
ಕಾಲೇಜು ವಿದ್ಯಾರ್ಥಿ-ಸಿಬ್ಬಂದಿಗೆ ಲಸಿಕೆ
Team Udayavani, Jul 1, 2021, 9:21 PM IST

ಲಸಿಕಾಕರಣ ಪೂರ್ಣಗೊಂಡ ನಂತರವೇ ಕಾಲೇಜು ಆರಂಭಿಸಿ: ಎಂ.ಸುಂದರೇಶ್ ಬಾಬು
ಗದಗ: ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ 18 ವರ್ಷ ಮೇಲ್ಪಟ್ಟ ಅರ್ಹ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗೆ ಶೀಘ್ರವೇ ಕೋವಿಡ್ ಲಸಿಕಾಕರಣ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ವಿಡಿಯೋ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಲಸಿಕಾಕರಣ ಕೈಗೊಳ್ಳುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಸಿಕಾಕರಣ ಪೂರ್ಣಗೊಳಿಸಿದ ನಂತರವೇ ಕಾಲೇಜುಗಳನ್ನು ಆರಂಭಿಸಬೇಕು. ಜಿಲ್ಲೆಯಲ್ಲಿ ಕಾಲೇಜು ಸಿಬ್ಬಂದಿ ಸೇರಿದಂತೆ ಒಟ್ಟು ಅಂದಾಜು 25 ಸಾವಿರ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹರೆಂದು ಅಂದಾಜಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಕಾಲೇಜು ಮುಖ್ಯಸ್ಥರ ಸಮನ್ವಯದೊಂದಿಗೆ ಕಾಲೇಜುವಾರು ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಏರ್ಪಡಿಸಿ, ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಲಸಿಕಾಕರಣದ ಮೇಲ್ವಿಚಾರಣೆಯನ್ನು ಆಯಾ ತಾಲೂಕುಗಳ ತಹಶೀಲ್ದಾರ್ ರು ವಹಿಸಿಕೊಳ್ಳಬೇಕು. ಪ್ರತಿ ಕಾಲೇಜಿಗೆ ಒಬ್ಬರಂತೆ ನೋಡೆಲ್ ಅ ಧಿಕಾರಿಗಳನ್ನು ಕಾಲೇಜಿನ ಬೋಧಕ ಅಥವಾ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿ, ಅರ್ಹ ಎಲ್ಲರಿಗೂ ಲಸಿಕೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು. ಕಾಲೇಜು ಮುಖ್ಯಸ್ಥರಿಂದ ನಿರ್ದಿಷ್ಟ ಮಾಹಿತಿ ಕಲೆ ಹಾಕಬೇಕು ಹಾಗೂ ಈಗಾಗಲೇ ಕಾಲೇಜು ಸಿಬ್ಬಂದಿ ಲಸಿಕೆ ಪಡೆದಿದ್ದಲ್ಲಿ ಅದರ ವಿವರವನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಕಾಲೇಜುಗಳಲ್ಲಿ ಶೇ.100 ರಷ್ಟು ಲಸಿಕಾಕರಣ ಆಗುವಂತೆ ಕಾಲೇಜು ಮುಖ್ಯಸ್ಥರು ಜವಾಬ್ದಾರಿ ವಹಿಸಿಕೊಳ್ಳಬೇಕು. ಲಸಿಕಾಕರಣದ ನಂತರವೇ ಕಾಲೇಜು ಆರಂಭಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಲಸಿಕೆ ಲಭ್ಯತೆಯನುಸಾರ ಆರೋಗ್ಯ ಇಲಾಖೆ ಅಧಿ ಕಾರಿಗಳು ಮುಂಚಿತವಾಗಿಯೇ ಕಾಲೇಜುಗಳಿಗೆ ಲಸಿಕೆ ನೀಡುವ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಲಸಿಕಾಕರಣದಂದು ಅರ್ಹ ಎಲ್ಲರೂ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಲಸಿಕಾಕರಣ ನಡೆಯುವ ಸ್ಥಳದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ, ಇಲಾಖಾ ಸಿಬ್ಬಂದಿ ನಿಯೋಜನೆ ಮಾಡಬೇಕು. ಲಸಿಕಾಕರಣ ಜರುಗುವ ವೇಳೆ ನೂಕು ನುಗ್ಗಲಾಗದಂತೆ ಕಾಲೇಜುಗಳ ಮುಖ್ಯಸ್ಥರು ನೋಡಿಕೊಳ್ಳಬೇಕು. ಜತೆಗೆ ಮಕ್ಕಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದರು. ಕಾರ್ಮಿಕ ಇಲಾಖೆಯಿಂದ ಅರ್ಹ ನೋಂದಾಯಿತ ಕಾರ್ಮಿಕರಿಗೆ ವಿತರಿಸಲು ಆಹಾರ ಕಿಟ್ ಜಿಲ್ಲೆಗೆ ಆಗಮಿಸಿದೆ. ಅವುಗಳನ್ನು ಗ್ರಾಪಂ ವಾರು ಫಲಾನುಭವಿಗಳಿಗೆ ಯೋಜನಾ ಬದ್ಧವಾಗಿ ಹಂಚಿಕೆ ಮಾಡಲು ಆಯಾ ತಾಲೂಕು ತಹಶೀಲ್ದಾರ್‌ರು, ತಾಪಂ ಇಒಗಳು ಹಾಗೂ ಕಾರ್ಮಿಕ ನಿರೀಕ್ಷಕರು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕಿಟ್ ವಿತರಣಾ ಸ್ಥಳದಲ್ಲಿ ಅಗತ್ಯವಿದ್ದಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ನೂಕು ನುಗ್ಗಲಾಗದಂತೆ ಸಾಮಾಜಿಕ ಅಂತರದೊಂದಿಗೆ ಕನಿಷ್ಟ ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸಿ ಕಿಟ್ ಪಡೆಯುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಕಾರ್ಮಿಕ ಸಂಘಟನೆಗಳ ಸಹಕಾರ ಪಡೆಯುವಂತೆ ತಿಳಿಸಿದರು. ಉಪವಿಭಾಗಾಧಿ ಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಆಹಾರ ಕಿಟ್ ವಿತರಣೆ ವೇಳೆ ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯ. ಕನಿಷ್ಟ ಸಂಖ್ಯೆಯಲ್ಲಿ ಫಲಾನುಭವಿಗಳು° ಸೇರಿಸಿ ತಾಲೂಕು ವಾರು ವಿತರಣೆಗೆ ತಹಶೀಲ್ದಾರ್‌ರ ನೇತೃತ್ವದಲ್ಲಿ ಸರಿಯಾಗಿ ಹಂಚಿಕೆ ಮಾಡಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ|ಸತೀಶ ಬಸರಿಗಿಡದ ಮಾತನಾಡಿ, ಜಿಲ್ಲೆಗೆ ಹಂಚಿಕೆ ಮಾಡುವ ಲಸಿಕೆಗಳಿಗೆ ಅನುಸಾರವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ತಾಲೂಕು ವೈದ್ಯಾ ಧಿಕಾರಿಗಳಿಗೆ ಆನ್ ಸೈಟ್ ಲಸಿಕಾಕರಣ ನಿರ್ವಹಣೆಗೆ ತಿಳಿಸಲಾಗಿದೆ ಎಂದರು. ಸಭೆಯಲ್ಲಿ ಕಾರ್ಮಿಕ ಅಧಿ ಕಾರಿ ಸುಧಾ ಗರಗ, ಆರ್‌ಸಿಎಚ್ ಅ ಧಿಕಾರಿ ಡಾ|ಬಿ. ಎಂ.ಗೊಜನೂರ, ಜಿಲ್ಲಾ ಮಲೇರಿಯಾ ಅಧಿ ಕಾರಿ ಡಾ|ಎಸ್.ಎಸ್. ನೀಲಗುಂದ ಸೇರಿದಂತೆ ಕಾಲೇಜುಗಳ ಮುಖ್ಯಸ್ಥರು, ಆಯಾ ತಾಲೂಕುಗಳ ತಹಶೀಲ್ದಾರ್‌ರು, ತಾಪಂ ಇಒಗಳು ಹಾಜರಿದ್ದರು.
ಟಾಪ್ ನ್ಯೂಸ್
