ಪ್ರಧಾನಿ-ಆದಿತ್ಯನಾಥರಿಂದ ಕಾಶಿ ಕ್ಷೇತ್ರ ವಿಶ್ವ ಪ್ರಸಿ ದ್ಧ : ಡಾ| ಚಂದ್ರಶೇಖರ ಶ್ರೀ
Team Udayavani, Jan 19, 2022, 9:25 PM IST
ವಾಡಿ: ಇಷ್ಟು ವರ್ಷಗಳ ಕಾಲ ಸಂದಿಗೊಂದಿಯಲ್ಲಿದ್ದ ಕಾಶಿ ವಿಶ್ವನಾಥ ಸನ್ನಿ ಧಿಯೀಗ ವಿಶ್ವ ಪ್ರಸಿದ್ಧ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು, ಕೇವಲ 3000 ಚದರ ಅಡಿಯಲ್ಲಿದ್ದ ದೇವಸ್ಥಾನ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆಸಕ್ತಿಯಿಂದ ಸದ್ಯ 5 ಲಕ್ಷ ಚದರ ಅಡಿಯಲ್ಲಿ ಪುಣ್ಯಕ್ಷೇತ್ರ ವಿಸ್ತಾರವಾಗಿದೆ ಎಂದು ಕಾಶಿ ಜ್ಞಾನ ಸಿಂಹಾಸನಾದೀಶ್ವರ ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ನುಡಿದರು.
ಮಂಗಳವಾರ ಹಳಕರ್ಟಿ ಕಟ್ಟಿಮನಿ ಹಿರೇಮಠದ ಲಿಂ. ಮುನೀಂದ್ರ ಶಿವಯೋಗಿಗಳ ಶಿಲಾ ಮಂಟಪಕ್ಕೆ ಭೇಟಿ ನೀಡಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಪೂಜ್ಯರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಪುಣ್ಯಕ್ಷೇತ್ರ ಅಭಿವೃದ್ಧಿ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಪರಿಣಾಮ ಈ ಹಿಂದೆ ಕಾಶಿ ಕ್ಷೇತ್ರವನ್ನು ನೋಡಿದವರು ಮತ್ತು ಯಾವತ್ತೂ ನೋಡದೇ ಇರುವವರು ಇವತ್ತೇ ಮುನೀಂದ್ರ ಶ್ರೀಗಳ ನೇತೃತ್ವದಲ್ಲಿ ಕಾಶಿಕಡೆ ಮುಖಮಾಡಬೇಕು.
ಅಲ್ಲಿನ ಅಭಿವೃದ್ಧಿ ಹಾಗೂ ಕಾಶಿ ಸೌಂದರ್ಯ ಕಣ್ತುಂಬಿಕೊಳ್ಳಬೇಕು ಎಂದರು. ಈಗಾಗಲೇ ಕಾಶಿ ಪೀಠಕ್ಕೆ ಉತ್ತರಾ ಧಿಕಾರಿ ನೇಮಿಸ ಲಾಗಿದೆ. ಅವರ ಪಟ್ಟಾಭೀಷೇಕ ಸಮಾರಂಭದ ಸಂದರ್ಭದಲ್ಲಿ ಎಲ್ಲರೂ ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಪಡೆದು ಪುನಿತರಾಗಬೇಕು ಎಂದರು. ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಸ್ವಾಮೀಜಿ, ದಂಡಗುಂಡ ಮಠದ ಶ್ರೀ ಸಂಗನಬಸವ ಸ್ವಾಮೀಜಿ, ಶಖಾಪುರ ತಪೋವನದ ಶ್ರೀ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.