ಮಾತೃಪೂರ್ಣ ಅನುಷ್ಠಾನಕ್ಕೆ ಸಕಲ ಸಿದ್ಧತೆ


Team Udayavani, Sep 23, 2017, 1:27 PM IST

hub4.jpg

ಧಾರವಾಡ: ಅಪೌಷ್ಟಿಕತೆ ಎಂಬುದನ್ನು ಬೇರಿನಿಂದಲೇ ಸರಿಪಡಿಸುವ ನಿಟ್ಟಿನಲ್ಲಿ ರೂಪಿಸಿರುವ ಮಾತೃಪೂರ್ಣ ಯೋಜನೆಯ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು. ನಗರದ ಕಲಾಭವನದಲ್ಲಿ ಜರುಗಿದ ಮಾತೃ ಪೂರ್ಣ ಯೋಜನೆ ಕುರಿತಂತೆ ಬೆಳಗಾವಿ ವಿಭಾಗಮಟ್ಟದ ಕಾರ್ಯಾಗಾರದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಜಮಖಂಡಿ ಸೇರಿದಂತೆ ವಿವಿಧ ಕಡೆ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಇದೀಗ ಅ.2ರಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಈಗಾಗಲೇ ಪೂರ್ವ ಸಿದ್ಧತೆ ಕೈಗೊಂಡು ಸಕಲ ತಯಾರಿಯನ್ನು ಇಲಾಖೆ ಮಾಡಿಕೊಂಡಿದೆ ಎಂದರು. 

ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಶೇ.40 ರಷ್ಟು ಗರ್ಭಿಣಿ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡು ಬಂದಿದ್ದು, ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾತೃಪೂರ್ಣ ಯೋಜನೆ ರೂಪಿಸಿದೆ. ಈ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೋಷಕಾಂಶಯುಕ್ತ ಬಿಸಿಯೂಟ ಲಭ್ಯವಾಗಲಿದೆ ಎಂದರು. 

ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡುವ ನಿಟ್ಟಿನಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ನೀಡಲಾಗುತ್ತಿದ್ದು, ಈಗಾಗಲೇ ಈ ಕುರಿತಂತೆ ಬೆಂಗಳೂರು ವಿಭಾಗಮಟ್ಟದ ಸಭೆ ಕೈಗೊಳ್ಳಲಾಗಿದೆ. ಬೆಳಗಾವಿ ವಿಭಾಗಮಟ್ಟದ ಈ ಸಭೆಯ ಬಳಿಕ ಮೈಸೂರು, ಕಲಬುರ್ಗಿ ವಿಭಾಗ ಮಟ್ಟದಲ್ಲೂ ಸಭೆ ನಡೆಸಲಾಗುವುದು.

ಈ ಸಭೆಗಳಲ್ಲಿ ಯೋಜನೆ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಈ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ-ಸೂಚನೆ ನೀಡಲಾಗುತ್ತಿದೆ ಎಂದರು. ತಾಯಿ ಆರೋಗ್ಯದ ಮೇಲೆ ಮಗುವಿನ ಆರೋಗ್ಯ ನಿಂತಿದ್ದು, ಹೀಗಾಗಿ ಈ ತಾಯಿ ಬೇರಿನ ಆರೋಗ್ಯ ಸಮಸ್ಯೆ ಮೊದಲು ಸರಿಪಡಿಸಬೇಕಿದೆ.

ಇದಕ್ಕಾಗಿ ಈ ಯೋಜನೆ ಮೂಲಕ ಬಿಸಿ ಅನ್ನ, ಸಾಂಬಾರು, ಮೊಟ್ಟೆ, ಹಾಲು, ಶೇಂಗಾ ಉಂಡೆ ನೀಡಲಾಗುವುದು. ಈ ಯೋಜನೆಯ ಅನುಷ್ಠಾನದಲ್ಲಿ ಕೆಲ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸೂಚಿಸಿದ್ದು, ಇದಕ್ಕಾಗಿ ಅಂಗನವಾಡಿ ಮಟ್ಟದ ಬಾಲ ವಿಕಾಸ ಸಮಿತಿಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಕೆಲ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಡಿಸಿ ಮತ್ತು ಸಿಇಒ ಅವರಿಗೆ ಸೂಚನೆ ನೀಡಲಾಗಿದೆ.

ಹಂತ-ಹಂತವಾಗಿ ಕೆಲ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದರು. ಬೇರೆಯವರು ಮಾಡಿದ ಊಟ ನಾವೇಕೆ  ಮಾಡಬೇಕೆಂಬ ಮನೋಭಾವ ಕೆಲವರಲ್ಲಿದ್ದು, ಇವುಗಳನ್ನು ವೈಜ್ಞಾನಿಕವಾಗಿ ಆಪ್ತ ಸಮಾಲೋಚನೆ ಮೂಲಕ ಬಗೆಹರಿಸುವ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಕೆಳಹಂತದಿಂದ ಮೇಲು ಹಂತದವರಿಗೆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು. 

ಟಾಪ್ ನ್ಯೂಸ್

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.