ಕೋವಿಡ್ ಹುತಾತ್ಮರಿಗೆ ಬಾರದ ಪರಿಹಾರ

ಜಿಲ್ಲೆಯಲ್ಲಿ ಐವರು ವೈದ್ಯರು, ಶಿಕ್ಷಕರ ಸಾವು

Team Udayavani, Oct 19, 2020, 4:38 PM IST

hASAN-TDY-4

ಸಾಂದರ್ಭಿಕ ಚಿತ್ರ

ಹಾಸನ: ವೈದ್ಯರು, ಶುಶ್ರೂಷಕರು, ಪೊಲೀಸರು, ಚಾಲಕರು, ಶಿಕ್ಷಕರನ್ನು ಕೊರೊನಾ ವಾರಿಯರ್ ಎಂದು ಸರ್ಕಾರ ಪರಿಗಣಿಸಿದೆ. ಸೇವೆಯಲ್ಲಿದ್ದಾಗ ಕೋವಿಡ್  ದೃಢಪಟ್ಟು ಮೃತಪಟ್ಟರೆ ಅವರ ಕುಟುಂಬಕ್ಕೆ 30 ರಿಂದ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಮೃತ ಕೋವಿಡ್ ವಾರಿಯರ್ಸ್ ಗೆ ಪರಿಹಾರ ಘೋಷಣೆಯಾಗಿಲ್ಲ.

ಕೋವಿಡ್ ವಾರಿಯರ್ ಸೇವೆ ವೇಳೆಯಲ್ಲಿ ಮೃತಪಟ್ಟರೆ ಅವರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದುಒತ್ತಾಯವಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಅಂತಹ ಘೋಷಣೆ ಆಥವಾ ಕೋವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ ಆಗಿಲ್ಲ. ವೈದ್ಯಕೀಯ ಇಲಾಖೆಯಲ್ಲಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) 275 ರಿಂದ 300 ಮಂದಿಗೆ ಕೋವಿಡ್ ಸೋಂಕು ಹರಡಿದ್ದು, ಅವರಲ್ಲಿ 5 ಮಂದಿ ಸಿಬ್ಬಂದಿ ( ಶುಶ್ರೂಷಕರು, ಆ್ಯಂಬುಲೆನ್ಸ್‌ ಚಾಲಕರು ಮತ್ತಿತರೆ ಸಿಬ್ಬಂದಿ) ಮೃತಪಟ್ಟಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಆಲೂರಿನ ಡಾ.ಶಿವಕಿರಣ್‌ ಅವರು ಸೇವೆಯಲ್ಲಿದ್ದಾಗ ಮೃತಪಟ್ಟರು. ಆದರೆ, ಅವರುಕೊರೊನಾದಿಂದ ಮೃತಪಟ್ಟ ಬಗ್ಗೆ ಇಲಾಖೆದೃಢಪಡಿಸಿಲ್ಲ. ಖಾಸಗಿ ವೈದ್ಯರಾದ ಡಾ.ರತ್ನಾಕರ ಶೆಟ್ಟಿ ಮತ್ತು ಡಾ.ವಿ.ರಾಜೀವ್‌ ಅವರೂ ಕೋವಿಡ್  ಗೆ ಬಲಿಯಾದರು. ಆದರೆ, ಅವರನ್ನು ಇಲಾಖೆ ಇದುವರೆಗೂ ಕೊರೊನಾ ವಾರಿಯರ್ ಎಂದು ಪರಿಗಣಿಸಿಲ್ಲ. ಪೊಲೀಸ್‌ ಮತ್ತು ಶಿಕ್ಷಣ ಇಲಾಖೆಯಲ್ಲಿ ಮಾತ್ರ ಕೋವಿಡ್ ಸೋಂಕು ದೃಢಪಟ್ಟಹಾಗೂ ಮೃತಪಟ್ಟವರ ದಾಖಲೆ ಸಂಗ್ರಹ ನಡೆಯುತ್ತಿದೆ. ಜಿಲ್ಲೆಯ 296 ಪೊಲೀಸರಿಗೆ ಕೋವಿಡ್ ಸೋಂಕು ತಗುಲಿದ್ದು, 252 ಮಂದಿ ಗುಣಮುಖರಾಗಿದ್ದಾರೆ. ಅದೃಷ್ಟವಶಾತ್‌ ಪೊಲೀಸ್‌ ಸಿಬ್ಬಂದಿಯ ಸಾವು ಸಂಭವಿಸಿಲ್ಲ. ಶಿಕ್ಷಣ ಇಲಾಖೆಯಲ್ಲಿ161 ಶಿಕ್ಷಕರಿಗೆ ಕೋವಿಡ್ ಸೋಂಕು ಹರಡಿದ್ದು, ಆ ಪೈಕಿ ಐವರು ಶಿಕ್ಷಕರು ಮೃತಪಟ್ಟಿದ್ದಾರೆ. ಹಾಸನ ತಾಲೂಕಿನಲ್ಲಿ ಇಬ್ಬರು, ಅರಸೀಕೆರೆ, ಬೇಲೂರು ಮತ್ತು ಹೊಳೆ ನರಸೀಪುರ ತಾಲೂಕಿನ ಒಬ್ಬ ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಆದರೆ ಇವರು ಕರ್ತವ್ಯದಲ್ಲಿದ್ದಾಗ ಅಂದರೆ ವಿದ್ಯಾಗಮ ಅಥವಾ ಕೋವಿಡ್ ಸಂಬಂಧ ಮನೆ, ಮನೆ ಸಮೀಕ್ಷೆ ವೇಳೆ ಕೊರೊನಾ ತಗುಲಿದೆ ಎಂದು ಇಲಾಖೆ ದೃಢಪಡಿಸಿಲ್ಲ.

ಸರ್ಕಾರದ ಮಟ್ಟದಲ್ಲಿ ನಿರ್ಧಾರ: ಕೋವಿಡ್ ಸೇವೆಯಲ್ಲಿರುವ ವೈದ್ಯ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಲಾಗುತ್ತಿದೆ. ಕೋವಿಡ್ ವಾರಿಯರ್ ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಮೃತಪಟ್ಟಿರುವ ಕೋವಿಡ್ ವಾರಿಯರ್ಗೆ ಇನ್ನು ಪರಿಹಾರ ಬಂದಿಲ್ಲ. ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆದು ತೀರ್ಮಾನವಾಗ ಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ಇಳಿಮುಖ! :

ಹಾಸನ: ಜಿಲ್ಲೆಯಲ್ಲಿ ತಿಂಗಳಿನ ಮೊದಲ ವಾರಕ್ಕೆ ಹೋಲಿಸಿದರೆ 2ನೇ ವಾರ ಕೋವಿಡ್ ಪ್ರಕರಣ ಇಳಿಮುಖವಾಗಿವೆ. ಸೋಂಕು ಪರೀಕ್ಷೆಯ ಪ್ರಮಾಣವೂ ಹೆಚ್ಚಿದ್ದು, ಪಾಸಿಟಿವ್‌ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ. ರಾಜ್ಯದಲ್ಲಿಯೇ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಇಳಿಮುಖವಾಗಿವೆ. ಕೊರೊನಾದ ಮೊದಲ ಆಲೆ ಮುಗಿಯುತ್ತಾ ಬಂದಿದೆ ಎಂದು ಭಾಸವಾಗುತ್ತಿದೆ. ತಿಂಗಳ ಮೊದಲ ವಾರದವರೆಗೆ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಶೇ.18 ರಿಂದ 21 ಇತ್ತು. 2ನೇ ವಾರ ಆ ಪ್ರಮಾಣ ಶೇ.7 ರಿಂದ 8 ರಷ್ಟಿದೆ.ಪ್ರತಿದಿನ 3500 ರಿಂದ 4000 ರೂ.ವರೆಗೂ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವ್‌ ಪ್ರಕರಣ ಇಳಿಮುಖವಾಗಿರುವುದಕ್ಕೆ ಮುಖ್ಯವಾಗಿಜನರಲ್ಲಿ ಜಾಗೃತಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್‌ ಮೊದಲ ವಾರ400 ರಿಂದ500 ಕೋವಿಡ್ ಪಾಸಿಟಿವ್‌ ಪ್ರಕರಣಗಳುವರದಿಯಾಗುತ್ತಿದ್ದರೆ, 2ನೇ ವಾರ 200 ರಿಂದ 300ರ ಆಸುಪಾಸಿನಲ್ಲಿ ಪಾಸಿಟಿವ್‌ ಪ್ರಕರಣಗಳುವರದಿಯಾಗುತ್ತಿದ್ದು, ಸಾವಿನ ಪ್ರಮಾಣ ವೂ ಇಳಿಮುಖ ಆಗಿರುವುದು ತುಸು ಸಮಾಧಾನ ತಂದಿದೆ.ನಿನ್ನೆ(ಭಾನುವಾರ) 254 ಪಾಟಿಸಿವ್‌ ಪ್ರಕರಣಗಳುವರದಿಯಾಗಿದ್ದು, ಎರಡು ಸಾವು ಸಂಭವಿಸಿವೆ. ಹಿಂದಿನವಾರಗಳಲ್ಲಿ ಪ್ರತಿದಿನ 500 ಮೀರಿದ ಪಾಸಿಟಿವ್‌, ಸಾವಿನಪ್ರಕರಣ 10 ಮೀರಿತ್ತು. ಆದರೆ, ಈ ವಾರ ಇನ್ನೂ ಇಳಿಕೆಯಾಗುವ ಸಂಭವ ಹೆಚ್ಚಿದೆ.

 

-ನಂಜುಂಡೇಗೌಡ ಎನ್‌.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.