲಿ ಶಿವಣ್ಣ, ರಾಘಣ್ಣನ ಜೊತೆ ನಾನೂ ಇರುತ್ತೇನೆ ಎಂದು ಹೇಳಿಕೊಂಡಿದ್ದರು.ಆದರೆ, ಈಗ ಅವರ ಜೀವನದ ಕಥೆಯೇ ಅಂತ್ಯವಾಗಿದೆ.

ನಾವು ಮೂವರು ಸಹೋದರರು ಒಂದಾಗಿ ಸಿನಿಮಾ ಮಾಡಬೇಕು ಎಂಬ ಆಸೆ ನಮ್ಮ ಮೂವರಿಗೂ ಇದೆ. ಕನ್ನಡಿಗರಿಗೂ ಅದೇ ಆಸೆ ಇದೆ. ಆದರೆ, ಅದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇವೆ. ಖಂಡಿತವಾಗಿಯೂ ಮೂವರು ಒಂದೇಚಿತ್ರ ಮಾಡುತ್ತೇವೆ ಎಂದು ಪುನೀತ್‌ ರಾಜ್‌ಕುಮಾರ್‌ ಹೇಳಿಕೊಂಡಿದ್ದರು. ಆದರೆ, ಕೊನೆಗೂ ಆ ಸಮಯ ಕೂಡಿ ಬರಲೇ ಇಲ್ಲ!.

ದಾವಣಗೆರೆ ಎಂದರೆ ಪುನೀತ್‌ ರಾಜ್‌ ಕುಮಾರ್‌ಗೆ ಅಚ್ಚುಮೆಚ್ಚು. ಬೆಣ್ಣೆದೋಸೆಗೆಖ್ಯಾತಿಯಾದ ದಾವಣಗೆರೆ ಕನ್ನಡ ಚಲನಚಿತ್ರದ ರಂಗದ ಬೆನ್ನೆಲುಬು. ದಾವಣಗೆರೆಯಲ್ಲಿ ಚಿತ್ರ ಯಶಸ್ವಿಯಾದರೆಇಡೀ ರಾಜ್ಯದಲ್ಲಿ ಚಿತ್ರದ ಗೆಲುವು ಶತಃ ಸಿದ್ಧ ಎಂಬ ಅಲಿಖೀತ ಲೆಕ್ಕಾಚಾರ ಕನ್ನಡ ಚಿತ್ರರಂಗದಲ್ಲಿದೆ. ಅಂತಹ ದಾವಣಗೆರೆಯ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ತುಂಬು ಅಭಿಮಾನ ಹೊಂದಿದ್ದರು.

ದಾವಣಗೆರೆ ನನ್ನ ಫೆವರೇಟ್‌ ಪ್ಲೇಸ್‌: ದಾವಣಗೆರೆ ಅಂದರೆ ಸಖತ್‌ ಇಷ್ಟ. ದೊಡ್ಮನೆ ಹುಡುಗ… ಚಿತ್ರ ಬಿಡುಗಡೆ ಸಂದರ್ಭದಲ್ಲಿ ದಾವಣಗೆರೆಗೆ ಬಂದಿದ್ದೆ. ಅಪ್ಪಾಜಿ (ಡಾ| ರಾಜ್‌ಕುಮಾರ್‌) ಯಾವಾಗಲೂದಾವಣಗೆರೆ ಬಗ್ಗೆ ಹೇಳುತ್ತಿದ್ದರು. ಅಪ್ಪಾಜಿಜೊತೆಗೂ ದಾವಣಗೆರೆ ಬಂದಿದ್ದೇನೆ ಎಂದುಪುನೀತ್‌ ರಾಜ್‌ಕುಮಾರ್‌ ಇಲ್ಲಿ ಬಂದಾಗಲೆಲ್ಲ ಸ್ಮರಿಸುತ್ತಿದ್ದರು.

ನಟಸಾರ್ವಭೌಮ… ದಾವಣಗೆರೆಯಲ್ಲಿ 25 ದಿನ ಪೂರೈಸಿದೆ. ಒಂದು ಚಿತ್ರದ ಗೆಲುವಿನ ನಂತರ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳನ್ನು ಕಂಡು ಖುಷಿ ಹಂಚಿಕೊಳ್ಳುವುದು ಬಹಳ  ಸಂತೋಷದ ವಿಚಾರ. ಹಾಗಾಗಿಯೇ ಹಾವೇರಿ, ರಾಣೆಬೆನ್ನೂರುನಲ್ಲಿ ರೋಡ್‌ ಶೋ ಮಾಡಿ, ದಾವಣಗೆರೆಗೆ ಬಂದಿರುವುದಾಗಿ ಎಂದು ಹೇಳಿಕೊಂಡಿದ್ದರು. ಅದುವೇ ಪುನೀತ್‌ ರಾಜ್‌ಕುಮಾರ್‌ರವರ ದಾವಣಗೆರೆಯ ಕೊನೆಯ ಭೇಟಿ.

ಪವರ್‌ಫುಲ್‌ ನಟ ಪುನೀತ್‌ ರಾಜ್‌ ಕುಮಾರ್‌ ಇನ್ನು ನೆನಪು ಮಾತ್ರ ಎಂಬುದನ್ನ ನೆನೆಪಿಸಿಕೊಳ್ಳುವುದಕ್ಕೂ ದಾವಣಗೆರೆ ಜನರ ಒಪ್ಪದಂತಹ ವಾತಾವರಣ ನಿರ್ಮಾಣವಾಗಿದೆ.

ರೋಡ್‌ ಶೋ ಮೊಟಕು :

ನಟಸಾರ್ವಭೌಮ… ಚಿತ್ರ 25 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ರವರ ರೋಡ್‌ ಶೋ ಅಭಿಮಾನಿಗಳ ವಿಪರೀತ ತಳ್ಳಾಟ-ನೂಕಾಟದ ಕಾರಣಕ್ಕೆ ಅರ್ಧಕ್ಕೆನಿಲ್ಲಿಸಬೇಕಾಯಿತು. ಅಂದು ಹೊಸ ಬಸ್‌ ನಿಲ್ದಾಣದಿಂದ ಮಹಾತ್ಮ ಗಾಂಧಿ ವೃತ್ತದಮೂಲಕ ನಟಸಾರ್ವಭೌಮ… ಚಿತ್ರಪ್ರದರ್ಶನಗೊಳ್ಳುತ್ತಿರುವ ಗೀತಾಂಜಲಿಚಿತ್ರಮಂದಿರದವರೆಗೆ ರೋಡ್‌ಶೋ ನಡೆಯಬೇಕಿತ್ತು. ಸಾರಿಗೆ ಬಸ್‌ ನಿಲ್ದಾಣದಿಂದ ಪ್ರಾರಂಭವಾದ ರೋಡ್‌ಶೋ ಅರ್ಧ ದಾರಿಗೆ ಬರುತ್ತಿದ್ದಂತೆತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದನೋಡಲು, ಹಾರ, ಶಾಲು ಹಾಕಲುಅಭಿಮಾನಿಗಳು ಒಂದೇ ಸಮನೆನುಗ್ಗಿ ಬಂದರು. ಈ ಸಂದರ್ಭದಲ್ಲಿತಳ್ಳಾಟ-ನೂಕಾಟ ಹೆಚ್ಚಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ಆದರೂ, ಅಭಿಮಾನಿಗಳತಳ್ಳಾಟ-ನೂಕಾಟ ಜೋರಾಗಿಯೇ ಇತ್ತು. ರೋಡ್‌ ಶೋ… ಅರ್ಧಕ್ಕೆ ನಿಲ್ಲಿಸಿಕಾರಿನಲ್ಲಿ ಗೀತಾಂಜಲಿ ಚಿತ್ರಮಂದಿರಕ್ಕೆ ಪುನೀತ್‌ ರಾಜ್‌ಕುಮಾರ್‌ ಬಂದುವೇದಿಕೆ ಏರಲು ಮುಂದಾದರು. ಆಗಲೂವಿಪರೀತ ತಳ್ಳಾಟ-ನೂಕಾಟ ನಡೆಯಿತು.

ಅಭಿಮಾನಿಗಳ ತಳ್ಳಾಟ-ನೂಕಾಟ ನಿಯಂತ್ರಣಕ್ಕೆ ಬರಲೇ ಇಲ್ಲ. ಲಘು ಲಾಠಿ ಪ್ರಹಾರ ನಡೆಸಿ, ಪುನೀತ್‌ ರಾಜ್‌ ಕುಮಾರ್‌ ಕಾರು ಏರಲಿಕ್ಕೆ ಅವಕಾಶಮಾಡಿಕೊಡಲಾಯಿತು. ಹಾಗಾಗಿಪುನೀತ್‌ ರಾಜ್‌ಕುಮಾರ್‌ ವೇದಿಕೆಗೆ ಬರದೆ ಹಾಗೆಯೇ ವಾಪಾಸ್ಸಾದರು. ಈಗ ಮತ್ತೆ ಎಂದೆಂದಿಗೂ ವಾಪಾಸ್ಸಾಗದ ಲೋಕಕ್ಕೆ ತೆರಳಿದ್ದಾರೆ.

-ರಾ. ರವಿಬಾಬು

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.