Udayavni Special

197 ಗ್ರಾಪಂ ಸದಸ್ಯರ ಅವಿರೋಧ ಆಯ್ಕೆ


Team Udayavani, Dec 16, 2020, 5:02 PM IST

197 ಗ್ರಾಪಂ ಸದಸ್ಯರ ಅವಿರೋಧ ಆಯ್ಕೆ

ಹಾಸನ: ಮೊದಲ ಹಂತದಲ್ಲಿ ನಡೆಯುವ ಜಿಲ್ಲೆಯ ನಾಲ್ಕು ತಾಲೂಕುಗಳ 125 ಗ್ರಾಮ ಪಂಚಾಯಿತಿ ಒಟ್ಟು 1703 ಸದಸ್ಯ ಸ್ಥಾನಗಳ ಪೈಕಿ 197 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ1472ಸ್ಥಾನಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದ್ದು, ಅಂತಿಮವಾಗಿ 3867 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಮಾಹಿತಿ ನೀಡಿದ ಅವರು, ಹಾಸನ ತಾಲೂಕಿನಲ್ಲಿ 45, ಅರಕಲಗೂಡು 45, ಚನ್ನರಾಯಪಟ್ಟಣ 84, ಸಕಲೇಶಪುರ 23 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆಎಂದು ತಿಳಿಸಿದರು. ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಒಂದು ಹಾಗೂಸಕಲೇಶಪುರ ತಾಲೂಕಿನ 34 ಸದಸ್ಯ ಸ್ಥಾನಗಳಿಗೆ  ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ದೇವಲದಕೆರೆ ಗ್ರಾಮ ಪಂಚಾಯಿತಿಯ 29 ಸ್ಥಾನಗಳಿಗೆ 28 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಡಿ.14ಕೊನೆಯ ದಿನಾಂಕವಾಗಿತ್ತು. ಈ ಗ್ರಾಮದಲ್ಲಿ ಅಧಿಕಾರಿಗಳು ಸಭೆ ಮಾಡಿ ಮನವರಿಕೆ ಮಾಡಲು ಪ್ರಯತ್ನಿಸಿದರೂ 28ನಾಮಪತ್ರ ಹಿಂಪಡೆಯಲಾಗಿದೆ. ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಪಿಪಿಇ ಕಿಟ್‌: ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗು ತ್ತಿದ್ದು, ಮೊದಲ ಹಂತಕ್ಕೆ ಡಿ.16 ಮತ್ತು 17 ರಂದು ತರಬೇತಿ ನಡೆಯುತ್ತದೆ. ಮತದಾನದ ದಿನ ಕೊನೆಯಒಂದು ಗಂಟೆಯ ಅವಧಿ ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟಿದ್ದು, ಅವರು ಮೊದಲೇ ಬೂತ್‌ ಮಟ್ಟದ ಅಧಿಕಾರಿಯ ಬಳಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತರು ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆ ಪಿಪಿಇ ಕಿಟ್‌ಗಳನ್ನು ಜಿಲ್ಲಾಡಳಿತದಿಂದಲೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಎರಡನೇ ಹಂತದಲ್ಲಿ ನಾಲ್ಕು ತಾಲೂಕುಗಳ 1648 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ.14ರವರೆಗೆ 1,513 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು 16ರವರೆಗೆಕಾಲವಕಾಶವಿದ್ದು, ಯಾವುದೇ ಭಯ ಒತ್ತಡವಿಲ್ಲದೆ ನಾಮ ಪತ್ರ ಸಲ್ಲಿಸಬಹುದು ಎಂದು ಹೇಳಿದರು.

ಮದ್ಯದಂಗಡಿ ವಿರುದ್ಧವೂ ಕ್ರಮ: ಜಿಲ್ಲೆಯಲ್ಲಿಚುನಾವಣೆ ಆಕ್ರಮಗಳನ್ನು ತಡೆಯಲು ಸ್ವೀಪ್‌ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಮದ್ಯ, ಹಣಹಂಚಿಕೆ ಮಾಡುವುದು. ಅಥವಾ ಟೋಕನ್‌ಗಳನ್ನು ಹಂಚಿಕೆಮಾಡುವುದುಕಂಡುಬಂದಲ್ಲಿಅಧಿಕಾರಿಗಳಿಗೆ ದೂರು ನೀಡಬಹುದು.ಕಳೆದ ಆರು ತಿಂಗಳ ಮದ್ಯದ ಸರಾಸರಿ ವ್ಯಾಪಾರವನ್ನು ಗಮನಿಸಿ ಈ ತಿಂಗಳಅವಧಿಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮಾಡಿದ್ದರೆ ಅಂತಹ ಮದ್ಯದಂಗಡಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ಪ್ರಚಾರ: ಜಿಪಂ ಸಿಇಒ ಬಿ.ಭಾರತಿ ಮಾತನಾಡಿ, ಜಿಲ್ಲೆಯಲ್ಲಿ ಬೀದಿ ನಾಟಕ, ಜನಪದ ಹಾಡುಗಳು, ಪೋಸ್ಟರ್‌ ಅಂಟಿಸುವುದು, ಬ್ಯಾನರ್‌ಹಾಕುವ ಮೂಲಕ ಮತದಾನದ ಜಾಗೃತಿಕಾರ್ಯಕ್ರಮ ನಡೆಸಲಾಗುತ್ತಿದೆ. ಮತದಾನದಿಂದಯಾರೂ ಹಿಂದೆ ಉಳಿಯಬೇಡಿ ಎಂದು, ಸ್ಥಳೀಯಕೇಬಲ್‌ ನೆಟ್‌ವರ್ಕ್‌, ರೇಡಿಯೋ ಮೂಲಕವು ಪ್ರಚಾರ ಮಾಡಲಾಗುತ್ತಿದೆ. ಮತದಾನ ಮಾಡುವಅಂಗವಿಕಲರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಗೂ ವಿವಿಧಸ್ಥಳಗಳಿಗೆ ಅಂಟಿಸುವ ಪೋಸ್ಟರ್‌ ಬಿಡುಗಡೆ ಮಾಡ ಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಲಾಯಿತು. ಅಪರಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಸದಸ್ಯತ್ವ ಹರಾಜು: 43 ಜನರ ಮೇಲೆಕೇಸ್‌ :  ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯಕಾನೂನುಕ್ರಮಕೈಗೊಳ್ಳಲಾಗಿದೆ. ಚುನಾವಣೆ ಅಕ್ರಮಗಳು ನಡೆಯುವುದರ ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿ ವಾಸ್‌ಗೌಡಸ್ಪಷ್ಟಪಡಿಸಿದರು. ಅರಕಲಗೂಡು ತಾಲೂಕು ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಬಿಳಗುಲಿ ಗ್ರಾಮದಲ್ಲಿ ಹರಾಜಿನ ಮೂಲಕ ಸದಸ್ಯಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲಾಗಿತ್ತು. ಈ ಸಂಬಂಧ3 ಜನ ಹಾಗೂ ಸಂಗಡಿಗರು ಸೇರಿ 43 ಜನರ ವಿರುದ್ಧ ಐಪಿಸಿ ಕಲಂ171 ಹಾಗೂ 171ಎಫ್ ಅಡಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

Untitled-1

ಬಿಬಿಎಂಪಿ ಆಯುಕ್ತರಿಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ  

Untitled-1

ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ: ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್‌

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

Amazon Republic Day sale offers: Discounts on Apple iPhones, Xiaomi, OnePlus, Samsung smartphones

‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

POLICE

ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ

Untitled-1

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾಲೂಕು ಪಂಚಾಯತ್‌ ಇರಲಿ; ಅಧಿಕಾರ, ನೇರ ಅನುದಾನ ಕೊಡಲಿ

ತಾಲೂಕು ಪಂಚಾಯತ್‌ ಇರಲಿ; ಅಧಿಕಾರ, ನೇರ ಅನುದಾನ ಕೊಡಲಿ

ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

Death of children who went to swim

ಈಜಲು ಹೋದ ಮಕ್ಕಳಿಬರು ಸಾವು

Fix the road to the villages that connect to the highway

ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆ ಸರಿಪಡಿಸಿ

ಚತುಷ್ಪಥ ರಸ್ತೆ 2022ರೊಳಗೆ ಪೂರ್ಣವಾಗಲಿ: ತಾಕೀತು

ಚತುಷ್ಪಥ ರಸ್ತೆ 2022ರೊಳಗೆ ಪೂರ್ಣವಾಗಲಿ: ತಾಕೀತು

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

ಪಿಂಚಣಿ ದುರ್ಬಳಕೆ  ತಡೆಗೆ ಸಿಎಂ ಕಟ್ಟಪ್ಪಣೆ

ಪಿಂಚಣಿ ದುರ್ಬಳಕೆ ತಡೆಗೆ ಸಿಎಂ ಕಟ್ಟಪ್ಪಣೆ

23 ಕೋ.ರೂ. ಪ್ರಸ್ತಾವ: ಅನುದಾನ  ಬಿಡುಗಡೆಗೆ ಕೋವಿಡ್‌ ತೊಡಕು

23 ಕೋ.ರೂ. ಪ್ರಸ್ತಾವ: ಅನುದಾನ ಬಿಡುಗಡೆಗೆ ಕೋವಿಡ್‌ ತೊಡಕು

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

Untitled-1

ಬಿಬಿಎಂಪಿ ಆಯುಕ್ತರಿಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ  

Untitled-1

ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ: ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.