ಹೆಚ್ಚು ದರ ವಸೂಲಿ ಮಾಡಿದ್ರೆ ದೂರು ನೀಡಿ


Team Udayavani, Apr 18, 2021, 6:47 PM IST

Complaint for higher rates

ಕಲಬುರಗಿ: ಆರನೇ ವೇತನ ಆಯೋಗದ ಅನ್ವಯ ಸಂಬಳಜಾರಿ ಮಾಡಬೇಕೆಂದು ಸಾರಿಗೆ ನೌಕರರು ಕೈಗೊಂಡಿರುವಮುಷ್ಕರ ಶನಿವಾರ 11 ದಿನ ಪೂರೈಸಿದ್ದು, ಸಾರಿಗೆ ಬಸ್‌ಗಳ ಸಂಚಾರ ಇಲ್ಲದೇ ಸಾರ್ವಜನಿಕರ ಪರದಾಟಮುಂದುವರಿದಿದೆ.ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳಸಂಖ್ಯೆ ಹೆಚ್ಚಾಗಿದ್ದು, ಅನಿರ್ವಾಯವಾಗಿ ಖಾಸಗಿಯವರನ್ನೇ ಆಶ್ರಯಿಸಬೇಕಾಗಿದೆ.

ಅಲ್ಲದೇ, ಹೆಚ್ಚಿನ ಹಣವನ್ನುಪ್ರಯಾಣಿಕರಿಂದ ವಸೂಲಿ ಮಾಡುವುದು ಮುಂದುವರಿದಿದೆ.ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ಆರೋಪಗಳುದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಈ ನಿಟ್ಟಿನಲ್ಲಿ ಸಾರ್ವಜನಿಕರ ಪ್ರಯಾಣಕ್ಕಾಗಿ ಬಳಸುತ್ತಿರುವಮ್ಯಾಕ್ಸಿಕ್ಯಾಬ್‌, ಕಾಂಟ್ರಾÂಕ್ಟ್ ಕ್ಯಾರೇಜ್‌ ಬಸ್‌, ಶಾಲಾ ಬಸ್‌ಮತ್ತು ಪಿಎಸ್‌ವಿ ಬಸ್‌ಗಳಲ್ಲಿ ನಿಗದಿತ ಪ್ರಯಾಣ ದರಕ್ಕಿಂತಹೆಚ್ಚು ದರ ವಸೂಲಿ ಮಾಡಿದಲ್ಲಿ ಪ್ರಯಾಣಿಕರು ವಾಹನ ಸಂಖ್ಯೆಸಮೇತ ಆರ್‌ಟಿಒ ಕಚೇರಿಗೆ ದೂರು ಕೊಡಿ ಎಂದು ಸಾರಿಗೆಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಗೆ ಮುಷ್ಕರಹೂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು,ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಉಂಟಾಗುವತೊಂದರೆ ತಪ್ಪಿಸುವ ಸಲುವಾಗಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲುಖಾಸಗಿ ವಾಹನಗಳಿಗೆ ನಿಗದಿತ ದರ ಪಡೆದು ಸಂಚರಿಸಲುಅನುಮತಿ ನೀಡಲಾಗಿದೆ. ಆದರೆ, ಪ್ರಯಾಣಿಕರಿಂದ ನಿಗದಿತದರಕ್ಕಿಂತ ಹೆಚ್ಚಿನ ದರವನ್ನು ವಾಹನದ ಮಾಲೀಕರು ವಸೂಲಿಮಾಡುತ್ತಿದ್ದಾರೆಂದು ಸಾರ್ವಜನಿಕರಿಂದ ದೂರು ಬರುತ್ತಿವೆಎಂದು ಪ್ರಾದೇಶಿಕ ಸಾರಿಗೆ ಅ ಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಖಾಸಗಿ ವಾಹನದ ಮಾಲೀಕರು ಹೆಚ್ಚಿನಪ್ರಯಾಣ ದರ ವಸೂಲಿ ಮಾಡಿದ್ದು ಗಮನಕ್ಕೆ ಬಂದಲ್ಲಿ ವಾಹನಸಂಖ್ಯೆ ಸಮೇತ ಆರ್‌ಟಿಒ ಕಚೇರಿಗೆ ಲಿಖೀತ ರೂಪದಲ್ಲಿ ದೂರುನೀಡಿದರೆ, ಅಂತಹ ವಾಹನದ ಮಾಲೀಕರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

1291 ಬಸ್‌ ಸಂಚಾರ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆವ್ಯಾಪ್ತಿಯಲ್ಲಿ ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆಯುತ್ತಿದೆ.ಮುಷ್ಕರದ ಮೊದಲ ದಿನ ಎಂದರೆ ಏ.7ರಂದು 101 ಸಾರಿಗೆಬಸ್‌ಗಳು ಮಾತ್ರ ಸಂಚರಿಸಿದ್ದವು. ಆದರೆ, ದಿನೆದಿನೇಇವುಗಳ ಸಂಖ್ಯೆ ಅಧಿಕವಾಗುತ್ತಿದೆ.

ಗುರುವಾರ 725 ಬಸ್‌ಗಳು ಮತ್ತು ಶುಕ್ರವಾರ 1154 ಬಸ್‌ಗಳು ಕಾರ್ಯಾಚರಣೆನಡೆಸಿದ್ದರೆ, ಶನಿವಾರ ಸಂಜೆಯೊಳಗೆ 1291 ಸಾರಿಗೆ ಬಸ್‌ಗಳುಕಾರ್ಯಾಚರಣೆ ಮಾಡಿವೆ.ಹೊಸದಾಗಿ 880 ಸಿಬ್ಬಂದಿಗೆ ವೇತನ: ಮುಷ್ಕರ ಬಿಟ್ಟುಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಸಂಖ್ಯೆ ಅಧಿಕವಾಗುತ್ತಿದ್ದು,ಏ.12ರಂದು 7335 ನೌಕರರು ಮತ್ತು ಏ.15ರಂದು 1927ನೌಕರರಿಗೆ ಮಾರ್ಚ್‌ ತಿಂಗಳ ವೇತನ ಪಾವತಿಸಲಾಗಿತ್ತು.

ಈಗಮತ್ತೆ 880 ನೌಕರರಿಗೆ ವೇತನ ಬಿಡುಗಡೆ ಮಾಡಲಾಗಿದೆ. ಈಮೂಲಕ ಇದು ವರೆಗೆ 10142 ಸಾರಿಗೆ ನೌಕರರಿಗೆ 19.63ಕೋಟಿ ರೂ. ವೇತನವನ್ನು ಈಶಾನ್ಯ ಸಾರಿಗೆ ಸಂಸ್ಥೆ ನೀಡಿದೆ.ಖಾಸಗಿ ವಾಹನಗಳ ಕಡಿತ: ಸಾರ್ವಜನಿಕರ ಅನುಕೂಲಕ್ಕಾಗಿಸಾರಿಗೆ ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್‌ ಮತ್ತು ಇನ್ನಿತರವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಳೆದಎರಡು ದಿನ ಗಮನಿಸಿದರೆ, ಖಾಸಗಿ ವಾಹನಗಳ ಸಂಖ್ಯೆ ಕೊಂಚಇಳಿಮುಖವಾಗುತ್ತಿದೆ.ಈಶಾನ್ಯ ಸಾರಿಗೆ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿಶುಕ್ರವಾರ 386 ಖಾಸಗಿ ಬಸ್‌ಗಳು ಸಂಚರಿಸಿದ್ದವು. ಆದರೆ,ಶನಿವಾರ ಖಾಸಗಿ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ 286ಕ್ಕೆಇಳಿಕೆಯಾಗಿದೆ. ಅಂತಾರಾಜ್ಯಗಳ ಸಾರಿಗೆ ಬಸ್‌ಗಳು ಶುಕ್ರವಾರ220 ಸಂಚರಿಸಿದ್ದರೆ, ಶನಿವಾರ 187 ಕಾರ್ಯಾಚರಣೆ ಮಾಡಿವೆ.ಅದೇ ರೀತಿ ಕ್ರಮವಾಗಿ 2,497 ಮತ್ತು 2,141 ಜೀಪ್‌, ಕ್ರೂಸರ್‌ಮತ್ತಿತರ ವಾಹನಗಳು ಸಂಚರಿಸಿವೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.