ಅನುದಾನಿತ ಶಾಲಾ, ಕಾಲೇಜು ಸಿಬ್ಬಂದಿಗೂ ಪಿಂಚಣಿ ನೀಡಿ

Team Udayavani, Jun 26, 2019, 12:16 PM IST

ಹಾಸನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಕಾಂತ್‌ ಪಡೇಸೂರು, ಅಧ್ಯಕ್ಷ ಪುಟ್ಟಲಿಂಗೇಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾಸನ: ಪಿಂಚಣಿ ವಂಚಿತ ತಾರತಮ್ಯ ಮಾಡದೇ ಎಲ್ಲಾ ಅನುದಾನಿತ ಶಾಲಾ- ಕಾಲೇಜುಗಳ ಸಿಬ್ಬಂದಿಗೂ ಪಿಂಚಣಿ ನೀಡಬೇಕೆಂದು ರಾಜ್ಯ ಅನುದಾನಿ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಕಾಂತ್‌ ಪಡೇಸೂರು ಒತ್ತಾಯಿಸಿದರು.

ರಾಜ್ಯದಲ್ಲಿ 1987-88ನೇ ಸಾಲಿನಿಂದ 1994-95ನೇ ಸಾಲಿನವರೆಗೂ ಆರಂಭ ವಾದ ಶಾಲಾ-ಕಾಲೇಜುಗಳಿಗೆ ಅಂದಿನ ಸರ್ಕಾರ ಶಾಶ್ವತ ಅನುದಾನ ರಹಿತ ಎಂಬ ಕರಾರು ಹಾಕಿ ಅನುಮತಿ ನೀಡಿತ್ತು. ಆದರೆ ಹೋರಾಟ ಮಾಡಿದ ಪರಿಣಾಮ ಸರ್ಕಾರ ಎರಡು ನಿರ್ಣಯಗಳಲ್ಲಿ 1992ರ ವರೆಗೂ ಹಾಗೂ 1995ರ ವರೆಗೂ ಆರಂಭವಾದ ಶಾಲೆಗಳಿಗೆ ಅನು ದಾನ ನೀಡಿತ್ತು. ಆದರೆ ಸರ್ಕಾರದ ಆದೇಶದಲ್ಲಿ ಸಿಬ್ಬಂದಿಯವರು ಆದೇಶ ಪೂರ್ವದಲ್ಲಿ 18-20 ವರುಷಗಳು ದುಡಿದರು ಸೇವೆ ಪರಿಗಣಿತವಾಗಲಿಲ್ಲ. ಸೇವೆಯ ಹಿರಿತನ ಪರಿಗಣಿಸಿ ವೇತನ ನಿಗದಿಯಾಗಲಿಲ್ಲ. ಆದೇಶದಂತೆ ಪಿಂಚಣಿ ಸೌಲಭ್ಯ ಸಿಗಲಿಲ್ಲ. 10 ವರ್ಷ ಗಳ ಸೇವಾವಧಿ ಮುಗಿಸಿ ನಿವೃತ್ತರಾದ ವರು ಪಿಂಚಣಿ ಸಿಗದೇ ಜೀವನಕ್ಕೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

ಅನುದಾನಕ್ಕೆ ಒಳಪಟ್ಟ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಸರ್ಕಾರ ನಿವೃತ್ತಿ ವೇತನ ಮಂಜೂರು ಮಾಡಿ ಅವರ ಈ ಬದುಕಿಗೆ ದಾರಿ ಮಾಡಿಕೊಡ ಬೇಕು. ಅನುದಾನ ರಹಿತ ಅವಧಿಯ ವೇತನವನ್ನು ಯಾವ ನೌಕರರರೂ ಕೇಳುವುದಿಲ್ಲ . ಆದರೆ ಶಾಲೆಗಳಲ್ಲಿ ಸೇವೆ ಆರಂಭಿಸಿದ ಒಟ್ಟು ದಿ ಸೇವಾ ಅವಧಿ ಯನ್ನು ಪರಿಗಣಿಸಿ ನಿವೃತ್ತಿ ವೇತನ ನಿಗದಿಪಡಿಸಬೇಕು. ರಾಜ್ಯದಲ್ಲಿ ಅನು ದಾನಿತ ಶಾಲಾ, ಕಾಲೇಜುಗಳ ಸುಮಾರು 35 ಸಾವಿರ ಜನ ಶಿಕ್ಷಕರು ಸಿಬ್ಬಂದಿ ಪಿಂಚಣಿ ವಂಚಿತರಾಗಿದ್ದಯ, ಪ್ರತಿ ವರ್ಷ 250ರಿಂದ 300 ಜನ ಶಿಕ್ಷಕರು ಮಾತ್ರ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಪಿಂಚಣಿ ನೀಡುವುದು ಸರ್ಕಾರಕ್ಕೆ ಹೊರೆಯಾಗದು ಎಂದು ಹೇಳಿದರು.

ರಾಜ್ಯ ಅನುದಾನಿತ ಶಾಲಾ ಕಾಲೇಜು ಗಳ ಒಕ್ಕೂಟದ ಅಧ್ಯಕ್ಷ ಪುಟ್ಟಲಿಂಗೇಗೌಡ, ರಾಜ್ಯ ಪ್ರತಿನಿಧಿ ನವೀನಕುಮಾರ್‌, ಉಪಾಧ್ಯಕ್ಷ ಮಂಜುನಾಥ್‌, ಅಶೋಕ್‌ ಮರ್ಗಿ, ಹರೀಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ