ಶರಣರ ವಚನ ಸಂವಿಧಾನ ಜೀವನ ವಿಧಾನ

ಹರಿಹರ ತಾಲೂಕಿನಲ್ಲಿ ವಿವಿಧ ಪೀಠಗಳು ಸ್ಥಾಪನೆಗೊಂಡಿವೆ.

Team Udayavani, Mar 22, 2022, 6:06 PM IST

ಶರಣರ ವಚನ ಸಂವಿಧಾನ ಜೀವನ ವಿಧಾನ

ಮಲೇಬೆನ್ನೂರು: ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಮಾರ್ಗಸೂಚಿ ತತ್ವಗಳಾದ ಬಸವತತ್ವ ಪ್ರಸ್ತುತ ಅವಶ್ಯಕತೆಯಿದೆ ಎಂದು ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ| ಶಿವಮೂರ್ತಿ ಮುರಘಾ ಶರಣರು ಅಭಿಪ್ರಾಯಿಸಿದರು.

ಮಲೇಬೆನ್ನೂರಿನ ಡಾ| ರಾಜಕುಮಾರ್‌ ಬಡಾವಣೆಯಲ್ಲಿ ಬಸವ ಬಳಗ ಮತ್ತು ಅಕ್ಕನ ಬಳಗದವರು ಸೋಮವಾರ ಏರ್ಪಡಿಸಿದ್ದ ಬಸವ ಮಂಟಪ ಕಟ್ಟಡದ ಭೂಮಿಪೂಜೆ ಹಾಗೂ ಶರಣ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವತತ್ವವು ವಿಶ್ವ ತತ್ವವಾಗಿದ್ದು ಸರ್ವರನ್ನೂ ಒಳಗೊಳ್ಳುವ, ಒಗ್ಗೂಡಿಸುವ ತತ್ವವಾಗಿದ್ದು, ನಮ್ಮ ಸಂವಿಧಾನದಲ್ಲೂ ಬಸವಣ್ಣವರ ಆಶಯ ಅಳವಡಿಸಿಕೊಳ್ಳಲಾಗಿದೆ ಎಂದರು.

ನಮಗೆ ವಿಭಜಿಸುವ ತತ್ವ ಮತ್ತು ಒಡೆದು ಆಳುವ ನೀತಿ ಬೇಕಾಗಿಲ್ಲ. ಎಲ್ಲರನ್ನೂ ಒಂದುಗೂಡಿಸುವ ಬಸವ ತತ್ವ ಅತ್ಯಗತ್ಯವಾಗಿದೆ. 12ನೇ ಶತಮಾನದ ಬಸವತತ್ವಗಳು ನಮ್ಮ ರಾಷ್ಟ್ರದ ಸಂವಿಧಾನದಲ್ಲಿರುವಂತೆ ಬೇರೆ ರಾಷ್ಟ್ರಗಳ ಸಂವಿಧಾನದಲ್ಲೂ ಅಡಕವಾಗಿವೆ. ಡಾ| ಅಂಬೇಡ್ಕರ್‌ ಅವರು ದೇಶಕ್ಕೆ ಸಂವಿಧಾನ ನೀಡುವ 800 ವರ್ಷಗಳ ಹಿಂದೆಯೇ ಶರಣರು ನೀಡಿದ ವಚನ ಸಂವಿಧಾನ ಜೀವನ ವಿಧಾನವಾಗಿದೆ ಎಂದರು.

ಬಸವ ತತ್ವವನ್ನು ಲಿಂಗಾಯಿತರು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಲಿಂಗಾಯಿತೇತರರು ಬಸವ ತತ್ವವನ್ನು ಅರ್ಥಮಾಡಿಕೊಳ್ಳಲು ಅನೇಕ ಕಾರಣಗಳಿವೆ. ಅಕ್ಕನ ಬಳ, ಅಣ್ಣನ ಬಳಗ, ಬಸವಕೇಂದ್ರ, ರಾಷ್ಟ್ರೀಯ ಬಸವದಳ ಮತ್ತು ಶರಣ ಸಾಹಿತ್ಯ ಪರಿಷತ್‌ ಇತರೆ ಸಂಘಟನೆಗಳು ಬಸವತತ್ವವನ್ನು ಹರಡಲು ಪ್ರಾಮಾಣಿಕ ಪ್ರಯತ್ನ ಮಾಡಿವೆ.

ಮಲೇಬೆನ್ನೂರಿನಲ್ಲಿ ಬಸವತತ್ವಗಳ ಪ್ರಚಾರಗೊಳಿಸಲು ಉತ್ತಮ ಪರಿಸರದ ಅನಾವರಣವಾಗಿದ್ದು, ಬಸವ ಮಂಟಪ ಇಲ್ಲಿ ನೆಪಮಾತ್ರ. ಆದರೆ ಬಸವ ಮತ್ತು
ಅಕ್ಕನ ಬಳಗದವರಿಗೆ ಬಸವ ಹೃದಯವಿದೆ ಎಂದು ಪ್ರಶಂಸಿದರು. ಇಲ್ಲಿ ಸಾಂಸ್ಕೃತಿಕ ಪ್ರಜ್ಞೆಗೆ ಒಳಗೂಡಿ ಶರಣರಲ್ಲಿ ಒಡನಾಟವೂ ಇರುತ್ತೆ, ಒಳನೋಟವೂ ಇರುತ್ತೆ. ಬಸವತತ್ವಕ್ಕೆ ಯಾವುದೇ ರೇಖೆಗಳನ್ನು ಹಾಕಬಾರದು.

ಜಾತಿ, ಧರ್ಮ, ಮತಗಳ ಹೆಸರಲ್ಲಿ ದಾಂದಲೆಗೆ ಸಿಲುಕಿದ್ದೇವೆ. ಈ ಸಂದರ್ಭಧಲ್ಲಿ ಬಸವತತ್ವ ವಿಶಾಲಾರ್ಥದಲ್ಲಿ ವ್ಯಾಖ್ಯಾನ ಮಾಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡಿ, ಅಕ್ಕಮಹಾದೇವಿ ಮತ್ತು ಬಸವಣ್ಣ ಈ ನಾಡಿಗೆ ಬೆಳಕನ್ನು ಕೊಟ್ಟವರು.

ಅಜ್ಞಾನವನ್ನು ಕಳೆದವರು, ಸುಜ್ಞಾನದ ಸುಧೆ ನೀಡಿದವರು, ನೋವಿದ್ದರೂ ಸಮಾಧಾನಿಯಾಗಿದ್ದು ಬದುಕಿನಲ್ಲಿ ಸಾರ್ಥಕತೆ ಮೆರೆದವರು ಎಂದರು. ಜಗತ್ತಿನ ಯಾವುದೇ ಧರ್ಮವು ಸಂಕುಚಿತ ಗೋಡೆ ಕಟ್ಟಲು ಹೇಳಿಲ್ಲ. ಒಬ್ಬ ಮತ್ತೂಬ್ಬನನ್ನು ಗೌರವಿಸಬೇಕೆಂದೇ ಹೇಳಿದೆ. ಪ್ರಸ್ತುತ ಧರ್ಮದ ಹೆಸರಿನಲ್ಲಿ ನರಮೇಧ ನಡೆಯುತ್ತಿರುವುದನ್ನು ಕಾಣುತ್ತೇವೆ. ಈ ಸಣ್ಣತನ ಕಳೆದು ಸಮಾಜವನ್ನು ಕಟ್ಟಿ ಬೆಳೆಸಲು ಗಟ್ಟಿತನ ಅಗತ್ಯವಾಗಿದೆ. ಶರಣರು ಸಾಮ್ರಾಜ್ಯ ಕಟ್ಟದೆ, ಡಾಕ್ಟರೇಟ್‌ ಪದವಿ ಪಡೆಯದೇ ಅರಿವು ಆಚಾರದಿಂದ ಅನುಭವ ಮಂಟಪವನ್ನು ಕಟ್ಟಿ ಆ ಮೂಲಕ ಸಾಮಾನ್ಯರನ್ನು ಶರಣರನ್ನಾಗಿಸಿದ್ದಾರೆ ಎಂದರು.

ಶಾಸಕ ಎಸ್‌. ರಾಮಪ್ಪ ಮಾತನಾಡಿ, ಹರಿಹರ ತಾಲೂಕಿನಲ್ಲಿ ವಿವಿಧ ಪೀಠಗಳು ಸ್ಥಾಪನೆಗೊಂಡಿವೆ. ಹಾಗೇನೆ ಮಲೇಬೆನ್ನೂರಿನಲ್ಲಿ ಅನುಭವ ಮಂಟಪ ಪ್ರಾರಂಭವಾಗುವುದರ ಮೂಲಕ ಹರಿಹರ ತಾಲೂಕು ಧರ್ಮದ ಬೀಡಾಗಲಿದೆ. ಅನುಭವ ಮಂಟಪಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.

ಬಸವ ಬಳಗದ ಅಧ್ಯಕ್ಷ ವೈ. ನಾರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬಳ್ಳೇಕಟ್ಟೆ ಕುಂಬಾರ ಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಧರ್ಮ ಪೀಠಾಧ್ಯಕ್ಷೆ ಡಾ| ಗಂಗಾಮಾತಾಜಿ, ನಾಗಲಾಂಬಿಕೆ, ಮಾಜಿ ಶಾಸಕರಾದ ಎಚ್‌.ಎಸ್‌. ಶಿವಶಂಕರ್‌, ಬಿ.ಪಿ. ಹರೀಶ್‌, ನಿಖಿಲ್‌ ಕೊಂಡಜ್ಜಿ, ಮಂಜುನಾಥ ಪಟೇಲ್‌, ಓ.ಜಿ. ರುದ್ರಗೌಡ, ಶಿವಾಜಿಪಾಟೀಲ್‌, ಇಂದೂಧರ್‌, ನಂದಿತಾವರೆ ತಿಮ್ಮನಗೌಡ, ಮೈಲಾರಪ್ಪ, ವಿಜಯಕುಮಾರ್‌, ಲಿಂಗರಾಜ್‌, ಎಚ್‌ .ಟಿ. ಪರಮೇಶ್ವರಪ್ಪ, ಅಜೇಯಗೌಡ, ರಾಷ್ಟ್ರೀಯ ಬಸವದಳ ಹಾಗೂ ಬಸವ ಬಳಗ ಮತ್ತು ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.