ಮೇವು ಪಡೆಯಲು ಹಿಂದೇಟು

•1.50 ಟನ್‌ ಮಾತ್ರ ಖರ್ಚು •ಬ್ಯಾಂಕ್‌ನಲ್ಲೇ ಕೊಳೆಯುತ್ತಿದೆ ಮೇವು

Team Udayavani, May 22, 2019, 9:05 AM IST

ನರೇಗಲ್ಲ: ಬರಗಾಲ ಹಿನ್ನೆಲೆಯಲ್ಲಿ ಸರಕಾರ ಅಲ್ಲಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದೆ. ಆದರೆ ಅಲ್ಲಿರುವ ಮೇವು ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದು, ಬ್ಯಾಂಕ್‌ನಲ್ಲಿ ಮೇವು ಗೆದ್ದಲು ಹತ್ತುವ ಹಂತ ತಲುಪಿದೆ.

ಜಿಲ್ಲಾಡಳಿತವು ರೋಣ ಹಾಗೂ ಗಜೇಂದ್ರಗಡ ತಾಲೂಕು ವ್ಯಾಪ್ತಿಯ ಹಾಲಕೆರೆ, ರಾಜೂರು, ಬೆಣಚಮಟ್ಟಿ, ಮಾಡಲಗೇರಿ, ಚಿಕ್ಕಮಣ್ಣೂರ ಗ್ರಾಪಂಗಳಲ್ಲಿ ಮೇವು ಸಂಗ್ರಹ ಮಾಡಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರೂ ಸರ್ಕಾರ ಕೊಡುತ್ತಿರುವ ಮೇವನ್ನು ಕೊಂಡುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಜೋಳದ ದಂಟು ತಿಂದ ದನಗಳು ಈ ಹೊಟ್ಟು ತಿನ್ನಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಹಣ ಕೊಟ್ಟು ವೇವು ಖರೀದಿಸಲು ಹಿಂದೆಮುಂದೆ ನೋಡುವಂತಾಗಿದೆ ಎನ್ನುತ್ತಾರೆ ರೈತರು.

ಒಂದು ಕೆಜಿ ಒಣ ಮೇವಿಗೆ 2 ರೂ. ನಂತೆ ತೂಕ ಹಾಕಿ ಜಾನುವಾರುಗಳಿಗೆ 15 ದಿನಗಳ ಮಟ್ಟಿಗೆ ನೀಡಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಈಗಾಗಲೇ ಶೇಖರಣೆಯಾಗಿ ಸುಮಾರು ತಿಂಗಳುಗಳೇ ಕಳೆದಿವೆ. ಆದರೂ ಜಾನುವಾರುಗಳನ್ನು ಹೊಂದಿರುವ ರೈತರು ವಾರಕ್ಕೆ ಒಬ್ಬರು, ಇಲ್ಲವೇ 15 ದಿನಕ್ಕೆ ಒಬ್ಬರು ಬಂದು ಮೇವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಶೇಖರಣೆಯಾಗಿರುವ ಮೇವು ಗೆದ್ದಲು ಹತ್ತಿ ಉಪಯೋಗಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಒಟ್ಟು 15 ಟನ್‌ ಮೇವು ಬಂದಿದೆ. ಚಿಕ್ಕಮಣ್ಣೂರ ಮತ್ತು ಮಾಡಲಗೇರಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಿ ಅಲ್ಲಿ ಮೇವು ಸಂಗ್ರಹಿಸಿಡಲಾಗಿದೆ. ಈಗಾಗಲೇ 1.50 ಟನ್‌ನಷ್ಟು ಮಾತ್ರ ಖರ್ಚಾಗಿದೆ.

•ಸಿಕಂದರ ಎಂ. ಆರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮುಂಡರಗಿ: ರಾಜ್ಯದಲ್ಲಿರುವ ತಾಂಡಾಗಳ ಮರು ಪರಿಶೀಲನೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ತಾಂಡಾಗಳು ಕಂದಾಯ ಗ್ರಾಮಕ್ಕೆ ಒಳಪಟ್ಟಿಲ್ಲವೋ ಅಂತಹ ತಾಂಡಾಗಳು...

  • ನರೇಗಲ್ಲ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ವಿಶ್ವ ಹಿಂದು ಪರಿಷತ್‌, ಭಜರಂಗದಳ...

  • ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಶುಕ್ರವಾರ ಸಾರ್ವಜನಿಕರು ಶ್ರದ್ಧೆ- ಭಕ್ತಿಯಿಂದ ಆಚರಿಸಿದರು. ಸೂರ್ಯೋದಯಕ್ಕೂ...

  • ನರಗುಂದ: ಜೀವ ಜಲಕ್ಕಾಗಿ ರೈತರ ಹೋರಾಟ ಕಡೆಗಣಿಸಿದ ವ್ಯಕ್ತಿಗಳಿಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀತಿ ಪಾಠವಾಗಿದೆ. ಮಲಪ್ರಭೆಗೆ ತಾಯಿ ಮಹದಾಯಿ ಜೋಡಣೆಯಾಗುವವರೆಗೂ...

  • ನರೇಗಲ್ಲ: ನಾಗರಾಳ ಗ್ರಾಮದ ರೈತರು ಗಜ್ಜರಿ ಬೆಳೆದು ಆರ್ಥಿಕವಾಗಿ ಸೃದಢರಾಗುತ್ತಿದ್ದಾರೆ. ಹೌದು, ಸಮೀಪದ ನಾಗರಾಳ ಗ್ರಾಮದಲ್ಲಿ ಕಳೆದ ಎರಡು ಶತಮಾನಗಳಿಂದ ರೈತರು...

ಹೊಸ ಸೇರ್ಪಡೆ