ಹಳ್ಳಿಗಳಲ್ಲಿ ಕೋವಿಡ್ 19 ತಡೆಗೆ ಸುತ್ತಾಟ

Team Udayavani, Mar 22, 2020, 5:56 PM IST

ಗದಗ: ಮಹಾಮಾರಿ ಕೋವಿಡ್ 19 ವೈರಾಣುಗಳ ತಡೆಗೆ ಇಡೀ ವಿಶ್ವವೇ ಸಮರ ಸಾರಿದೆ. ಅದರ ಅಂಗವಾಗಿ ಸರಕಾರ ಹಾಗೂ ಸಂಘ ಸಂಸ್ಥೆಗಳು ನಗರ ಪ್ರದೇಶದಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ.

ಆದರೆ, ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸದ್ದಿಲ್ಲದೇ ಜಾಗೃತಿ ಕಾರ್ಯಕ್ಕೆ ಧುಮುಕಿದೆ. ಅತ್ಯಾಧುನಿಕ ಸೆನ್ಸಾರ್‌ ಥರ್ಮಾಮೀಟರ್‌ ಹಿಡಿದು ಹಳ್ಳಿ ಹಳ್ಳಿ ಸುತ್ತುವ ಮೂಲಕ ಗ್ರಾಮೀಣ ಜನರ ಗಮನ ಸೆಳೆಯುತ್ತಿದೆ.

ಕಳೆದ ಮೂರು ವರ್ಷಗಳಿಂದ ಗದುಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಶೈಕ್ಷಣಿಕ ಕಾರ್ಯಗಳೊಂದಿಗೆ ಸಮಾಜಮುಖೀ ಚಟುವಟಿಕೆಗಳಿಂದಾಗಿ ಗ್ರಾಮೀಣ ಭಾಗದಲ್ಲಿಮನೆ ಮಾತಾಗಿದೆ. ಅದರಂತೆ ಇದೀಗ ವಿಶ್ವವನ್ನೇ ಹೆಮ್ಮಾರಿಯಾಗಿ ಕಾಡುತ್ತಿರುವ ಕೋವಿಡ್ 19  ವೈರಾಣುಗಳ ಹರಡುವಿಕೆಗೆ ಕಾರಣ ಮತ್ತು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಸಂದೇಶಗಳನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಎಲ್ಲೆಲ್ಲಿ ಜಾಗ್ರತಿ ಕಾರ್ಯಕ್ರಮ: ಕಳೆದ ಒಂದು ವಾರದಿಂದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ, ಸಾರ್ವಜನಿಕ ಆರೋಗ್ಯ ವಿಭಾಗ ಹಾಗೂ ಯೂತ್‌ ರೆಡ್‌ಕ್ರಾಸ್‌ ಸಹಯೋಗದಲ್ಲಿ ಜಾಗೃತಿ ಕಾರ್ಯ ನಡೆಸುತ್ತಿದೆ. ವಿವಿಧ ದತ್ತು ಪಡೆದಿರುವ ಕಳಸಾಪುರ, ನಾಗಾವಿ, ಬಿಂಕದಕಟ್ಟಿ, ಹುಲಕೋಟಿ ಹಾಗೂ ಕುರ್ತಕೋಟಿ ಗ್ರಾಮಗಳಲ್ಲಿ ಒಂದು ಸುತ್ತಿನ ಜಾಗೃತಿ ಕಾರ್ಯಕ್ರಮ ನಡೆಸಿದೆ. ಜೊತೆಗೆ ಸಮೀಪದ ನರಸಾಪುರ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ, ಕೊರೊನಾ ವೈರಾಣುಗಳ ಬಗ್ಗೆ ಜನರನ್ನು ಎಚ್ಚರಿಸಿದೆ.

ಜೊತೆಗೆ ಸಾರ್ವಜನಿಕ ಆರೋಗ್ಯ ವಿಭಾಗದ ಸಹ ಸಂಯೋಜಕಿ ಡಾ| ನಾಗವೇಣಿ ಹಾಗೂ ಡಾ| ಗೂಳಪ್ಪ ಎಂ.ಡಿ. ನೇತೃತ್ವದಲ್ಲಿ ಸಾರ್ವಜನಿಕರ ವಿವಿಯಲ್ಲಿರುವ ಅತ್ಯಾಧುನಿಕವಾದ ಇನ್ಫ್ರಾರೆಡ್‌ ಥರ್ಮಾಮೀಟರ್‌(ದೇಹದ ಉಷ್ಣಾಂಶ ಅಳೆಯುವ ಮಾಪನ) ವನ್ನು ಬಳಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಈ ವೇಳೆ 98 ಡಿಗ್ರಿಗಿಂತ ಹೆಚ್ಚಿನ ಜ್ವರ ಕಂಡು ಬಂದಲ್ಲಿ ಈ ಮಾಪನದಲ್ಲಿ ಒಂದು ಎಚ್ಚರಿಕೆಯ ಶಬ್ಧ ಮೊಳಗುತ್ತದೆ. ಜೊತೆಗೆ ಕೆಮ್ಮು, ನೆಗಡಿ ಹಾಗೂ ಕಫಾದಿಂದ ಬಳಲುತ್ತಿರುವವರನ್ನು ಗುರುತಿಸಿ, ಆಸ್ಪತ್ರೆಗೆ ತೆರಳುವಂತೆ ಸೂಚಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಆದರೆ, ಈ ವರೆಗೆ ವಿವಿಧ ಗ್ರಾಮಗಳಲ್ಲಿ ನಡೆಸಿದ ಅಭಿಯಾನದಲ್ಲಿ ಯಾವುದೇ ವ್ಯಕ್ತಿಯಲ್ಲಿ ಜ್ವರ ಸೇರಿದಂತೆ ಕೋವಿಡ್ 19  ವೈರಾಣು ಲಕ್ಷಣಗಳ ಪಟ್ಟಿಯಲ್ಲಿರುವ ಲಕ್ಷಣಗಳು ಕಂಡುಬಂದಿಲ್ಲ ಎಂಬ ಸಂಗತಿ ಹೊರಬಿದ್ದಿರುವುದು ಸಮಾಧಾನಕರ ಸಂಗತಿ. ಅಲ್ಲದೇ, ವಿವಿ ಮೂಲಗಳ ಪ್ರಕಾರ ಮಾರ್ಚ್‌ 31ರ ವರೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ಅಭಿಯಾನ ಮುಂದುವರಿಸಲಿದೆ ಎನ್ನಲಾಗಿದೆ. ಒಟ್ಟಾರೆ, ಗ್ರಾವಿವಿ ನಡೆಸುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

 

-ವೀರೇಂದ್ರ ನಾಗಲದಿನ್ನಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗದಗ: ದೇಶದಲ್ಲಿ ಕೋವಿಡ್ 19 ಭೀತಿ ಶುರುವಾದಾಗಿನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಾಸ್ಕ್ ಪೂರೈಕೆಯಿಲ್ಲದೇ ಗ್ರಾಪಂ ಮಟ್ಟದ ಸ್ವಚ್ಛತಾ...

  • ಗದಗ: ಬಯಲು ಸೀಮೆ ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ವಿವಿಧ ಹಣ್ಣುಗಳು ಅಂತಾರಾಷ್ಟ್ರೀಯ...

  • ಗದಗ: ಮಹಾಮಾರಿ ಕೋವಿಡ್ 19 ತಡೆಗಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಐದು ದಿನಗಳಾದರೂ ಜಿಲ್ಲೆಯಲ್ಲಿ ಅದರ ಗಂಭೀರತೆ ಕಾಣುತ್ತಿಲ್ಲ. ಅನಗತ್ಯವಾಗಿ ಅಲೆದಾಡುವವರ...

  • ಗದಗ: ಕೋವಿಡ್ 19 ಬಗ್ಗೆ ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ. ಆದರೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಬಗ್ಗೆ ಗಂಭೀರತೆ...

  • ಲಕ್ಷ್ಮೇಶ್ವರ: ಕೋವಿಡ್ 19 ವೈರಸ್‌ ಹರಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕಾಡಳಿತ ಕಟ್ಟಿನಿಟ್ಟಿನ ಕ್ರಮಕೈಗೊಳ್ಳುತ್ತಿದ್ದರೂ ಜನರ ಅಸಹಕಾರ ಮುಂದುವರಿದಿದ್ದು,...

ಹೊಸ ಸೇರ್ಪಡೆ