ಕೆವಿಜಿ: 25 ಸಾವಿರ ಕೋಟಿ ವಹಿವಾಟು ದಾಖಲೆ

• 9 ಜಿಲ್ಲೆಗಳಲ್ಲಿ 636 ಶಾಖೆಯನ್ನು ಹೊಂದಿರುವ ಬ್ಯಾಂಕ್‌• ಕಾರ್ಯ ನಿರ್ವಹಣಾ ಲಾಭ 203.26 ಕೋಟಿ ರೂ.

Team Udayavani, Jun 19, 2019, 1:47 PM IST

ಧಾರವಾಡ: ನಗರದ ಕೆವಿಜಿ ಬ್ಯಾಂಕ್‌ನಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಅಧ್ಯಕ್ಷ ಎಸ್‌.ರವೀಂದ್ರನ್‌ ಮಾತನಾಡಿದರು.

ಧಾರವಾಡ : ಸತತ ಐದು ವರ್ಷದ ಬರಗಾಲದ ಮಧ್ಯೆಯೂ 9 ಜಿಲ್ಲೆಗಳಲ್ಲಿ 636 ಶಾಖೆ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 2018-19ನೇ ಸಾಲಿನಲ್ಲಿ ಶೇ.7.79 ಪ್ರಗತಿ ದರದಲ್ಲಿ 25,257 ಕೋಟಿ ರೂ. ವಹಿವಾಟು ದಾಖಲಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಎಸ್‌.ರವೀಂದ್ರನ್‌ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2017-18 ಸಾಲಿನಲ್ಲಿ ಒಟ್ಟು 23,432 ಕೋಟಿ ರೂ.ಗಳ ಮೇಲೆ 1825 ನಿವ್ವಳ ಹೆಚ್ಚಳ ಸಾಧಿಸಿತ್ತು. ಈ ವರ್ಷ ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ 203.26 ಕೋಟಿ ರೂ.ಗಳಾಗಿದ್ದು, ಈ ಪೈಕಿ ಉಪಬಂಧ ಹಾಗೂ ಆದಾಯ ತೆರಿಗೆಯನ್ನೂ ಪಾವತಿಸಿ ಬ್ಯಾಂಕ್‌ 50.12 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ. ಈ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು 1693 ಕೋಟಿ ರೂ.ಗಳಿಂದ 1743 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದರು.

ಠೇವಣಿ ಸಂಗ್ರಹಣೆಯಲ್ಲಿ ಶೇ.7.34 ಪ್ರಗತಿ ದರದಲ್ಲಿ 13,895 ಕೋಟಿ ರೂ.ಮಟ್ಟವನ್ನು ತಲುಪುವುದರ ಜತೆಗೆ ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ. ಅದು ಈಗ 79 ಲಕ್ಷ ಮೀರಿದೆ. ಬ್ಯಾಂಕ್‌ ಸಾಲ ಹಾಗೂ ಮುಂಗಡಗಳು ಶೇ.8.34 ಪ್ರಗತಿ ದರದಲ್ಲಿ 11,362 ಕೋಟಿ ರೂ.ಮಟ್ಟ ತಲುಪಿದೆ. ಕಳೆದ ಐದು ವರ್ಷದಿಂದ ಸತತ ಬರ ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲದ ಮೇಲೆ ಬ್ಯಾಂಕ್‌ ಉತ್ತಮ ನಿಯಂತ್ರಣ ಸಾಧಿಸಿದೆ ಎಂದರು.

ಕಳೆದ ಸಾಲಿನಲ್ಲಿ ಬ್ಯಾಂಕ್‌ ಕಿಸಾನ್‌ ಕ್ರೆಡಿಟ್ ಕಾರ್ಡ್‌ ಯೋಜನೆಯಡಿ 1,18,867 ರೈತರಿಗೆ 2021 ಕೋಟಿ ರೂ. ಸಾಲ ವಿತರಿಸಿದ್ದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಬ್ಯಾಂಕ್‌ 65,000 ಉದ್ಯೋಗಾಕಾಂಕ್ಷಿಗಳಿಗೆ 951 ಕೋಟಿ ರೂ. ಸಾಲ ವಿತರಿಸಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ 709 ಫಲಾನುಭವಿಗಳಿಗೆ 64.18 ಕೋಟಿ ರೂ. ಸಾಲ ವಿತರಿಸಿದೆ. ಇನ್ನೂ ಅಟಲ್ ಪೆನ್ಷನ್‌ ಯೋಜನೆಯಡಿ ಪಿಂಚಣಿಗಾಗಿ ಇಲ್ಲಿಯವರೆಗೆ 53,862 ಜನರನ್ನು ನೋಂದಣಿಗೆ ಒಳಪಡಿಸಲಾಗಿದೆ. ಬ್ಯಾಂಕಿನ ಈ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ ನಾಲ್ಕು ಪ್ರಶಸ್ತಿಗಳನ್ನು ನೀಡಿದೆ ಎಂದರು.

ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು, ಹೊಸ ಆರ್ಥಿಕ ವರ್ಷದ ಸಾಲಿನಲ್ಲಿ ಕೃಷಿ ಪ್ರವಾಸೋದ್ಯಮ ಒಳಗೊಂಡು 10 ನೂತನ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಜತೆಗೆ ಗೃಹಸಾಲ, ಸಣ್ಣ ಮತ್ತು ಮಧ್ಯಮ ತರಗತಿಯ ಕೈಗಾರಿಕೆ, ಕೃಷಿ ರಂಗದಲ್ಲಿ ಹೂಡಿಕೆ ಸಾಲ ಸೇರಿ ಸಮಗ್ರ ಕೃಷಿ ಪದ್ಧತಿಗೆ ಈ ಆರ್ಥಿಕ ವರ್ಷದಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಬ್ಯಾಂಕಿನ ಮಹಾ ಪ್ರಬಂಧಕ ಐ.ಜಿ.ಕುಮಾರ ಗೌಡ, ಸಹಾಯಕ ಮಹಾ ಪ್ರಬಂಧಕ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ಕೆ.ಟಿ.ಭಟ್, ಹಿರಿಯ ವ್ಯವಸ್ಥಾಪಕ ಉಲ್ಲಾಸ ಗುನಗಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ಇಂಟರ್‌ನ್ಯಾಷನಲ್ ಇನ್ಸ್‌ಟಿ ಟ್ಯೂಟ್ ಆಫ್‌ ಫ್ಯಾಶನ್‌ ಡಿಸೈನ್‌ (ಐಎನ್‌ಐಎಫ್‌ಡಿ- ಇನಿಫ್ಡ್)ದ ವಾರ್ಷಿಕ ಫ್ಯಾಶನ್‌ ಶೋ 'ಸಿಲ್ಹೌಟ್' 3ನೇ ಋತುವಿನಲ್ಲಿ...

  • ಹುಬ್ಬಳ್ಳಿ: ವಯೋವೃದ್ಧರು ಒಂದೆಡೆ ಕುಳಿತುಕೊಳ್ಳದೆ ಸದಾ ಕ್ರಿಯಾಶೀಲರಾಗಿರಬೇಕು ಎಂದು ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಹೇಳಿದರು. ಹೊಸೂರ ವೃತ್ತದಲ್ಲಿರುವ...

  • ಹುಬ್ಬಳ್ಳಿ: ಸುಮಾರು 59 ವರ್ಷಗಳಿಂದ ವಾಸವಿದ್ದ ಮನೆಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದ್ದು, ತೆರವು ಆದೇಶ ರದ್ಧತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಧಾರವಾಡ...

  • ಧಾರವಾಡ: ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಂಧಿಸಿರುವ ಉತ್ತರ ಪ್ರದೇಶ ಸರಕಾರದ ಕ್ರಮ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ...

  • ಧಾರವಾಡ: ಕನ್ನಡ ನಾಡು ಕಟ್ಟುವಲ್ಲಿ ಕೊಡುಗೆ ನೀಡಿರುವ ಕವಿಸಂ ಕಳೆದ 130 ವರ್ಷಗಳಿಂದ ನಾಡು, ನುಡಿ, ಜಲ ವಿಷಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದೆ. ನೂರಲ್ಲ, ಸಾವಿರ ವರ್ಷ...

ಹೊಸ ಸೇರ್ಪಡೆ