ವರ್ಷವಾದರೂ ದುರಸ್ತಿಯಾಗದ ನೀರಿನ ಘಟಕ


Team Udayavani, May 4, 2019, 2:17 PM IST

gad-4

ರೋಣ: ಪಟ್ಟಣದ ಹೃದಯ ಭಾಗವೆಂದು ಕರೆಯಿಸಿಕೊಳ್ಳುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕ ಬಂದಾಗಿ ವರ್ಷ ಕಳೆದರೂ ಇಲ್ಲಿನ ಪುರಸಭೆ ಅದರ ರಿಪೇರಿಗೆ ಮುಂದಾಗಿಲ್ಲ. ಇದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪಟ್ಟಣಕ್ಕೆ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರಿಗಾಗಿ ಪಟ್ಟಣದ ಜನತೆ ಬೀದಿಗಿಳಿದು ಪ್ರತಿಭಟಿಸುವ ಸ್ಥಿತಿ ಬಂದೊದಗಿದೆ.

ಸದ್ಯ ಪಟ್ಟಣಕ್ಕೆ ಮಲಪ್ರಭಾ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹತ್ತಿರವಿರುವ ಜಾಕ್‌ವೆಲ್ ಮೂಲಕ ಪಟ್ಟಣಕ್ಕೆ ನೀರನ್ನು ತಂದು ಇಲ್ಲಿ ಶುದ್ಧಿಕರಿಸಿ ನಂತರ ವಾರ್ಡ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೆ ಪಟ್ಟಣದಲ್ಲಿ ಒಟ್ಟು 42 ಬೋರ್‌ವೆಲ್ಗಳಿದ್ದು, ಅವುಗಳಲ್ಲಿ 31 ಚಾಲ್ತಿಯಲ್ಲಿವೆ.

ಕುಡಿಯುವ ನೀರಿನ ಇಲಾಖೆಯ ತಜ್ಞರು ಹೇಳುವಂತೆ ಒಂದು ಬೋರ್‌ವೆಲ್ನಿಂದ ಒಂದು ತಾಸಿಗೆ 4 ಸಾವಿರ ಲೀಟರ್‌ ನೀರು ಹೊರ ಬರುತ್ತದೆ. ಒಂದು ಬೋರ್‌ವೆಲ್ ದಿನಕ್ಕೆ 8 ಗಂಟೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಒಂದು ಬೋರ್‌ವೆಲ್ ದಿನಕ್ಕೆ 32 ಸಾವಿರ ಲೀಟರ್‌ ನೀರನ್ನು ಒದಗಿಸುತ್ತವೆ. ಒಟ್ಟು 31 ಬೋರ್‌ವೆಲ್ ಸೇರಿದರೆ ದಿನವೊಂದಕ್ಕೆ 10,24,000 ಲೀಟರ್‌ ನೀರು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಪಟ್ಟಣದ ಬೋರ್‌ವೆಲ್ಗಳಿಂದ ಸಿಗುವ ನೀರಿನ ಅಂಕಿ ಅಂಶವಾದರೆ, ಇನ್ನು ಚೊಳಚಗುಡ್ಡ ಜಾಕ್ವೆಲ್ನಲ್ಲಿ 50 ಎಚ್ಪಿ ಯಂತ್ರದ ಮೂಲಕ ನದಿಯಲ್ಲಿ ನೀರಿನ ಸಂಪನ್ಮೂಲ ಸರಿಯಾಗಿ ಇದ್ದರೆ ದಿನಕ್ಕೆ 10 ಲಕ್ಷ ಲೀಟರ್‌ ನೀರು ಪೂರೈಕೆ ಮಾಡ ಬಹುದಾಗಿದೆ.

ಪುರಸಭೆ ಮೇಲೆ ಸಂಶಯ: ಪಟ್ಟಣದ 23 ವಾರ್ಡ್‌ಗಳು ಸೇರಿ 25,500 ಜನಸಂಖ್ಯೆ ಹೊಂದಿದೆ. ನಗರ ಪ್ರದೇಶದಲ್ಲಿ ಒಬ್ಬ ಮನುಷ್ಯನಿಗೆ ದಿನ ಬಳಕೆಗೆ 100 ಲೀಟರ್‌ ಅಂದರೆ, ಒಟ್ಟು ಜನಸಂಖ್ಯೆಗೆ ಅನುಗುಣವಾಗಿ 26 ಲಕ್ಷ ಲೀಟರ್‌ ನೀರಿನ ಅವಶ್ಯಕತೆಯಿದ್ದು, ಸದ್ಯ 20 ಲಕ್ಷ ಲೀಟರ್‌ಗೂ ಹೆಚ್ಚು ನೀರು ದೊರೆಯುತ್ತದೆ. ಇದರಿಂದ ಕನಿಷ್ಠ 2-3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ ಈಗ ಪಟ್ಟಣಕ್ಕೆ 8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ಜನತೆಗೆ ಪೂರೈಸಬೇಕಾದ ನೀರನ್ನು ಪುರಸಭೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಲ್ಲಿ ಹರಿಸುತ್ತಿದ್ದಾರೆ ಎಂಬ ಸಂಶಯ ಜನರಿಗೆ ಕಾಡುತ್ತಿದೆ.

ರೋಣ: ಪಟ್ಟಣದ ಪೋತರಾಜನಕಟ್ಟೆಯ ಬಳಿ ಸ್ಥಗಿತಗೊಂಡಿರುವ ಶುದ್ಧನೀರಿನ ಘಟಕ.

ಶೀಘ್ರ ರಿಪೇರಿಗೆ ಸೂಚನೆ

ತಕ್ಷಣವೇ 4ನೇ ವಾರ್ಡ್‌ನಲ್ಲಿ ಬರುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿ ಅಲ್ಲಿನ ಸಾರ್ವಜನಿಕರಿಗೆ ಶುದ್ಧ ನೀರನ್ನು ನೀಡುವಂತೆ ಕೂಡಲೆ ರೋಣ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡುತ್ತೇನೆ.
•ಕಳಕಪ್ಪ ಬಂಡಿ, ರೋಣ ಶಾಸಕ

ಸ್ಥಗಿತಗೊಂಡು ವರ್ಷ ಕಳೆಯಿತು

ಪಟ್ಟಣದ ಹೃದಯವೆಂದು ಕರೆಯಿಸಿಕೊಳ್ಳುವ ಹಾಗೂ ಹೆಚ್ಚು ಕೃಷಿ ಕೂಲಿಕಾರ್ಮಿಕನ್ನು ಹೊಂದಿರುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷ ಕಳೆಯಿತು. ಆದರೂ ರಿಪೇರಿಯಾಗಿಲ್ಲ. ಇದರಿಂದ ಇಲ್ಲಿನ ಜನತೆ ದೂರದ ವಾರ್ಡ್‌ನಿಂದ ನೀರನ್ನು ತರಬೇಕಾಗಿದೆ.
•ವಿಜಯಕುಮಾರ ಸಜ್ಜನ್‌, ಸ್ಥಳೀಯ ನಿವಾಸಿ

ಕುಡಿಯುವ ನೀರಿಗೆ ಹಾಹಾಕಾರ

ಎಲ್ಲ ಕಾಲದಲ್ಲೂ ಪಟ್ಟಣದ ಜನರಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಸದಾ ಕಾಡುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಹುಡಕಿ ಪಟ್ಟಣದ ಜನರಿಗೆ ಸಮರ್ಪಕ ನೀರನ್ನು ಒದಗಿಸಲು ಮುಂದಾದರೆ ಸಾಕು.
•ಜಯಪ್ರಕಾಶ ಬಳಗಾನೂರ, ಯುವ ಮುಖಂಡ

ಟಾಪ್ ನ್ಯೂಸ್

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Gadag; ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

Gadag; Gadag rural station CPI suspended due to dereliction of duty

Gadag; ಕರ್ತವ್ಯ ಲೋಪ ಹಿನ್ನೆಲೆ ಗದಗ ಗ್ರಾಮೀಣ ಠಾಣೆ ಸಿಪಿಐ ಸಸ್ಪೆಂಡ್

ಭಾರಿ ಮಳೆಗೆ ಮರದ ಬಳಿ ನಿಂತ್ತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ಭಾರಿ ಮಳೆಗೆ ಮರದ ಬಳಿ ನಿಂತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.