ಆರ್ಟ್‌ವಾಲೆ ಆರ್ಟ್‌ ಗ್ಯಾಲರಿಗೆ ಚಾಲನೆ

Team Udayavani, Sep 9, 2019, 9:34 AM IST

ಹುಬ್ಬಳ್ಳಿ: ಸಚಿವ ಜಗದೀಶ ಶೆಟ್ಟರ ಚಿತ್ರಕಲಾಕೃತಿಗಳನ್ನು ವೀಕ್ಷಿಸಿದರು.

ಹುಬ್ಬಳ್ಳಿ: ಕೊಪ್ಪಿಕರ ರಸ್ತೆಯ ಸ್ಯಾಟ್ಲೈಟ್ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾದ ಆರ್ಟ್‌ವಾಲೆ ಆರ್ಟ್‌ ಗ್ಯಾಲರಿ, ಜಿಎಂ ಮಾಡ್ಯುಲರ್‌ ಡಿಸ್‌ಪ್ಲೇ ಗ್ಯಾಲರಿಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ರವಿವಾರ ಉದ್ಘಾಟಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ವಿಆರ್‌ಎಲ್ ಗ್ರುಪ್‌ನ ಚೇರ್ಮನ್‌ ವಿಜಯ ಸಂಕೇಶ್ವರ, ಕ್ರೆಡೈ ಅಧ್ಯಕ್ಷ ಸುರೇಶ ಶೇಜವಾಡಕರ, ಇಂದ್ರಜಿತ್‌ ಕೆಂಭಾವಿ, ಜಿಎಂ ಮ್ಯಾಡುಲರ್‌ ಚೇರ್ಮನ್‌ ರಮೇಶ ಜೈನ, ಅನಿಲ ಜೈನ, ಮಹೇಶ ಹಿರೇಮಠ, ಸಿಇಒ ನವೀನ ಝಾ, ಸಹ ಸಂಸ್ಥಾಪಕ ಗೌತಮ ಓಸ್ತವಾಲ್ ಮೊದಲಾದವರಿದ್ದರು.

ಸಹ ಸಂಸ್ಥಾಪಕಿ, ಕಲಾವಿದೆ ಪ್ರಿಯಾಲ್ ಓಸ್ತವಾಲ್ ಮಾತನಾಡಿ, ಸ್ಥಳೀಯ ಕಲಾವಿದರು ಸೇರಿದಂತೆ ದೇಶದ ಯಾವುದೇ ಭಾಗದ ಕಲಾವಿದರು ತಮ್ಮ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಅಲ್ಲದೆ ಮಾರುಕಟ್ಟೆ ಒದಗಿಸಿಕೊಳ್ಳಬಹುದು. ಆ ಕಾರ್ಯ ಆರ್ಟ್‌ವ್ಯಾಲೆ ಸಂಸ್ಥೆಯಿಂದ ನಡೆಯುತ್ತಿದೆ. ಇಲ್ಲಿ 100ಕ್ಕೂ ಅಧಿಕ ಕಲಾವಿದರು ಚಿತ್ರಿಸಿರುವ ಚಿತ್ರಕಲೆಗಳಿವೆ. 2500ಕ್ಕೂ ಹೆಚ್ಚು ಕಲಾಕೃತಿಗಳು ಇವೆ. ಕಲಾವಿದರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲಾಗಿದೆ. 2000ರೂ.ದಿಂದ ಆರಂಭವಾಗಿ 2ಲಕ್ಷ ರೂ. ಮೌಲ್ಯದ ವರೆಗಿನ ಚಿತ್ರಕಲೆಗಳಿವೆ. ಕಲಾವಿದರು ಇಲ್ಲಿಯೇ ತಮ್ಮ ಚಿತ್ರಕಲೆ ತಯಾರಿಸಬಹುದು ಹಾಗೂ ನೌಕರರಾಗಿ ಕೆಲಸ ಮಾಡಬಹುದು ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ