Udayavni Special

ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆ ಅಭಿವೃದ್ಧಿಯಾಗಿಲ್ಲ


Team Udayavani, Aug 25, 2019, 12:29 PM IST

hasan-tdy-2

ಹಾಸನ: ಸಮ್ಮಿಶ್ರ ಸರ್ಕಾರದ 14 ತಿಂಗಳ ಆಡಳಿತಾವಧಿಯಲ್ಲಿ ಜೆಡಿಎಸ್‌ ಮುಖಂಡರ ಅಭಿವೃದ್ಧಿಯಾಯಿತೇ ಹೊರತು ಹಾಸನ ಜಿಲ್ಲೆಯ ಅಭಿವೃದ್ಧಿಯಾಗಲಿಲ್ಲ ಎಂದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ, ವಿಧಾನಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್ ಮಂಜುನಾಥ್‌, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ಕಳೆದ 14 ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಆಡಳಿತವಿತ್ತೇ ಹೊರತು ಕಾಂಗ್ರೆಸ್‌ನ ಪಾಲಿರಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರಿಗೆ ನೋವು ಕೊಡುವುದು ತಪ್ಪಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದುದರಿಂದ ನಾವೆಲ್ಲಾ ಬಾಯಿ ಮುಚ್ಚಿಕೊಂಡಿದ್ದೆವು. ಆದರೆ ಈಗ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದರು.

ಏತ ನೀರಾವರಿ ನಿರ್ಲಕ್ಷ್ಯ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತದೆಂಬ ನಿರೀಕ್ಷೆಯಿತ್ತು. ಆದರೆ ಆ ನಿಟ್ಟಿನಲ್ಲಿ ನಿರೀಕ್ಷಿತ ಕೆಲಸ ಆಗಲೇ ಇಲ್ಲ. ನುಗ್ಗೇಹಳ್ಳಿ, ಹಿರೀಸಾವೆ, ಕಾಚೇನಹಳ್ಳಿ ಏತ ನೀರಾ ವರಿಯ 2 ಮತ್ತು 3 ನೇ ಹಂತದ ಯೋಜನೆಗಳು ಆಗಲಿಲ್ಲ. 2ನೇ ಹಂತದ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಶೇ. 90ರಷ್ಟು ಮುಗಿ ದಿದ್ದರೂ ಶೇ.10ರಷ್ಟು ಕಾಮಗಾರಿ ನಡೆಸದಂತೆ ಎಚ್.ಡಿ.ರೇವಣ್ಣ ತಡೆ ಹಿಡಿದಿದ್ದಾರೆ. 3ನೇ ಹಂತದ ಯೋಜನೆ ಮಂಜೂರಾಗಿಲ್ಲ ಎಂದರು.

ತೋಟಿ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಮಂಜೂರಾಗಿತ್ತು ಎಂದರು.

ಪ್ರಗತಿ ಕಾಣದ ಎತ್ತಿನ ಹೊಳೆ ಯೋಜನೆ: ಎತ್ತಿನಹೊಳೆ ಯೋಜನೆಯಿಂದ ಹಾಸನ ಜಿಲ್ಲೆಯ ಬೇಲೂರು ಮತ್ತು ಅರಸೀಕೆರೆ ತಾಲೂಕಿಗೆ ನೀರು ಹರಿಯಲಿದೆ. ಆದರೆ 14 ತಿಂಗಳಲ್ಲಿ ಈ ಮಹತ್ವದ ಯೋಜನೆಯ ಪ್ರಗತಿ ಆಗಲೇ ಇಲ್ಲ. ಈ ಯೋಜನೆಯ ಪ್ರಗತಿಯ ಪರಿಶೀಲನೆಗೆ ಒಂದು ಸಭೆಯೂ ನಡೆಯಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ ಆರೋಪಿಸಿದರು.

ಜಿಪಂಗೆ ಅನುದಾನ ಶೂನ್ಯ: ಹಾಸನ ಜಿಲ್ಲಾ ಪಂಚಾಯಿತಿಗೂ ಸಮ್ಮಿಶ್ರ ಸರ್ಕಾರದಲ್ಲಿ ವಿಶೇಷ ಅನುದಾನ ಬರಲಿಲ್ಲ ಎಂದು ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಆರೋಪಿಸಿದರು.

ಸಿದ್ದರಾಮಯ್ಯ ಮಾತು ಸತ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಯಮಯ್ಯ ಅವರು ದೇವೇಗೌಡರು ಮತ್ತು ಎಚ್‌ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವುದು ಶೇ.100ರಷ್ಟು ಸತ್ಯ. ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಗಳು ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯ ಬದ್ಧತೆ ಇರುವ ರಾಜಕಾರಣಿ ಎಂದು ಕಾಂಗ್ರೆಸ್‌ ಮುಖಂಡರು ಸಮರ್ಥಿಸಿಕೊಂಡರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

BSY

ಪದವಿಗೆ ಆನ್‌ಲೈನ್‌ ಕಲಿಕೆ ವೇದಿಕೆ; ನ. 17ರಂದು ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

Rahul

ಆಸ್ಟ್ರೇಲಿಯ ಪ್ರವಾಸ : ರೋಹಿತ್‌ ಗೈರು, ರಾಹುಲ್‌ ಉಪನಾಯಕ

ಎಕ್ಕೂರಿನಲ್ಲಿ ಫಿಶರೀಸ್‌ ವಿಶ್ವವಿದ್ಯಾನಿಲಯ?

ಎಕ್ಕೂರಿನಲ್ಲಿ ಫಿಶರೀಸ್‌ ವಿಶ್ವವಿದ್ಯಾನಿಲಯ?

ದಾಖಲೆ ಸಲ್ಲಿಸದ ಸಿಇಟಿ ರ್‍ಯಾಂಕ್‌ ವಿಜೇತರು

ದಾಖಲೆ ಸಲ್ಲಿಸದ ಸಿಇಟಿ ರ್‍ಯಾಂಕ್‌ ವಿಜೇತರು

EPF ವಾಟ್ಸ್‌ ಆ್ಯಪ್‌ ಸಹಾಯವಾಣಿ

ಇಪಿಎಫ್ ವಾಟ್ಸ್‌ ಆ್ಯಪ್‌ ಸಹಾಯವಾಣಿ

ಅಮೆರಿಕ- ಭಾರತ ಮತ್ತಷ್ಟು ನಿಕಟ ; ಇಂದು ದಿಲ್ಲಿಯಲ್ಲಿ 2+2 ಮಾತುಕತೆ

ಅಮೆರಿಕ- ಭಾರತ ಮತ್ತಷ್ಟು ನಿಕಟ ; ಇಂದು ದಿಲ್ಲಿಯಲ್ಲಿ 2+2 ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hasan-tdy-1

ಬಸ್‌ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ

dhanvir

ಬಂಡೀಪುರದಲ್ಲಿ ರಾತ್ರಿ ಸಫಾರಿ: ಚಿತ್ರನಟ ಧನ್ವೀರ್ ವಿರುದ್ದ ಪ್ರಕರಣ ದಾಖಲು

ಕೆರೆ ಬತ್ತದಂತೆ ನೋಡಿಕೊಳ್ಳಿ

ಕೆರೆ ಬತ್ತದಂತೆ ನೋಡಿಕೊಳ್ಳಿ

Hasan-tdy-1

ಚೆನ್ನಮ್ಮನ ಆದರ್ಶ ಯುವ ಪೀಳಿಗೆ ಪಾಲಿಸಲಿ

HASAN-TDY-2

ವೀರಗಲ್ಲು ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

BSY

ಪದವಿಗೆ ಆನ್‌ಲೈನ್‌ ಕಲಿಕೆ ವೇದಿಕೆ; ನ. 17ರಂದು ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

usa-india

2+2 ಮಾತುಕತೆ ; ಬಿಕ್ಕಟ್ಟಿನ ನಡುವೆ ಬಲವರ್ಧನೆ

Kudಕದಿರು ಕಟ್ಟುವ ಹಬ್ಬಕ್ಕೆ 70 ತರಹೇವಾರಿ ಕದಿರುಗಳು

ಕದಿರು ಕಟ್ಟುವ ಹಬ್ಬಕ್ಕೆ 70 ತರಹೇವಾರಿ ಕದಿರುಗಳು

Rahul

ಆಸ್ಟ್ರೇಲಿಯ ಪ್ರವಾಸ : ರೋಹಿತ್‌ ಗೈರು, ರಾಹುಲ್‌ ಉಪನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.