Udayavni Special

ಹೊಸ ರಿತ್ತಿ ಇಲ್ಲವೇ ಕರ್ಜಗಿಗೆ ಜಿಪಂ ಕ್ಷೇತ್ರ?


Team Udayavani, Mar 26, 2021, 7:19 PM IST

ಹೊಸ ರಿತ್ತಿ ಇಲ್ಲವೇ ಕರ್ಜಗಿಗೆ ಜಿಪಂ ಕ್ಷೇತ್ರ?

ಹಾವೇರಿ: ಗ್ರಾಪಂ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಚುನಾವಣೆ ಆಯೋಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆಸಿದ್ಧತೆ ನಡೆಸಿದ್ದು, ಈಗಾಗಲೇ ಕ್ಷೇತ್ರ ವಿಂಗಡಣೆ ಕಾರ್ಯದಲ್ಲಿ ತೊಡಗಿದೆ.

ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾವ ಯಾವ ಕ್ಷೇತ್ರ ಬದಲಾವಣೆಯಾಗಲಿವೆ ಹಾಗೂ ನೂತನ6ನೇ ಜಿಪಂ ಕ್ಷೇತ್ರ ಯಾವುದಾಗಲಿದೆ ಎಂಬ ಬಗ್ಗೆ ರಾಜಕೀಯ ನಾಯಕರಲ್ಲಿ ಕುತೂಹಲ ಹೆಚ್ಚಿಸಿದೆ.ತಾಲೂಕಿನಲ್ಲಿ ಈ ಮೊದಲು 5 ಜಿಪಂಕ್ಷೇತ್ರಗಳಿದ್ದವು. ಇದೀಗ ಅವುಗಳನ್ನು6ಕ್ಕೇರಿಸಲು ಚುನಾವಣೆ ಆಯೋಗಈಗಾಗಲೇ ಆದೇಶ ಹೊರಡಿಸಿದೆ.

ಹೀಗಾಗಿ ತಾಲೂಕಿಗೆ ಮತ್ತೂಂದು ಜಿಪಂ ಕ್ಷೇತ್ರ ಲಭ್ಯವಾಗಲಿದೆ. ಈಹಿನ್ನೆಲೆಯಲ್ಲಿ ನೂತನ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಾ ಆಕಾಂಕ್ಷಿಗಳು ಹಾಗೂ ಮತದಾರರಲ್ಲಿ ಕುತೂಹಲ ಉಂಟಾಗಿದೆ.

ತಾಲೂಕಿಗೆ ಮತ್ತೂಂದು ಜಿಪಂ ಕ್ಷೇತ್ರ ಭಾಗ್ಯ: ಚುನಾವಣೆ ನಿಯಮಾವಳಿ ಪ್ರಕಾರ ಹೆಚ್ಚಿನಜನಸಂಖ್ಯೆ ಹೊಂದಿರುವ ಗ್ರಾಮವನ್ನು ಜಿಪಂ ಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಘೋಷಿಸಲಾಗುತ್ತದೆ.ಸದ್ಯ ತಾಲೂಕಿನಲ್ಲಿ ಹೊಸರಿತ್ತಿ ಹಾಗೂ ಕರ್ಜಗಿಗ್ರಾಮಗಳು ಹೆಚ್ಚಿನ ಜನಸಂಖ್ಯೆಹೊಂದಿರುವ ಗ್ರಾಪಂಗಳ ಪಟ್ಟಿಯಲ್ಲಿವೆ. ಹೀಗಾಗಿ ಪ್ರಾದೇಶಿಕ ವಿಸ್ತರಣೆಯನ್ನುಗಮನದಲ್ಲಿಟ್ಟುಕೊಂಡು ಎರಡರಲ್ಲಿಒಂದು ಗ್ರಾಮವನ್ನು ಕೇಂದ್ರ ಸ್ಥಾನವನ್ನಾಗಿ ಜಿಪಂ ಕ್ಷೇತ್ರ ವಿಂಗಡಿಸಲು ತಾಲೂಕು ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ಹೊಸರಿತ್ತಿಯನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಜಿಪಂ ಕ್ಷೇತ್ರ ಘೋಷಣೆಯ ಸಾಧ್ಯತೆಗಳು ಹೆಚ್ಚಿರುವ ಮಾಹಿತಿಲಭ್ಯವಾಗಿದೆ. ಕರ್ಜಗಿ ಗ್ರಾಮವನ್ನು ಘೋಷಣೆಮಾಡಿದರೆ ಅಕ್ಕಪಕ್ಕದಲ್ಲಿ ದೇವಗಿರಿ, ಅಗಡಿಜಿಪಂ ಕ್ಷೇತ್ರಗಳಿವೆ. ಹೀಗಾಗಿ ಹೊಸರಿತ್ತಿ ಕೇಂದ್ರ ಸ್ಥಾನವನ್ನಾಗಿ ಮಾಡಿ ಜಿಪಂ ಕ್ಷೇತ್ರ ಮಾಡಿದರೆಪ್ರಾದೇಶಿಕವಾರು ಕ್ಷೇತ್ರ ವಿಂಗಡಣೆ ಸರಿಯಾಗುತ್ತದೆಎಂಬ ವಿಶ್ಲೇಷಣೆಯನ್ನು ಆಯೋಗ ನಡೆಸಿದೆ ಎನ್ನಲಾಗುತ್ತಿದೆ.

ನೂತನ ಕ್ಷೇತ್ರಕ್ಕೆ ಸೇರ್ಪಡೆಯಾಗುವ ಗ್ರಾಮಗಳು: ತಾಲೂಕಿನಲ್ಲಿ ಈ ಮೊದಲು ದೇವಗಿರಿ, ಅಗಡಿ,ಕಬ್ಬೂರ, ನೆಗಳೂರ, ಹಾವನೂರ ಜಿಪಂ ಕ್ಷೇತ್ರಗಳಿದ್ದವು. ಇದೀಗ ಎಲ್ಲ ಕ್ಷೇತ್ರಗಳಲ್ಲಿನ ಒಂದು,ಎರಡು ಗ್ರಾಮಗಳನ್ನು ಜನಸಂಖ್ಯೆವಾರು ವಿಂಗಡಿಸಿನೂತನ ಕ್ಷೇತ್ರ ರಚನೆಗೆ ಸಿದ್ಧತೆ ನಡೆಸಲಾಗಿದೆ.ದೇವಗಿರಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕರ್ಜಗಿ ಗ್ರಾಮ ಹಾಗೂ ನೆಗಳೂರ ಕ್ಷೇತ್ರದಲ್ಲಿದ್ದ ಹೊಸರಿತ್ತಿಯನ್ನು ವಿಂಗಡಿಸಲಾಗಿದೆ. ಈ ಎರಡೂ ದೊಡ್ಡ ಗ್ರಾಮಗಳ ಜತೆಗೆ ಯಲಗಚ್ಚ, ರಾಮಾಪುರ,ಕೋಣನತಂಬಿಗಿ, ಅಗಸನಮಟ್ಟಿ, ಶಿರಮಾಪುರ, ಮಣ್ಣೂರ, ಕೆಸರಳ್ಳಿ, ಹೊಸರಿತ್ತಿ, ಚನ್ನೂರ, ಅಕ್ಕೂರ,ಹಳೇರಿತ್ತಿ, ಕರ್ಜಗಿ, ಯತ್ತಿನಹಳ್ಳಿ ಗ್ರಾಮಗಳನ್ನುಸೇರ್ಪಡೆಗೊಳಿಸಲಾಗಿದೆ. ಈ ಎಲ್ಲ ಗ್ರಾಮಗಳ ಒಟ್ಟು ಜನಸಂಖ್ಯೆ 32,691ರಷ್ಟಾಗಲಿದೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಗೂ ಮುನ್ನ ಕ್ಷೇತ್ರ ಬದಲಾವಣೆ ಹಾಗೂ ನೂತನ ಕ್ಷೇತ್ರ ಸೇರ್ಪಡೆ ಕಾರ್ಯ ಭರದಿಂದ ಸಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿರುವ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ತಾಪಂನ 4 ಕ್ಷೇತ್ರ ಕಡಿತ :  ತಾಪಂನಲ್ಲಿ ಈ ಹಿಂದೆ 20 ಕ್ಷೇತ್ರಗಳಿದ್ದವು. ಇದೀಗ 4 ಕ್ಷೇತ್ರಗಳನ್ನು ಕಡಿತಗೊಳಿಸಿ, ಸಂಗೂರ, ದೇವಿಹೊಸೂರ, ದೇವಗಿರಿ, ಕಬ್ಬೂರ, ಕುರುಬಗೊಂಡ, ಕಳ್ಳಿಹಾಳ, ಅಗಡಿ, ಕರ್ಜಗಿ, ಕನವಳ್ಳಿ, ಹೊಸರಿತ್ತಿ, ಯಲಗಚ್ಚ, ಬೆಳವಿಗಿ, ಹೊಸಕಿತ್ತೂರ, ನೆಗಳೂರ, ಹಾವನೂರ, ಕೂರಗುಂದ ಸೇರಿ 16 ನೂತನ ತಾಪಂ ಕ್ಷೇತ್ರಗಳನ್ನು ರಚಿಸಲು ಆಯೋಗ ಜನಸಂಖ್ಯೆವಾರು ಕ್ಷೇತ್ರಗಳನ್ನು ವಿಂಗಡಿಸಿದೆ. ಇದಕ್ಕೆ ರಾಜ್ಯ ಚುನಾವಣಾ ಆಯೋಗದಿಂದ ಅಂತಿಮ ಮುದ್ರೆ ಹಾಕಿ ಅಧಿಕೃತ ಘೋಷಣೆ ಮಾಡುವುದು ಬಾಕಿಯಿದೆ.

ತಾಲೂಕಿನಲ್ಲಿ 5 ಜಿಪಂ ಕ್ಷೇತ್ರಗಳ ಬದಲು ಈಗ 6 ಜಿಪಂ ಕ್ಷೇತ್ರಗಳು ಆಗಲಿವೆ. ಈ ಬಗ್ಗೆ ವಿಂಗಡಣೆ ಮಾಡುವ ಕಾರ್ಯ ನಡೆದಿದ್ದು, ಕೊನೆಯ ಹಂತಕ್ಕೆ ಬಂದಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಆಧರಿಸಿ ಜಿಪಂ ಕ್ಷೇತ್ರ ಘೋಷಿಸಲಾಗುತ್ತದೆ. ಈ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ, ಅನುಮೋದನೆ ದೊರೆತ ಬಳಿಕ ಅಧಿಕೃತ ಘೋಷಣೆ ಮಾಡಲಾಗುವುದು.  -ಗಿರೀಶ ಸ್ವಾದಿ, ತಹಶೀಲ್ದಾರ್‌, ಹಾವೇರಿ.

 

-ವೀರೇಶ ಮಡ್ಲೂರ

ಟಾಪ್ ನ್ಯೂಸ್

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

ಅಳಿದು ಹೋದ ಐತಿಹಾಸಿಕ ಮಲ್ಲಾರು ಕೋಟೆ !

ಅಳಿದು ಹೋದ ಐತಿಹಾಸಿಕ ಮಲ್ಲಾರು ಕೋಟೆ !

ಅಪಾಯಕಾರಿ ಮೆಲ್ಕಾರ್‌ ಜಂಕ್ಷನ್‌ : ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ

ಅಪಾಯಕಾರಿ ಮೆಲ್ಕಾರ್‌ ಜಂಕ್ಷನ್‌ : ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ

Haladi circle

ನನೆಗುದಿಗೆ ಬಿದ್ದ ಹಾಲಾಡಿ ವೃತ್ತ ನಿರ್ಮಾಣ ಯೋಜನೆ

ಮಾಯವಾದವೋ ಕೆರೆಗಳು ಮಾಯವಾದವು !

ಮಾಯವಾದವೋ ಕೆರೆಗಳು ಮಾಯವಾದವು !

ಯೋಗಾಭ್ಯಾಸದಿಂದ ಆರೋಗ್ಯ ಸಿದ್ಧಿ

ಯೋಗಾಭ್ಯಾಸದಿಂದ ಆರೋಗ್ಯ ಸಿದ್ಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ghfghfgh

ಬಸ್‌ ಸಂಚಾರದಲ್ಲಿ  ಮತ್ತೆ ಇಳಿಮುಖ

hgfhdfh

ಹಾವೇರಿ ನಗರಸಭೆ ಆದಾಯಕ್ಕೆ ‘ವರದಾ’ನ

rtete

ಹಾನಗಲ್ಲನಲ್ಲಿ ಕುಡಿವ ನೀರಿಗೆ ಆಗದು ತೊಂದರೆ!

hrtr

ಹಾವೇರಿಯಲ್ಲಿ ರಸ್ತೆಗಿಳಿದ 140 ಬಸ್‌: ಪ್ರಯಾಣಿಕರ ನಿಟ್ಟುಸಿರು

cfnghfgf

ಸಮನ್ವಯದಿಂದ ಯುದ್ದೋಪಾದಿ ಕೆಲಸ ಮಾಡಿ : ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

MUST WATCH

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

ಹೊಸ ಸೇರ್ಪಡೆ

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

ಸಾಲು ನಿಲ್ದಾಣವಿದ್ದರೂ ನಿರ್ವಹಣೆಯಿಲ್ಲದೆ ನಿರುಪಯುಕ್ತ

ಅಳಿದು ಹೋದ ಐತಿಹಾಸಿಕ ಮಲ್ಲಾರು ಕೋಟೆ !

ಅಳಿದು ಹೋದ ಐತಿಹಾಸಿಕ ಮಲ್ಲಾರು ಕೋಟೆ !

ಅಪಾಯಕಾರಿ ಮೆಲ್ಕಾರ್‌ ಜಂಕ್ಷನ್‌ : ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ

ಅಪಾಯಕಾರಿ ಮೆಲ್ಕಾರ್‌ ಜಂಕ್ಷನ್‌ : ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ

Haladi circle

ನನೆಗುದಿಗೆ ಬಿದ್ದ ಹಾಲಾಡಿ ವೃತ್ತ ನಿರ್ಮಾಣ ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.