ತಾಲೂಕು ರೈತರಿಗೆ ವರದಾನವಾದ ಶುಂಠಿ ಬೆಳೆ
Team Udayavani, Apr 24, 2021, 5:36 PM IST
ಆಲೂರು: ಆಲೂಗಡ್ಡೆ ಬೆಳೆ ರೋಗಕ್ಕೀಡಾದ ನಂತರ, ಕಳೆದ ಹತ್ತಾರು ವರ್ಷಗಳಿಂದರೈತರಿಗೆ ಆರ್ಥಿಕ ಸಬಲವಾಗಿರುವ ಶುಂಠಿ ಬೆಳೆ ವರದಾನವಾಗಿದೆ.
ಪ್ರಾರಂಭದ ವರ್ಷಗಳಲ್ಲಿ ಕೇರಳ ರಾಜ್ಯದಿಂದ ವಲಸೆ ಬಂದವರು,ಸ್ಥಳೀಯವಾಗಿ ಬಾಡಿಗೆ ಆಧಾರದಲ್ಲಿ ರೈತರಜಮೀನಿನಲ್ಲಿ ಶುಂಠಿ ಬೆಳೆದು ಸಬಲರಾದರು.ಇದನ್ನು ಮನಗಂಡ ಸ್ಥಳೀಯ ರೈತರು ಶುಂಠಿ ಬೆಳೆಯಲು ಪ್ರಾರಂಭಿಸಿ ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದರು.
ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯನ್ನು ಅಧಿಕವಾಗಿ ಬೆಳೆಯಲಾರಂಭಿಸಿದರು. ಕೆಲರೈತರು ಜಮೀನು ಬಾಡಿಗೆಗೆ ಪಡೆದು ನೂರಾರು ಚೀಲ ಬೆಳೆಯಲು ಪ್ರಾರಂಭಿಸಿದರು. ಒಂದು ಚೀಲಕ್ಕೆ ಕನಿಷ್ಠ8-10 ಮೂಟೆ ಇಳುವರಿ ಬಂದಿತಾದರೂ, ಬೆಲೆ ಪ್ರಮಾಣ ಗಣನೀಯವಾಗಿಕಡಿಮೆಯಾದರೂ, ಕೆಲವರು ಉತ್ತಮ ಬೆಲೆ ಸಿಗದೆ ಕೈ ಸುಟ್ಟುಕೊಂಡರು.
ದೂರದಿಂದ ನೀರು ಸರಬರಾಜು: ಪ್ರಸಕ್ತ ಸಾಲಿನಲ್ಲಿ ಮಳೆ ಬಾರದಿದ್ದರೂ, ಸುಮಾರುಒಂದು ತಿಂಗಳಿನಿಂದ ಶುಂಠಿ ನಾಟಿ ಬೇಸಾಯ ಪ್ರಾರಂಭಿಸಲಾಗಿದೆ. ಕೊಳವೆ ಬಾವಿ ಹೊಂದಿರುವ ರೈತರು ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪರಣೆ ಮಾಡುತ್ತಿದ್ದಾರೆ. ಕೆಲ ರೈತರು ಕಿ.ಮೀ. ದೂರದಿಂದ ಪೈಪು ಮೂಲಕ ನೀರು ಸರಬರಾಜು ಮಾಡಿಕೊಂಡು ಸ್ಪ್ರಿಂಕ್ಲರ್ ಮಾಡುತ್ತಿದ್ದಾರೆ.
ರಾತ್ರಿ ವೇಳೆ 3 ಫೇಸ್ ವಿದ್ಯುತ್ ನೀಡುತ್ತಿರುವುದರಿಂದ, ರೈತರು ಇಡೀ ರಾತ್ರಿ ನಿದ್ರೆಗೆಟ್ಟು ನೀರು ಹಾಯಿಸುತ್ತಿದ್ದಾರೆ.ಬುಧವಾರ ರಾತ್ರಿ ಹದ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದವರು ಬುಧವಾರ ಮತ್ತು ಗುರುವಾರ ಶುಂಠಿ ಬೇಸಾಯಆರಂಭಿಸಿದ್ದಾರೆ. ವಾರಕ್ಕೊಮ್ಮೆಯಾದರೂ ಮಳೆಯಾಗದಿದ್ದರೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗುತ್ತದೆ.
ಒಂದು ಚೀಲ (60 ಕೆ.ಜಿ.) ಶುಂಠಿ ನಾಟಿ ಮಾಡಿ,ಬೆಳೆ ಕೈಗೆ ಸಿಗುವ ವೇಳೆಗೆ ಸುಮಾರು ಹತ್ತು ಸಾವಿರ ರೂ. ವೆಚ್ಚವಾಗುತ್ತದೆ. ಸರಿಯಾಗಿ ವಿದ್ಯುತ್‌ಇರುವುದಿಲ್ಲ. ಕಷ್ಟಪಟ್ಟು ನೀರು ಸಿಂಪಡಿಸಿಬೆಳೆಯುತ್ತಿದ್ದೇವೆ. ಉತ್ತಮ ಬೆಳೆ ಬಂದು ಬೆಲೆ ಸಿಕ್ಕಿದರೆನಮ್ಮಂತಹವರ ಬದುಕು ಹಸನಾಗುತ್ತದೆ. ●ಕೃಷ್ಣೇಗೌಡ, ರೈತ, ಮರಸು ಹೊಸಳ್ಳಿ.
ತಾಲೂಕಾದ್ಯಂತ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿಯನ್ನು ಬೆಳೆಯುತ್ತಿದ್ದಾರೆ. ಸಸಿ ಮಡಿಯಲ್ಲಿ ನೀರು ನಿಲ್ಲದಂತೆ, ಕಾಲಕ್ಕೆ ತಕ್ಕಂತೆ ಮುಂಜಾಗ್ರತೆಯಿಂದ ಕ್ರಿಮಿನಾಶಕ ಬಳಸಿದರೆ ರೋಗಮುಕ್ತವಾಗಿ ಬೆಳೆಯಬಹುದು. ನೀರು ನಿಂತರೆ ಕೊಳೆ ರೋಗ ಬರಲಿದೆ. ನೀರು ನಿಲ್ಲದಂತೆ ರೈತರು ಜಾಗ್ರತೆ ವಹಿಸಬೇಕು. –ಕೇಶವ್, ಸಹಾಯಕ ನಿರ್ದೇಶಕರು,ತೋಟಗಾರಿಕೆ ಇಲಾಖೆ, ಆಲೂರು.
–ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ
ಅಪೌಷ್ಟಿಕತೆ ನಿವಾರಣೆಗೆ ಪಣ
ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ
ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ
ಹಾರಂಗಿ ಜಲಾಶಯ ಭರ್ತಿ: ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಶಾಸಕ ಅಪ್ಪಚ್ಚು ರಂಜನ್