ಹಳೇಬೀಡು ಹೋಬಳಿಗೆ 14 ಟನ್‌ ಮೇವು ಪೂರೈಕೆ

Team Udayavani, Jul 19, 2019, 12:02 PM IST

ಹಳೇಬೀಡು ಮೇವು ಕೇಂದ್ರಕ್ಕೆ 14 ಟನ್‌ ಮೇವು ಹೆಚ್ಚುವರಿಯಾಗಿ ಪೂರೈಕೆಯಾಗಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಹಳೇಬೀಡು: ಪಟ್ಟಣದ ಮೇವು ಕೇಂದ್ರಕ್ಕೆ 14 ಟನ್‌ಗೂ ಹೆಚ್ಚು ಮೇವು ಹೆಚ್ಚುವರಿಯಾಗಿ ಪೂರೈಕೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ.

ದಿನಂಪ್ರತಿ ರೈತರು ಮೇವಿಗಾಗಿ ಪಟ್ಟಣದ ಸಮೀಪದ ಬಂಡಾರಿಕಟ್ಟೆ ಗ್ರಾಮದ ಬಳಿಯಿರುವ ಬಯಲು ರಂಗಮಂದಿರದ ಬಳಿ ಕಾಯುತ್ತಿದ್ದ ರೈತರಿಗೆ ಗುರುವಾರ ಖುಷಿಯ ದಿನವಾ ಗಿತ್ತು. ಉದಯವಾಣಿ ಪತ್ರಿಕೆ ಯಲ್ಲಿ ಮೇವು ಅಭಾವದ ಬಗ್ಗೆ ವಿಸ್ತೃತ ವರದಿ ಮಾಡಲಾಗಿದ್ದು, ವರದಿಯ ಫ‌ಲಶೃತಿ ಪರಿಣಾಮ ಗುರುವಾರದಂದು ಹೆಚ್ಚುವರಿಯಾಗಿ ಮೇವು ಕೇಂದ್ರಕ್ಕೆ ಮೇವು ಬಂದಿರುವುದನ್ನು ಕಂಡ ರೈತರು ಸಂತೋಷ ಪಟ್ಟರು.

ಮೂರು ಇಲಾಖೆಗಳ ಸಹಯೋಗ: ಕಂದಾಯ ಇಲಾಖೆ, ಪಶುಪಾಲನೆ, ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ರೈತರಿಗೆ ಮೇವು ವಿತರಿಸಲಾಗುತ್ತಿದೆ. ಕಂದಾಯ ಇಲಾಖೆ ಮೇವನ್ನು ಸಂಗ್ರಹಣೆ, ಸರಬರಾಜು. ಮಾಡಿದರೆ, ಗ್ರಾಮಪಂಚಾಯಿತಿ, ಹಾಗೂ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಪಶುಪಾಲನೆ ಇಲಾಖೆ ಟೋಕನ್‌ ವಿತರಣೆ, ಜಾನುವಾರುಗಳ ದೃಢೀಕರಣ, ಮೇವು ಗುಣ ಮಟ್ಟ ಪರಿಶೀಲನೆ ಮಾಡಿ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ.

ಹಲವು ಜಿಲ್ಲೆಗಳಿಂದ ಮೇವು ಪೂರೈಕೆ: ಹೋಬಳಿಯ 5 ಪಂಚಾಯಿತಿ ಕೇಂದ್ರಗಳಿಗೆ ಮಲೆಬೆನ್ನೂರು, ಶಿವಮೊಗ್ಗ, ಭದ್ರಾವತಿ, ನಂಜನಗೂಡು, ಮಂಡ್ಯ, ಮುಂತಾದ ಕಡೆಗಳಿಂದ ರಾಗಿ, ಭತ್ತ, ಜೊಳದ ಸೆಪ್ಪೆ, ಮೇವು ತರಿಸಿ ಮೇವು ವಿತರಿಸಲಾಗುತ್ತಿದೆ.

ಮಳೆಗಾಲವಾಗಿದ್ದ ಕಾರಣ ಶಿವಮೊಗ್ಗ, ಭದ್ರಾವತಿ ಭಾಗಗಳಲ್ಲಿ ಹೆಚ್ಚು ಮಳೇಯಾಗಿರುವ ಕಾರಣ ಮೇವು ತಡವಾಗಿ ಬಂದಿದೆ. ನಿಗದಿಯಂತೆ ರೈತರ ಅವಶ್ಯಕತೆಗೆ ತಕ್ಕಂತೆ ಪ್ರತಿದಿನ ಮೇವು ತರಿಸಿ ಮೇವು ವಿತರಣೆ ಮಾಡಲಾಗುತ್ತದೆ.

ಇಲ್ಲಿಯವರೆಗೆ 240 ಟನ್‌ ಮೇವು ವಿತರಣೆ ಮಾಡಲಾಗಿದೆ. 980 ಮಂದಿ ಇದರ ಪ್ರಯೋಜನ ಕೂಡ ಪಡೆದು 6,995 ರಾಸುಗಳಿಗೆ ಮೇವು ಪೂರೈಕೆ ಮಾಡಲಾಗಿದೆ.

ಗುಣ ಮಟ್ಟವಿಲ್ಲದ ಮೇವನ್ನು ವಾಪಸ್‌ ಕಳುಹಿಸಿ ಉತ್ತಮ ಮೇವನ್ನು ತರಿಸಿ ರೈತಬಾಂಧವರಿಗೆ ವಿರತಣೆ ಮಾಡಲಾಗುತ್ತಿದೆ ಎಂದು ಪಶುಪಾಲನಾ ವೈದ್ಯಾಧಿಕಾರಿ ಡಾ.ಎಂ. ವಿನಯ್‌ ಅವರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಭತ್ತದ ಸಸಿಗಳನ್ನು ನಾಟಿ ಮಾಡಲು ಹಲವು ಜನರ ಸಹಾಯ ಬೇಕಾಗುತ್ತದೆ. ಅಲ್ಲದೆ, ಅದಕ್ಕೆ ಸಮಯವೂ ವ್ಯಯವಾಗುತ್ತದೆ. ಈ ವೆಚ್ಚವನ್ನು ಮತ್ತು ಸಮಯವನ್ನು ಉಳಿಸಲು ರೈಸ್‌...

  • ಜಮನಾಪುರಿ ಮೇಕೆಗಳನ್ನು ಹಾಲು ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಇವುಗಳ ಮಾಂಸದಲ್ಲಿ ಕೊಬ್ಬಿನಂಶ ಕಡಿಮೆ. ಮೂರು ವರ್ಷಗಳಲ್ಲಿ 120 ಕೆ.ಜಿ.ವರೆಗೂ ಬೆಳೆಯುವ ಇವುಗಳು,...

  • ನಾಯಿ ನಿಯತ್ತಿನ ಪ್ರಾಣಿ. ಈ ಚಿತ್ರದಲ್ಲಿ ಕಾಣುತ್ತಿರುವುದು ರೋಬೋಟ್‌ ನಾಯಿ. ಮನುಷ್ಯ ಹೇಳಿದಷ್ಟನ್ನು ಮಾತ್ರವೇ ಮಾಡುವುದರಿಂದ ಇದು ಜೀವಂತ ನಾಯಿಗಿಂತಲೂ ಹೆಚ್ಚು...

  • ಬೆಂಗಳೂರು: "ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ...' ಎಂಬುದು ಸಮಾಜದ ಪ್ರಸ್ತುತ ಮೂಲಮಂತ್ರ ಆಗಬೇಕು. ಆ ಮೂಲಕ ಲೋಕ ಕಲ್ಯಾಣಕ್ಕೆ ಕಂಕಣ ತೊಡಬೇಕು... ನಗರದ...

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...