Udayavni Special

ಮಾಲೇಕಲ್‌ ಲಕ್ಷ್ಮೀ ವೆಂಕಟರಮಣಸ್ವಾಮಿ ರಥೋತ್ಸವ ಸಂಪನ್ನ

ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮ ನೂರಾರು ಭಕ್ತರು ಭಾಗಿ

Team Udayavani, Feb 25, 2021, 7:29 PM IST

Udayavani Kannada Newspaper

ಅರಸೀಕೆರೆ: ಪ್ರತಿವರ್ಷ ಆಷಾಢ ಶುದ್ಧ ದ್ವಾದಶಿ ಯಂದು ನಡೆಯುತ್ತಿದ್ದ ಮಾಲೇಕಲ್‌ ತಿರುಪತಿ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಾಘ ಶುದ್ಧ ಷಷ್ಠಿ ಬುಧವಾರ, ನೂರಾರು ಭಕ್ತರ ಸಮ್ಮು ಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ನಗರ ಸಮೀಪದ ಮಾಲೇಕಲ್‌ನ ಇತಿಹಾಸ ಪ್ರಸಿದ್ಧ ತಿರುಪತಿ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾರಥೋತ್ಸವವು ವೈಖಾನ ಸಾಗಮ ಸಂಪ್ರದಾಯದಂತೆ ಬುಧವಾರ ಮಧ್ಯಾಹ್ನ 11.20 ರಿಂದ 12.30 ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನೆರವೇರಿತು.

ಮಹಾರಥಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸದಸ್ಯ ಜಿ.ವಿ.ಟಿ.ಬಸವರಾಜು, ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್‌.ಡಿ.ಪ್ರಸಾದ್‌, ಡಿವೈಎಸ್‌ಪಿ ಎಲ್‌.ನಾಗೇಶ್‌ ಅವರು ಶಾಸ್ತ್ರೋಕ್ತ ವಾಗಿ ಪೂಜಾ ಕೈಂಕರ್ಯಗಳು ನೆರವೇರಿಸಿದರು.

ನಂತರ ಪುಷ್ಪಾರ್ಚನೆ ಮಾಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾಮಹೋತ್ಸವದಲ್ಲಿ ನೆರೆದಿದ್ದ ನೂರಾರು ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತ, ಮಹಾರಥೋತ್ಸವನ್ನು ಎಳೆದು ಧನ್ಯತಾ ಭಾವ ಮೆರೆದರು. ರಥ ಸಾಗುತ್ತಿದ್ದಂತೆ ಕೆಲವರ ಬಾಳೆಹಣ್ಣು, ಧವನ, ಹೂವನ್ನು ಎಸೆದು, ತಮ್ಮ ಭಕ್ತಿಭಾವ ಸಮರ್ಪಿಸಿದರು. ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆ ಬರಲಿಲ್ಲ. ಮುಂಜಾನೆಯಿಂದಲೇ ತಂಪಿನ ವಾತಾವರಣ ಇತ್ತು. ಕೊರೊನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಟ್ಟ ಹತ್ತದ ಭಕ್ತರು: ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ನವದಂಪತಿಗಳು, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಭಕ್ತರು 1250 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಶ್ರೀನಿವಾಸ, ಪದ್ಮಾವತಿ ಅಮ್ಮನವರ ದರ್ಶನ ಪಡೆಯುತ್ತಿದ್ದರು. ಆದರೆ, ಈ ಬಾರಿ ಬೆಟ್ಟ ಹತ್ತದೇ, ತಪ್ಪಲಿನಲ್ಲಿರುವ ಗೋವಿಂದರಾಯ ಸ್ವಾಮಿ ಮತ್ತು ಶ್ರೀಲಕ್ಷ್ಮೀದೇವಿ ಅಮ್ಮನವರ ದರ್ಶನವನ್ನು ಸಾಲಿನಲ್ಲಿ ನಿಂತು ಪಡೆದು ಪುನೀತರಾದರು.

ಜಾತ್ರಾ ಮಹೋತ್ಸವದಲ್ಲಿ ನಗರಸಭೆ ಪೌರಾಯುಕ್ತ ಕಾಂತರಾಜ್‌, ಉತ್ಸವ ಸಮಿತಿ ಅಧ್ಯಕ್ಷ ಟಿ.ಎ.ನಾಗರಾಜು, ಸದಸ್ಯರಾದ ವೆಂಕಟೇಶ್‌ ಬಾಬು, ಎನ್‌.ಸಿ.ಗೋವಿಂದರಾಜು, ಟಿ.ಆರ್‌.ಚಂದ್ರು, ಪರಮಶಿವಯ್ಯ, ವಿಶ್ವನಾಥ್‌, ನಗರಸಭೆ, ತಾಪಂ ಸದಸ್ಯರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Migrant workers problem

ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

juyoyu

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

vgfuytuy

ಮುಗಿದ ಮುಷ್ಕರ; ರಸ್ತೆಗಿಳಿದ ಸರ್ಕಾರಿ ಬಸ್‌

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

juyoyu

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

vgfuytuy

ಮುಗಿದ ಮುಷ್ಕರ; ರಸ್ತೆಗಿಳಿದ ಸರ್ಕಾರಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.