ಕುಸಿಯುತ್ತದೆ ದ್ವಾರಸಮುದ್ರ ಕೆರೆ ಏರಿ

12 ವರ್ಷ ನಂತರ ತುಂಬಿದ ಕೆರೆ ನೀರು ರಕ್ಷಿಸಲು ಶೀಘ್ರ ಏರಿ ದುರಸ್ತಿ ಮಾಡಿ

Team Udayavani, Oct 30, 2020, 4:48 PM IST

ಕುಸಿಯುತ್ತದೆ ದ್ವಾರಸಮುದ್ರ ಕೆರೆ ಏರಿ

ಹಳೇಬೀಡು: ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾದ ದ್ವಾರಸಮುದ್ರ ಕೆರೆ ಏರಿ ಹಲವು ಕಡೆ ಕುಸಿದಿದ್ದು, ಅಕ್ಕಪಕ್ಕದ ಗ್ರಾಮಗಳನಿವಾಸಿಗಳು, ರೈತರ ಆತಂಕಕ್ಕೆ ಕಾರಣವಾಗಿದೆ.

ದ್ವಾರಸಮುದ್ರ ಕೆರೆ 1000 ಹೆಕ್ಟೇರ್‌ ಪ್ರದೇಶದಲ್ಲಿದ್ದು, 12 ವರ್ಷ ನಂತರ ಭರ್ತಿ ಆಗಿದೆ. ಇದರಿಂದ ಹಳೇಬೀಡು, ಮಾದಿಹಳ್ಳಿ, ಜಾವಗಲ್‌ ಹೋಬಳಿ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಇಂತಹ ಸಮಯದಲ್ಲಿ ಕೆರೆ ಏರಿ ಎರಡು ಮೂರು ಕಡೆ ಬಿರುಕು ಬಿಟ್ಟು, ಕುಸಿದಿದೆ. ಹೀಗಾಗಿ ಏರಿ ಮೇಲಿನ ರಸ್ತೆಯಲ್ಲಿ ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚರಿಸಬೇಕಿದೆ.

ನೀರಿನ ಒತ್ತಡ ಹೆಚ್ಚಳ: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ದ್ವಾರಸಮುದ್ರ ಕೆರೆ 1 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಏತ ನೀರಾ ವರಿ ಯೋಜನೆ ನೀರು, ರಾಜಗೆರೆ, ಚೀಲ ನಾಯ್ಕನಹಳ್ಳಿ, ಮಲ್ಲಾಪುರ ಮೂರು ಕಡೆ ಯಿಂದ ಭಾರೀ ಪ್ರಮಾಣದಲ್ಲಿ ಕೆರೆಗೆ ನೀರು ಹರಿದು ಬರುತ್ತಿದೆ. ನೀರಿನ ಒತ್ತಡ ಹೆಚ್ಚಾಗಿ ಏರಿ ಕುಸಿಯುತ್ತಿದೆ ಎನ್ನಲಾಗಿದೆ.

ಜಿನುಗುತ್ತಿರುವ ಕೆರೆ ನೀರು: 12 ವರ್ಷ ನಂತರ ಕೆರೆ ಭರ್ತಿ ಆಗಿದೆ. ಏರಿ ಒಡೆದರೆ ನೂರಾರು ಎಕರೆಯಲ್ಲಿ ಬೆಳೆದಿರುವ ತೆಂಗು, ಅಡಕೆ, ಜೋಳದ ಬೆಳೆ ಹಾನಿಯಾಗುತ್ತದೆ. ಕೆರೆ ತಪ್ಪಲಿನ ಬೂದಿಗುಂಡಿಯಲ್ಲಿ ವಾಸಿಸುವ 200 ಕುಟುಂಬಗಳ ಬದುಕು ಕೊಚ್ಚಿ ಹೋಗುತ್ತದೆ. ಹಾಗೆಯೇ ಹಳೇಬೀಡಿನಿಂದ ಹಾಸನಕ್ಕೆ ಹೋಗುವ ಕೆರೆ ಏರಿ ರಸ್ತೆಯ ಎಡಭಾಗದ ಗದ್ದೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಜಿನುಗುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು.

ಅಪಘಾತಕ್ಕೂ ದಾರಿ: ಹಳೇಬೀಡು ವಿಶ್ವ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಹೊಯ್ಸಳೇಶ್ವರ ದೇಗುಲ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ, ಹಾಗೆಯೇ ಗೋಣಿಸೋಮನ ಹಳ್ಳಿ, ಸೊಪ್ಪಿನಹಳ್ಳಿ ಘಟ್ಟದಹಳ್ಳಿ, ಸಾಣೇನಹಳ್ಳಿ, ಗಂಗೂರು, ರಾಜಗೆರೆ ತಟ್ಟೆಹಳ್ಳಿ, ರಾಜಗೆರೆ, ಕ್ಯಾತನಕೆರೆ ಸೇರಿ ಹತ್ತಾರು ಹಳ್ಳಿಯ ಜನರು ಹಳೇಬೀಡಿಗೆ ಬರಲು ಈ ಏರಿ ಮೇಲಿನ ರಸ್ತೆ ಅವಲಂಬಿಸಿದ್ದಾರೆ. ಇಂತಹ ಕೆರೆ ಏರಿ ಮೇಲಿನರಸ್ತೆ ಕೆಲವು ಕಡೆ ಅರ್ಧಭಾಗ ಕುಸಿದಿರುವು ದರಿಂದ ವಾಹನ ಚಾಲಕರ ಆತಂಕವನ್ನು ಹೆಚ್ಚಿಸಿದೆ. ಕುಸಿದಿರುವ ಜಾಗದಲ್ಲಿ ಓವರ್‌ ಟೇಕ್‌ ಮಾಡಲು ಮುಂದಾದರೆ ಅಪಘಾತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ಕೆರೆ ಭರ್ತಿ ಆಗಿ ಕೋಡಿ ಹರಿಯುತ್ತಿದೆ. ಇಂತಹ ಸಮಯದಲ್ಲಿ ಏರಿ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಒಂದು ವೇಳೆ ಏರಿ ಒಡೆದರೆ ಮೊದಲು ಸಮಸ್ಯೆ ಎದುರಾಗುವುದು ಬೂದಿಗುಂಡಿ ನಿವಾಸಿಗಳಿಗೆ. ಕೂಡಲೇ ಕುಸಿಯುತ್ತಿರುವ ಕೆರೆ ಏರಿ ದುರಸ್ತಿ ಮಾಡಬೇಕಿದೆ. ದೇವರಾಜು, ಬೂದಿಗುಂಡಿ ನಿವಾಸಿ.

ಕೆರೆ ಏರಿ ಕುಸಿಯುತ್ತಿರುವುದು ಆಘಾತಕಾರಿ ವಿಷಯ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವಗೋಪಾಲಯ್ಯ ಗಮನಕ್ಕೂ ತಂದು, ಶೀಘ್ರ ಕೆರೆ ಏರಿ ದುರಸ್ತಿಗೆ ಒತ್ತಡ ಹಾಕುತ್ತೇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದ್ರೆ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆ ಹೊರಬೇಕು. ಹುಲ್ಲಳ್ಳಿ ಸುರೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ

ಕೆರೆ ಏರಿ ಕುಸಿದಿರುವುದನ್ನು ಖುದ್ದು ಪರಿಶೀಲನೆ ನಡೆಸಿದ್ದೇನೆ. ಸಣ್ಣ ನೀರಾವರಿಇಲಾಖೆಯಿಂದ ಬಿಡುಗಡೆ ಆಗಿದ್ದ 2 ಕೋಟಿ ರೂ. ಕೋವಿಡ್ ಹಾಗೂ ತಾಂತ್ರಿಕ ಕಾರಣದಿಂದ ವಾಪಸ್‌ ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಿಸಿ, ದುರಸ್ತಿ ಕಾರ್ಯ ಮಾಡುತ್ತೇನೆ. ಕೆ.ಎಸ್‌.ಲಿಂಗೇಶ್‌, ಶಾಸಕ.

 

ಡಾ.ಎಂ.ಸಿ.ಕುಮಾರ್‌

ಟಾಪ್ ನ್ಯೂಸ್

cm

ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆ

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆ

1-sr

ಯಾಕೆ ಹೀಗಾಯಿತೋ ಗೊತ್ತಿಲ್ಲ: ಟಿಕೆಟ್ ‘ಕೈ’ ತಪ್ಪಿದ ನೋವಿನಲ್ಲಿ ಎಸ್.ಆರ್. ಪಾಟೀಲ್

dr-sudhakar

ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ವಿಟ್ಲ: ಕಾರು ಢಿಕ್ಕಿ ಹೊಡೆದು ಬಾಲಕ ಗಂಭೀರ

ವಿಟ್ಲ: ಕಾರು ಢಿಕ್ಕಿ ಹೊಡೆದು ಬಾಲಕ ಗಂಭೀರ

ನಿಗದಿತ ಪ್ರೇಕ್ಷಕರ ಸಂಖ್ಯೆಯಲ್ಲಿ ನಡೆಯಲಿದೆ ಸನ್ ಬರ್ನ್ ಸಂಗೀತೋತ್ಸವ

ನಿಗದಿತ ಪ್ರೇಕ್ಷಕರ ಸಂಖ್ಯೆಯಲ್ಲಿ ನಡೆಯಲಿದೆ ಸನ್ ಬರ್ನ್ ಸಂಗೀತೋತ್ಸವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಧುಗಳ ಬೇಟಿ

ದೇಗುಲಗಳಿಗೆ ನಾಗಾ ಸಾಧುಗಳು ಭೇಟಿ

ಅಕ್ರಮ ದಾಖಲೆ ಸೃಷ್ಟಿಸಿ ಪಪಂ ಆ ಪರಭಾರೆ

ಅಕ್ರಮ ದಾಖಲೆ ಸೃಷ್ಟಿಸಿ ಪಪಂ ಆ ಪರಭಾರೆ

ನೇರ್ಲಿಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ

ನೇರ್ಲಿಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ

ಕಸಾಪದಲ್ಲಿ ಪರಿಶುದ್ಧತೆಗೆ ಆದ್ಯತೆ

ಕಸಾಪದಲ್ಲಿ ಪರಿಶುದ್ಧತೆಗೆ ಆದ್ಯತೆ

ಅಪ್ಪ ಬಿಜೆಪಿ ಮಗ ಕಾಂಗ್ರೆಸ್‌- ನಿಷ್ಠೆ ಯಾರಿಗೆ-

ಅಪ್ಪ ಬಿಜೆಪಿ, ಮಗ ಕಾಂಗ್ರೆಸ್‌: ನಿಷ್ಠೆ ಯಾರಿಗೆ?

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

cm

ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ

ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಸಿಂದಗಿ : ಅಕಾಲಿಕ ಮಳೆಯಿಂದ ಬೆಳೆ ಹಾನಿ, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಸಿಂದಗಿ ; ಬೆಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Untitled-1

ಬೇಕರಿಯ ಆಹಾರದ ಶುಚಿತ್ವವನ್ನು ಪರಿಶೀಲಿಸಿದ ಅಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.