ಅನಾಥ ರಕ್ಷಕ ಲಿಂ.ಹಾನಗಲ್ಲ ಕುಮಾರ ಸ್ವಾಮೀಜಿ


Team Udayavani, Mar 7, 2021, 7:11 PM IST

programme held at hanagal

ಹಾನಗಲ್ಲ: ವೈಚಾರಿಕ ಯುಗದಲ್ಲಿರುವ ನಾವು ಆಧ್ಯಾತ್ಮ ಹಾಗೂ ಸದಾಚಾರಗಳನ್ನು ಮರೆಯದೇ ಸಮಾಜಮುಖೀ ಕಳಕಳಿಯೊಂದಿಗೆ ಸಮೃದ್ಧ ಸೌಖ್ಯ ಕುಟುಂಬಿಗಳಾಗಬೇಕೆಂದು ಹುಬ್ಬಳ್ಳಿಮೂರುಸಾವಿರಮಠದ ಜಗದ್ಗುರು  ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.

ಇಲ್ಲಿನ ವಿರಕ್ತ ಮಠದಲ್ಲಿ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳವರ 91 ನೇ ಪುಣ್ಯಸ್ಮರಣೋತ್ಸವದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಯಕ, ದಾಸೋಹ ಶರಣರು ಸ್ವಯಂ ಆಚರಿಸಿ, ಹೇಳಿದ ಸತ್ಯ. ಎಲ್ಲರೂಒಂದಾಗಿ ಬದುಕಬೇಕು ಹಾಗೂ ಜೀವನದ ಶ್ರದ್ಧೆಗೆ ಸಾತ್ವಿಕ ಚಿಂತನೆಗಳು ಅಗತ್ಯ ಎಂಬುದು ಬಹುಮುಖ್ಯ ಸಂಗತಿ. ಕಾಲಹರಣ ಮಾಡದೇ ಕಾಯಕ ಧರ್ಮವನ್ನು ಪ್ರಚಾರ ಮಾಡುವ ಅಗತ್ಯವಿದೆ. ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಬಡವರು, ಅಂಧರು, ಅನಾಥರ ತಂದೆ-ತಾಯಿಯಾಗಿದ್ದರು. ವಟುಗಳನ್ನು ಮಠಕ್ಕೆ ನೀಡುವ ಸಂಕಲ್ಪ ಅವರದ್ದಾಗಿತ್ತು. ದೃಷ್ಟಿ ಯೋಗದ ಮೂಲಕ ಅಂತಃಶುದ್ಧಿ ಮಾಡಿಕೊಂಡು ಆಚಾರ, ನಿಷ್ಠೆಯುಳ್ಳವರಾಗಿ, ಅಹಿಂಸಾ ತತ್ವ ಪ್ರತಿಪಾದಿಸಿದ ಮಹಾತ್ಮ ಎಂದು ಸ್ಮರಿಸಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಮಾನತೆ, ಸೌಖ್ಯ ಬದುಕಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಸಮಾಜಕ್ಕಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಆ ಕಾಲದಲ್ಲಿಯೇ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸುಸ್ಥಿರ ಅಭಿವೃದ್ಧಿ ಪರ ಕೃಷಿಗೆ ಚಾಲನೆ ನೀಡಿದ್ದರು.

ಆಧುನಿಕ ಕೃಷಿಗೆ ಮುಂದಾಗಿದ್ದರು ಎಂದು ಹೇಳಿದರು. ಬೆಳಗಾವಿಯ ನಿವೃತ್ತ ಉಪನ್ಯಾಸಕಿ ಶರಣೆ ಪ್ರೊ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಮಹಾತ್ಮರ ಜೀವನಾದರ್ಶಗಳು ಮಾನವನನ್ನು ಮಹಾಮಾನವನನ್ನಾಗಿಸುವ ಶಕ್ತಿ ಹೊಂದಿವೆ. ಅನುಭಾವಿಗಳ ಅನುಭವಾಮೃತಗಳು ನಮ್ಮ ಮಕ್ಕಳಿಗೆ ತಲುಪಬೇಕು. ಕೇಡನ್ನು ಅಹ್ವಾನಿಸದೇ ಬೇಡವಾಗಿರುವುದನ್ನು ಬಿಟ್ಟು ಒಳ್ಳೆಯ ಬದುಕಿಗೆ ಮುಂದಾಗಬೇಕು. ಕ್ರಯಾಶೀಲರನ್ನು ಸದಾ ಟೀಕಿಸುತ್ತಲೇ ಇರುತ್ತಾರೆ. ಇದನ್ನು ಮೀರಿ ಸಮಾಜಕ್ಕೆ ದುಡಿಯುವುದೇ ನಿಜವಾದ ಶಕ್ತಿ ಎಂದರು.

ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಬಿಜಕಲ್‌ನ ಶಿವಲಿಂಗ ಮಹಾಸ್ವಾಮಿಗಳು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಮಹಾಸ್ವಾಮಿಗಳು, ಮೂಲೆಗದ್ದೆ ಚನ್ನಬಸವ ಮಹಾಸ್ವಾಮಿಗಳು, ಗುಂಡೂರಿನ ತಿಪ್ಪೇಶ್ವರ ಮಹಾಸ್ವಾಮಿಗಳು, ಶೇಗುಣಸಿಯ ಜಯದೇವ ಶ್ರೀಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಗಡಿ ತೋಟದ ಮಾಲಿಕರು ಹಾಗೂ ಕೃಷಿ ತಜ್ಞ ಜಯದೇವ ಅಗಡಿ, ಜಂಪರೂಪ ಆಟಗಾರ್ತಿ ಹುಬ್ಬಳ್ಳಿಯ ಕೃತಿಕಾ ಹತ್ತಿ ಹಾಗೂ ಪ್ರತಿ ವರ್ಷದಂತೆ ಹಾನಗಲ್ಲ ತಾಲೂಕಿನ ನಿವೃತ್ತ ನೌಕರನ್ನು ಗೌರವಿಸಲಾಯಿತು. ಪ್ರೊ. ಎಂ.ಬಿ.ನಾಯಕ್‌ ಸ್ವಾಗಿತಿಸಿ, ಡಾ.ವಿಶ್ವನಾಥ ಬೋಂದಾಡೆ ನಿರೂಪಿಸಿದರು.

ಸಾಮೂಹಿಕ ವಿವಾಹ: ಇದೇ ದಿನ ಬೆಳಿಗ್ಗೆ ಶ್ರೀಮಠದಲ್ಲಿ ಸಾಮೂಹಿಕ ವಿವಾಹಗಳು ನಡೆದವು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ ಭಾವ ಬಿಂಬದ ಮೆರವಣಿಗೆ ನಡೆಯಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.