ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ: ಪಾಸಿಟಿವಿಟಿ ದರ 4.09ಕ್ಕೇರಿಕೆ

Team Udayavani, Aug 13, 2022, 1:23 PM IST

1covid

ಕಲಬುರಗಿ: 2020 ಮತ್ತು 2021ರಲ್ಲಿ ಕೊರೊನಾ ದಾಂಗುಡಿ ಇಟ್ಟಾಗ ಜಗತ್ತೇ ತಲ್ಲಣಗೊಂಡಿತ್ತು. ಆನಂತರ ಎಲ್ಲವೂ ಮುಗಿಯಿತು. ಇನ್ನೇನು ಸಾವಿನ ಆಟ ನಿಂತೇ ಹೋಯಿತು ಎಂದು ನಿಟ್ಟುಸಿರುವ ಬಿಟ್ಟ ಜನರಿಗೆ ಇಲ್ಲಿದೆ ಎಚ್ಚರಿಕೆ ಗಂಟೆ.

ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 141 ಪ್ರಕರಣಗಳು ದಾಖಲಾಗಿವೆ. ಸಮಾಧಾನದ ವಿಷಯ ಎಂದರೆ ಸಾವಿನ ಪ್ರಮಾಣ ಕುಸಿದಿದೆ. ಇದರಿಂದಾಗಿ ಜನರು ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಜನರಿಗೆ ಕೊರೊನಾ ಬಗ್ಗೆ ಭಯ ಮಾಯವಾಗಿವೆ. ಇದು ಸಮಾಧಾನಕರ ಸಂಗತಿ ಎಂದರೂ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ಎಚ್ಚರಿಸಿವೆ.

ಆಗಸ್ಟ್ನಲ್ಲಿ 4.09 ಪಾಸಿಟಿವಿಟಿ ರೇಟ್‌: ಕಳೆದ ಎರಡು ವರ್ಷಗಳ ದಾಖಲೆಗಳನ್ನು ಗಮನಿಸಿದರೆ ಪಾಸಿಟಿವಿಟಿ ಪ್ರಮಾಣ ಕಳೆದ ಏಳು ದಿನಗಳಿಂದ ಜಾಸ್ತಿಯಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಆ.1ರಿಂದ 7ರವರೆಗೆ ಒಟ್ಟು 3450 ಜನರ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಅದರಲ್ಲಿ 141 ಜನರಿಗೆ ಪಾಸಿಟಿವ್‌ ಇದೆ. ಅಂದರೆ, 4.09 ಪಾಸಿಟಿವಿಟಿ ರೇಟ್‌ ದಾಖಲಾಗಿದೆ. ಈ ಸಂದರ್ಭದಲ್ಲಿ ಸಾವಿನ ಪ್ರಮಾಣ ಶೇ.0.71ಕ್ಕೆ ಕುಸಿದಿದೆ. ಬಹುತೇಕ ಪ್ರಕರಣಗಳಲ್ಲಿ ಜನರು ಎಚ್ಚರಿಕೆಯಿಂದ ಮತ್ತು ಗಾಬರಿ ಇಲ್ಲದೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. ಈ ವೇಳೆ ಕಡ್ಡಾಯವಾಗಿ 14 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅಪಾಯಕಾರಿ ಜುಲೈ: ಅಚ್ಚರಿ ಎಂದರೆ 2021ರಲ್ಲೂ ಮತ್ತು 2022ರಲ್ಲೂ ಜುಲೈ ತಿಂಗಳು ಮಾತ್ರ ಪ್ರಕರಣಗಳ ಸಂಖ್ಯೆ ಹೆಚ್ಚು ಕಡಿಮೆ ಒಂದೇ ತೆರನಾಗಿವೆ. 2021ರಲ್ಲಿ 298 ಪ್ರಕರಣ, 2022 ಜುಲೈನಲ್ಲಿ 277 ಪ್ರಕರಣಗಳು ದಾಖಲಾಗಿವೆ. ಆದರೆ, 2021ರಲ್ಲಿ 2.01ರಷ್ಟಿದ್ದ ಸಾವಿನ ಪ್ರಮಾಣ 2022 ಜುಲೈನಲ್ಲಿ 0.72ಕ್ಕೆ ತಗ್ಗಿದೆ. ಇದಕ್ಕೆ ಕಾರಣ ವ್ಯಾಕ್ಸಿನೇಷನ್‌ ಎನ್ನುವುದು ಆರೋಗ್ಯ ಇಲಾಖೆಯ ವರದಿ. ಉಭಯ ವರ್ಷಗಳಲ್ಲಿ 69,566 ಮತ್ತು 11.603 ಜನರ ಗಂಟಲು ಮಾದರಿ ಸಂಗ್ರಹಿಸಲಾಗಿತ್ತು.

ತಗ್ಗಿದ ಸಾವಿನ ಪ್ರಮಾಣ

ಪಾಸಿಟಿವಿಟಿ ದರ (ಶೇ.4.09) ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಜನರಲ್ಲಿ ಭಯ ಉಂಟಾಗದೇ ಇರುವುದಕ್ಕೆ ಕಾರಣವಾಗಿದೆ. ಅಲ್ಲದೇ, ದೇಶದಲ್ಲಿ ಸಮರೋಪಾದಿಯಲ್ಲಿ ನಡೆದ ವ್ಯಾಕ್ಸಿನೇಷನ್‌ನಿಂದಾಗಿ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲ್ಲದಿದ್ದರೇ ಇವತ್ತು ಸಾವಿನ ಸಂಖ್ಯೆ ಹೆಚ್ಚಿರುತ್ತಿತ್ತು. ಇದೇ ವೇಳೆ ಜನರಿಗೆ ಕೊರೊನಾ ಏನು ಎನ್ನುವುದು ತಿಳಿವಳಿಕೆ ಬಂದಿದೆ. ಹೀಗಾಗಿ ಭಯದಿಂದ ದವಾಖಾನೆಗಳಿಗೆ ಬರುವ ಬದಲು ಶಾಂತವಾಗಿ ದವಾಖಾನೆಗಳಿಗೆ ಬಂದು ಚಿಕಿತ್ಸೆ ಪಡೆದು ಸೋಂಕು ಮುಕ್ತವಾಗಿ ಹೋಗುತ್ತಿದ್ದಾರೆ.

ಶೇ.104 ಗುರಿ ತಲುಪಿದ ವ್ಯಾಕ್ಸಿನ್

ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಶೇ.100ಕ್ಕೆ 104ರಷ್ಟು ವ್ಯಾಕ್ಸಿನ್‌ ಮಾಡಿ ದಾಖಲೆ ಮಾಡಲಾಗಿದೆ. ಕೆಲವರು ಕೋವಿಶಿಲ್ಡ್‌ ತೆಗೆದುಕೊಂಡರೆ, ಇನ್ನೂ ಕೆಲವರು ಕೋವ್ಯಾಕ್ಸಿನ್‌ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30,29,841ಜನರಿದ್ದಾರೆ. ಇವರಲ್ಲಿ 12-14 ವಯಸ್ಸಿನವರು 1,04,507 ಜನ ಇದ್ದಾರೆ. ಇವರಲ್ಲಿ 1,03,995 ಜನ 2ನೇ ಡೋಸ್‌ ಪಡೆದಿದ್ದಾರೆ. ಅಲ್ಲದೇ, ಒಟ್ಟಾರೆಯಾಗಿ 18ರಿಂದ ಮೇಲ್ಪಟ್ಟವರು 18,51,000 ಇವರಲ್ಲಿ 19,17,490 ಜನರಿಗೆ ಲಸಿಕೆ ಹಾಕಲಾಗಿದೆ. ಇದು ಶೇ.104ರಷ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ವಾದವನ್ನು ಸ್ಥಳೀಯ ಆರೋಗ್ಯ ಚಿಂತಕರು ಅಲ್ಲ ಗಳೆಯುತ್ತಾರೆ. ಬಹುತೇಕರು 2ನೇ ಡೋಸ್‌ ಪಡೆದಿಲ್ಲ. ದಾಖಲೆಗಳಲ್ಲಿ ಮಾತ್ರವೇ ಇದನ್ನು ತೋರಿಸಲಾಗಿದೆ. ವಾಸ್ತವದಲ್ಲಿ ಆಗಿಲ್ಲ. ಅಲ್ಲದೇ, ಕೋವಿಡ್‌ ನಲ್ಲಿ ಆರೋಗ್ಯ ಸಂಬಂಧ ಸಾಕಷ್ಟು ನಾಟಕಗಳನ್ನು ಸರ್ಕಾರ ಆಡಿದೆ. ಸಾವುಗಳನ್ನು ತಪ್ಪಿಸಬಹುದಿತ್ತು ಎನ್ನುವುದು ಅವರ ವಾದ.

ಸರ್ಕಾರದ ಗುರಿಯಂತೆ ನಾವು ಶೇ.104ರಷ್ಟು ಲಸಿಕಾ ಕರಣ ಮಾಡಿದ್ದರಿಂದ ಇವತ್ತು ಕೋವಿಡ್‌ ದಾಂಗುಡಿ ಅಷ್ಟಾಗಿ ಇಲ್ಲ. ಯಶಸ್ವಿಯಾಗಿ ನಾವು ವ್ಯಾಕ್ಸಿನೇಷನ್‌ ಮುಗಿಸಿದ್ದೇವೆ. ಇದರಿಂದ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳ ಪಾತ್ರ ಮುಖ್ಯ. ಆಗಸ್ಟ್‌ನಲ್ಲಿ ತುಸು ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವು ಇಲ್ಲ, ಐಸೋಲೇಶನ್‌ ಮಾಡಿ ಚಿಕಿತ್ಸೆ ನೀಡಿ ಗುಣ ಮಾಡಿ ಮನೆಗೆ ಕಳಿಸಿ ಕೊಡಲಾಗುತ್ತಿದೆ. ಡಾ| ರಾಜಶೇಖರ ಮಾಲಿ, ಜಿಲ್ಲಾ ಆರೋಗ್ಯಾಧಿಕಾರಿ

ಸರ್ಕಾರದ ದಾಖಲೆಗಳು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತವೆ. 2021ರಲ್ಲಿ ಮೊದಲ ಡೋಸ್‌ ಲಸಿಕೆ ಹಾಕುವಾಗ ಜನರು ತುಂಬಾ ಭಯದಲ್ಲಿದ್ದರು. ಆಗ 12ರಿಂದ 14 ವರ್ಷದ ಮಕ್ಕಳಿಗೆ ಹಾಕಿಲ್ಲ. ಇನ್ನೂ 2022ರಲ್ಲಿ ಎರಡನೇ ಡೋಸ್‌ ತೆಗೆದುಕೊಳ್ಳದೇ ಇದ್ದವರಿಗೂ “ನಿಮ್ಮ ಎರಡನೇ ಡೋಸ್‌ ಮುಗಿದಿದೆ’ ಎಂದು ಮೋದಿ ಹೆಸರಲ್ಲಿ ಮೆಸೇಜ್‌ ಬಂದಿದ್ದೆ ಸಾಧನೆ ಎನ್ನುವಂತಾಗಿದೆ. ಇದನ್ನು ಬಿಟ್ಟು ಉಳಿದದ್ದು ದಾಖಲೆಗಳಲ್ಲಿ ಮಾತ್ರ ಡೋಸ್‌ ನೀಡಲಾಗಿದೆ. ವಿಜಯ ಜಾಧವ, ಆರೋಗ್ಯ ಕಾರ್ಯಕರ್ತ, ಕೆಆರ್ಎಸ್ಪಾರ್ಟಿ ಅಧ್ಯಕ್ಷ

-ಸೂರ್ಯಕಾಂತ್ಎಂ. ಜಮಾದಾರ

ಟಾಪ್ ನ್ಯೂಸ್

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

ಚಂದ್ರಂಪಳ್ಳಿ ಅಭಿವೃದ್ಧಿಗೆ 7.50 ಕೋಟಿ ರೂ.

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.