30 ಕೃಷಿ ಉತ್ಪನ್ನಗಳ ರಾಶಿ ಮಾಡುವ ಯಂತ್ರ

ಇತರೆ ಕೃಷಿ ಕಾರ್ಯಗಳಿಗೂ ಬಳಕೆ ; ಇಲೆಕ್ಟ್ರಿಕ್‌ ವಾಹನ ಸಹಿತ ಆವಿಷ್ಕಾರ ; ರೈತರಿಂದ ಉತ್ತಮ ಪ್ರತಿಕ್ರಿಯೆ

Team Udayavani, Jun 15, 2022, 10:26 AM IST

2

ಹುಬ್ಬಳ್ಳಿ: ರೈತರು ಕೃಷಿ ಉತ್ಪನ್ನಗಳ ರಾಶಿ ಮಾಡುವುದನ್ನು ಸುಲಭವಾಗಿಸಲು ವಿಶ್ವಕರ್ಮ ಅಗ್ರಿಕಲ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ, ಇಲೆಕ್ಟ್ರಿಕ್‌ ವಾಹನದೊಂದಿಗೆ ಸುಮಾರು 30 ಕೃಷಿ ಉತ್ಪನ್ನಗಳನ್ನು ರಾಶಿ ಮಾಡಬಹುದಾದ ಯಂತ್ರವನ್ನು ರೈತರಿಗೆ ಪರಿಚಯಿಸಿದ್ದು, ಈ ವಾಹನ ಕೇವಲ ಕೃಷಿ ಉತ್ಪನ್ನಗಳ ರಾಶಿ ಮಾಡುವುದಷ್ಟೇ ಅಲ್ಲದೆ ಇತರೆ ಕೃಷಿ ಕಾರ್ಯಗಳಿಗೂ ಬಳಕೆಯಾಗಲಿದೆ.

ಗುಜರಾತ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಇನೊವೇಶನ್‌ ಪರಿಷತ್ತು ಮತ್ತು ವಿನ್ಯಾಸ ಇನೋವೇಶನ್‌ ಕೇಂದ್ರ ಇಲೆಕ್ಟ್ರಿಕ್‌ ವಾಹನ ಸಹಿತವಾಗಿ ಒಂದೇ ಯಂತ್ರದಲ್ಲಿ ಸುಮಾರು 30 ತರಹದ ಕೃಷಿ ಉತ್ಪನ್ನಗಳನ್ನು ರಾಶಿ ಮಾಡುವ ಯಂತ್ರವನ್ನು ಅವಿಷ್ಕರಿಸಿದ್ದು, ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿ ಇದನ್ನು ರಾಜ್ಯದ ರೈತರಿಗೆ ಪರಿಚಯಿಸಲು ಮುಂದಾಗಿದೆ.

ರೈತರು ಕೃಷಿ ಉತ್ಪನ್ನಗಳ ರಾಶಿ ಮಾಡುವುದಕ್ಕೆ ಕೃಷಿ ಕೂಲಿಕಾರರ ಕೊರತೆ, ಹವಾಮಾನ ಇನ್ನಿತರೆ ಸಮಸ್ಯೆಗಳಿಂದ ಸಕಾಲಕ್ಕೆ ರಾಶಿ ಮಾಡದೆ ಹೋದರೆ ಬೆಳೆದ ಬೆಳೆ ಹಾನಿಗೀಡಾಗಲಿದ್ದು, ಇದನ್ನು ತಪ್ಪಿಸಿ ರಾಶಿ ಮಾಡುವುದನ್ನು ಸುಲಭವಾಗಿಸಲು ಈ ಯಂತ್ರ ಮಹತ್ವದ ಸಹಕಾರಿ ಆಗಲಿದೆ.

ಇಲೆಕ್ಟ್ರಿಕ್‌ ವಾಹನ ವಿಎ ಇ100: ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿ ನವೋದ್ಯಮ ಆಗಿದ್ದು, ದೇಶಪಾಂಡೆ ಫೌಂಡೇಶನ್‌ ನೆರವಿನೊಂದಿಗೆ ರಾಜ್ಯದಲ್ಲೇ ಮೊದಲೆನ್ನಬಹುದಾದ ಇಲೆಕ್ಟ್ರಿಕ್‌ ಟ್ರಾÂಕ್ಟರ್‌ ಸಹಿತ 30 ಕೃಷಿ ಉತ್ಪನ್ನಗಳ ರಾಶಿ ಯಂತ್ರವನ್ನು ರೈತರಿಗೆ ಪರಿಚಯಿಸಲು ಮುಂದಾಗಿದೆ. ಗುಜರಾತ್‌ನಲ್ಲಿ ಇಂತಹ ಯಂತ್ರಗಳು ಈಗಾಗಲೇ ರೈತರಿಗೆ ಮಾರಾಟವಾಗಿದ್ದು, ರೈತರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ರಾಶಿ ಯಂತ್ರಕ್ಕೆ ಪೂರಕವಾಗಿ ಇಲೆಕ್ಟ್ರಿಕ್‌ ವಾಹನವನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಎ ಇ100 ಹೆಸರಿನ ಈ ವಾಹನ ಸ್ಮಾರ್ಟ್‌ ಸೌಲಭ್ಯಗಳನ್ನು ಹೊಂದಿದ್ದು, ಬಹುಪಯೋಗಿಯಾಗಿದೆ. ಈ ವಾಹನ ಸುಮಾರು 10 ಕಿಲೋವ್ಯಾಟ್‌ ಇವಿ ಸಾಮರ್ಥ್ಯದ ಪವರ್‌ಟ್ರೇನ್‌ ಸಿಸ್ಟಮ್‌ ಹೊಂದಿದ್ದು, 6 ಕಿಲೋವ್ಯಾಟ್‌ ಲಿ-ಐಯೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ. ಬ್ಯಾಟರಿಯನ್ನು ಎರಡು ತಾಸು ಚಾರ್ಚ್‌ ಮಾಡಿದರೆ ಸಾಕು ಸುಮಾರು 8 ತಾಸುಗಳವರೆಗೆ ಕಾರ್ಯ ನಿರ್ವಹಿಸಲಿದೆ. ಇದದಲ್ಲಿ ಸುಮಾರು 30 ತರಹದ ಕೃಷಿ ಉತ್ಪನ್ನಗಳ ರಾಶಿ ಮಾಡಬಹುದಾಗಿದೆ. ಜತೆಗೆ ತುರ್ತು ಸಂದರ್ಭದ ಬ್ಯಾಟರಿ ನೀಡಲಾಗಿದ್ದು, ಇದು ಹೆಚ್ಚುವರಿಯಾಗಿ 2 ತಾಸುಗಳವರೆಗೆ ಕಾರ್ಯ ನಿರ್ವಹಣೆ ಮಾಡಲಿದೆ.

ಇಲೆಕ್ಟ್ರಿಕ್‌ ವಾಹನ ಸಮೇತ 30 ತರಹದ ಕೃಷಿ ಉತ್ಪನ್ನಗಳ ರಾಶಿ ಮಾಡುವ ಯಂತ್ರ 2.5ರಿಂದ 3 ಲಕ್ಷ ರೂ.ನಲ್ಲಿ ರೈತರಿಗೆ ದೊರೆಯಲಿದೆ. ಮಧ್ಯಮ ರೈತರು ಸಹ ಇದನ್ನು ಖರೀದಿಸಬಹುದಾಗಿದೆ. ಜತೆಗೆ ರೈತರಿಗೆ ನಿರ್ವಹಣೆ ಸುಲಭವಾಗಿಸುವ ವ್ಯವಸ್ಥೆ ಅಳವಡಿಸಲಾಗಿದೆಯಂತೆ. ರೈತರಿಗೆ ಪ್ರಯೋಜನಕಾರಿ ಆಗಬಹುದಾದ ಸುಲಭ ನಿರ್ವಹಣೆ ಹಾಗೂ ತೈಲ ಬಳಕೆ ಇಲ್ಲದ ಪರಿಸರ ಸ್ನೇಹಿ ಇಲೆಕ್ಟ್ರಿಕ್‌ ವಾಹನ ಸಮೇತ 30 ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಉತ್ಪಾದನೆ ರೈತರಿಗೆ ನೀಡಲು ಮುಂದಾಗಿರುವುದು ಸಂತಸ ತರಿಸಿದೆ ಎಂಬುದು ವಿಶ್ವಕರ್ಮ ಅಗ್ರಿಕಲ್ಚರ್‌ ಕಂಪೆನಿಯ ಸಂಸ್ಥಾಪಕರಾದ ವೃತಿಕ ಪಂಚಾಲ, ಅರುಣ ಪಂಚಾಲ ಅವರ ಅನಿಸಿಕೆ.

ಒಂದು ತಾಸಿಗೆ ಒಂದೂವರೆ ಟನ್‌ ಶೇಂಗಾ ರಾಶಿ: ಕೃಷಿ ಉತ್ಪನ್ನಗಳ ರಾಶಿ ಯಂತ್ರ ಒಟ್ಟು 24 ಬ್ಲೇಡ್‌ಗಳನ್ನು ಒಳಗೊಂಡಿದೆ. ರೈತರು ರಾಶಿ ಮಾಡುವ ಸಂದರ್ಭದಲ್ಲಿ ಬೇರೆ ಬೇರೆ ಕೃಷಿ ಉತ್ಪನ್ನಗಳಿಗೆ ಬ್ಲೇಡ್‌ಗಳನ್ನು ಬದಲಾಯಿಸಬೇಕಾದ ಪದ್ಧತಿ ಸದ್ಯದ ರಾಶಿ ಯಂತ್ರಗಳಲ್ಲಿ ಇದೆ. ಆದರೆ ಈ ಯಂತ್ರದಲ್ಲಿ ಯಾವುದೇ ಬ್ಲೇಡ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಯಂತ್ರಕ್ಕೆ ವೇಗ ನಿಯಂತ್ರಕ ವ್ಯವಸ್ಥೆ ಅಳವಡಿಸಲಾಗಿದೆ. ಇದು ಮೂರು ಹಂತದ ವೇಗ ಹೊಂದಿದೆ. ಅತಿಯಾದ ವೇಗ, ಮಧ್ಯಮ ವೇಗ, ನಿಧಾನ ವೇಗ ವ್ಯವಸ್ಥೆ ಇರಿಸಲಾಗಿದೆ. ಯಾವ ಉತ್ಪನ್ನದ ರಾಶಿಗೆ ಯಾವ ವೇಗ ಇರಿಸಬೇಕೆಂಬ ಸ್ಪಷ್ಟ ಮಾಹಿತಿಯನ್ನು ಯಂತ್ರದೊಂದಿಗೆ ನೀಡಲಾಗುತ್ತಿದೆ. ರೈತರು ಆಯಾ ಬೆಳೆಯ ರಾಶಿಗೆ ತಕ್ಕಂತೆ ವೇಗ ನಿಗದಿ ಪಡಿಸಿದರೆ ಸಾಕು ಸುಲಭವಾಗಿ ರಾಶಿ ಮಾಡಬಹುದಾಗಿದೆ.

ಹೆಸರು, ಜೋಳ, ಮೆಕ್ಕೆಜೋಳ, ಶೇಂಗಾ, ಭತ್ತ, ಸಿರಿಧಾನ್ಯಗಳು, ಕಡಲೆ, ತೊಗರಿ ಹೀಗೆ ಸುಮಾರು 30 ತರಹದ ಕೃಷಿ ಉತ್ಪನ್ನಗಳ ಒಂದೇ ಯಂತ್ರದಲ್ಲಿ ರಾಶಿ ಮಾಡಬಹುದಾಗಿದೆ. ಒಂದು ತಾಸಿಗೆ ಸುಮಾರು ಒಂದು ಟನ್‌ನಷ್ಟು ಶೇಂಗಾ ರಾಶಿ ಮಾಡಬಹುದಾದ ಸಾಮರ್ಥ್ಯ ಈ ಯಂತ್ರ ಹೊಂದಿದೆಯಂತೆ. ಜತೆಗೆ ರಾಶಿ ಮಾಡುವಾಗ ರೈತರಿಗೆ ಯಾವುದೇ ಅಪಾಯ ಆಗದಂತೆಯೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ವಾಹನ ಸಮೇತ ಯಂತ್ರದ ನಿರ್ವಹಣೆ ವಿಚಾರಕ್ಕೆ ಬಂದರೆ ಸುಲಭ-ಸರಳ ರೀತಿಯ ನಿರ್ವಹಣೆ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ಷಕ್ಕೊಮ್ಮೆ ಬ್ಲೇಡ್‌ಗಳ ಸ್ಥಿತಿಗತಿ ಗಮನಿಸಿ ಬದಲಾಯಿಸಬೇಕಾಗುತ್ತದೆ. ಇಲೆಕ್ಟ್ರಿಕ್‌ ವಾಹನ 8 ವರ್ಷಗಳು ಹಾಗೂ ಬ್ಯಾಟರಿ 3-5 ವರ್ಷಗಳವರೆಗೆ ವಾರೆಂಟಿ ಹೊಂದಿದೆ. ­

ರೈತರಿಗೆ ಪ್ರಯೋಜನಕಾರಿ ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಜತೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್‌ ವಾಹನ ನೀಡಲಾಗುತ್ತಿದೆ. ವಿಎ ಇ-100 ವಾಹನವನ್ನು ಹೊಲ-ಗದ್ದೆಗಳಿಗೂ ಸುಲಭವಾಗಿ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಹೊಲಗಳಲ್ಲಿ ಕೆಸರು ಇರುತ್ತದೆ ಅದಕ್ಕೂ ಹೊಂದಿಕೊಳ್ಳುವ ರೀತಿ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಹೊಸತನ ಸೇರಿಸುವ ಚಿಂತನೆ ಹೊಂದಲಾಗಿದೆ. –ಕಾರ್ತಿಕ ಅರ್ಥೇಯ, ವಿಶ್ವಕರ್ಮ ಅಗ್ರಿಕಲ್ಚರ್‌

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.