ಬದುಕೇ ಕೊಚ್ಚಿಹೋಯ್ತು

•ಮಲಪ್ರಭಾ ನದಿ ಎರಡೂ ಸೇತುವೆಗಳ ಮಾರ್ಗ ಕಡಿತ •ಜಲಾವೃತಗೊಂಡಿದ್ದ ಕೊಣ್ಣೂರ ಪ್ರವಾಹ ಇಳಿಮುಖ

Team Udayavani, Aug 11, 2019, 12:03 PM IST

ನರಗುಂದ: ಮಲಪ್ರಭಾ ಪ್ರವಾಹಕ್ಕೆ ಜಲಾವೃತಗೊಂಡ ಗಡಿಗ್ರಾಮ ಲಖಮಾಪುರ ಮುಖ್ಯರಸ್ತೆಯೇ ಕೊಚ್ಚಿಕೊಂಡು ಹೋಗಿದೆ.

ನರಗುಂದ: ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಗಡಿಭಾಗವಾಗಿರುವ ತಾಲೂಕಿನ ಲಖಮಾಪುರ ಗ್ರಾಮದ ಗೋಳು ಇನ್ನೂ ತೀರದಾಗಿದೆ. ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಾಗಿರುವ ಈ ಗ್ರಾಮದ ಏಕೈಕ ಮುಖ್ಯ ರಸ್ತೆಯೂ ಕೊಚ್ಚಿಕೊಂಡು ಹೋದ ಪರಿಣಾಮ ಪ್ರವಾಹ ತೀರಿದರೂ ಹೊರಪ್ರಪಂಚಕ್ಕೆ ಇದು ಇನ್ನೂ ದೂರವಾಗಿದೆ.

ನರಗುಂದ ಕೇಂದ್ರ ಸ್ಥಾನದಿಂದ 25 ಕಿಮೀ ದೂರದ ಲಖಮಾಪುರ ಮಲಪ್ರಭಾ ನದಿ ಪ್ರವಾಹಕ್ಕೆ ಪ್ರಥಮವಾಗಿ ಧಕ್ಕೆಯಾಗುವ ಗ್ರಾಮ. ನದಿಯಿಂದ ಕೇವಲ ಅರ್ಧ ಕಿಮೀಗೂ ಕಡಿಮೆ ಅಂತರದಲ್ಲಿರುವ ಗ್ರಾಮ ಮೂರು ದಿನಗಳಿಂದ ಸಂಪೂರ್ಣ ಜಲಾವೃತ ಗೊಂಡಿದೆ. ಗ್ರಾಮದ ಮುಂಭಾಗ ಸೇತುವೆ ಎರಡೂ ಕಡೆಗೆ 100 ಮೀಟರ್‌ಗೂ ಹೆಚ್ಚು ರಸ್ತೆ ಕೊಚ್ಚಿಹೋಗಿದೆ.

ಪ್ರವಾಹ ಪೂರ್ವವೇ ಇಲ್ಲಿನ ಎಲ್ಲ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದರಿಂದ ಜಾನುವಾರು ಸಹಿತ ಒಂದು ನರಪಿಳ್ಳೆಯೂ ಗ್ರಾಮದಲ್ಲಿ ಉಳಿದಿಲ್ಲ. ಪ್ರವಾಹ ತೀರಿದ ಬಳಿಕ ವಾಹನ ಮಾತ್ರವಲ್ಲ ಜನರು ನಡೆದುಕೊಂಡು ಹೋಗಲೂ ಈ ಗ್ರಾಮಕ್ಕೆ ಅವಕಾಶ ಇಲ್ಲದಂತಾಗಿದ್ದು, ಗ್ರಾಮಸ್ಥರನ್ನು ಚಿಂತೆಗೀಡಾಗಿಸಿದೆ.

ಗ್ರಾಮದಲ್ಲಿ 1100 ಜನಸಂಖ್ಯೆ ಹೊಂದಿದ್ದು, 250 ಮನೆಗಳಿವೆ. ಗ್ರಾಮ ವ್ಯಾಪ್ತಿಗೆ 208 ಎಕರೆ ಕೃಷಿ ಭೂಮಿಯಿದ್ದು, ಕಬ್ಬು, ಗೋವಿನಜೋಳ, ಹತ್ತಿ, ಈರುಳ್ಳಿ, ಕಾಯಿಪಲ್ಯೆ ಬೆಳೆ ಸಂಪೂರ್ಣ ಜಲಾವೃತಗೊಂಡಿವೆ.

ಸ್ಥಳಾಂತರ ಬೇಡಿಕೆ: ಹಿಂದಿನಿಂದಲೂ ಗ್ರಾಮ ಸ್ಥಳಾಂತರಕ್ಕೆ ವಿರೋಧಿಸಿದ್ದ ಲಖಮಾಪುರ ಗ್ರಾಮಸ್ಥರು ಈ ಬಾರಿಯ ಪ್ರವಾಹ ಭೀಕರತೆಗೆ ಸ್ಥಳಾಂತರವೇ ಸೂಕ್ತವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಗಡಿ ಭಾಗದಲ್ಲಿದ್ದರೂ ನರಗುಂದ ತಾಲೂಕು ವ್ಯಾಪ್ತಿಗೆ ಒಳಪಡುವ ಇಚ್ಛೆ ಹೊಂದಿದ ಗ್ರಾಮಸ್ಥರು ಕೂಡಲೇ ನಮ್ಮ ಗ್ರಾಮ ಸ್ಥಳಾಂತರ ಮಾಡಿ ನಮ್ಮ ಬದುಕು ಕಟ್ಟಿಕೊಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

 

ಸಿದ್ಧಲಿಂಗಯ್ಯ ಮಣ್ಣೂರಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...

  • ಈ ವಾರ ಬೆಂಗಳೂರಿನಲ್ಲಿ ಪ್ರತೀವರ್ಷದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ದೇಶವಿದೇಶಗಳ ಚಿತ್ರಗಳನ್ನೂ...

  • ಉಡುಪಿ: ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನವೀಕರಣ ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾ ಯಾಗ, ಶೈವೋ ತ್ಸವ, ರಂಗಪೂಜೆ ಮಹೋತ್ಸವವು ಫೆ. 24ರಿಂದ 29ರ...

  • ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ...

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...