ಕಲಬುರಗಿ: ಹತ್ತು ತಜ್ಞ ವೈದ್ಯರಿಂದ ಸಿಪಿಐ ಶ್ರೀಮಂತ ಇಲ್ಲಾಳಗೆ ಚಿಕಿತ್ಸೆ

ದಾಳಿಗೊಳಗಾಗಿದ್ದ ಸಿಪಿಐ ಕಣ್ಣು ತೆರೆಯುವ ಪ್ರಯತ್ನ, ಏರ್ ಲಿಫ್ಟ್ ಮಾಡಿದರೆ ತೊಂದರೆ?

Team Udayavani, Sep 25, 2022, 5:12 PM IST

1-addasdsad

ಕಲಬುರಗಿ:   ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗ ಉಮ್ಮರ್ಗಾದಲ್ಲಿ ಶುಕ್ರವಾರ ರಾತ್ರಿ ಗಾಂಜಾ ದಂಧೆಕೋರರಿಂದ ಭೀಕರವಾಗಿ ಹಲ್ಲೆಗೊಳಗಾಗಿರುವ ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಅವರಿಗೆ  ಹತ್ತು ತಜ್ಞ ವೈದ್ಯರು ತೀವ್ರ ನಿಗಾ ವಹಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ.

ಆಸ್ಪತ್ತೆಗೆ ದಾಖಲು ಮಾಡಿದ್ದಾಗ ಸಿಪಿಐ ಅವರ ಪಲ್ಸ್ ಹೆಚ್ಚಾಗಿತ್ತು, ಬಿಪಿ ಕಡಿಮೆ ಇತ್ತು. ಎದೆಯಲ್ಲಿ 8 ರಿಬ್ಸ್ ಗಳು ಮುರಿತಕ್ಕೊಳಗಾಗಿವೆ.‌ ಜೀವ ಉಳಿಸುವ ಔಷಧಿಗಳನ್ನು ಕೊಡಲಾಗಿದೆ‌. ಸಿಪಿಐ ಇಲ್ಲಾಳ ಚೇತರಿಸಿಕೊಳ್ಳುತ್ತಿದ್ದಾರೆ. ಕಿಡ್ನಿ ಫಂಕ್ಷನ್ ಸಹಜ ಸ್ಥಿತಿಗೆ ಬಂದಿದೆ. ನಿನ್ನೆಗಿಂತ ಇವತ್ತು ಚೇತರಿಸಿಕೊಂಡಿದ್ದಾರೆ.‌ ಪ್ರಮುಖವಾಗಿ ಒಳಪೆಟ್ಟಿನಿಂದ ಆಗ್ತಿದ್ದ ರಕ್ತಸ್ರಾವ ಕಡಿಮೆ ಆಗಿದೆ.ಆಕ್ಸಿಜನ್ ಅವಶ್ಯಕತೆ ಸಹ ಕಡಿಮೆ ಆಗಿದೆ. ಕಣ್ಣು ತೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲುಬು ಮುರಿತವಾಗಿದ್ದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.‌ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಬ್ಲಡ್ ಕ್ಲಾಟ್ ಆಗಿದೆ.ಒಟ್ಟಾರೆ ನಿನ್ನೆಗಿಂದ ಸಿಪಿಐ ಶ್ರೀಮಂತ ಇಲ್ಲಾಳ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸಧ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ ಸಿದ್ದಾರೆಡ್ಡಿ, ಡಾ. ಸುದರ್ಶನ ಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಎರಡು ಕಾಡಾನೆ ಸಾವು: ಕರೆಂಟ್ ಕೊಟ್ಟಾತ ಅಧಿಕಾರಿಗಳ ವಶಕ್ಕೆ

ಈಗ ಏರ್ ಲಿಫ್ಟ್ ಮಾಡಿದರೆ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಇದೇ ಸಂದರ್ಭ ದಲ್ಲಿ ತಿಳಿಸಿದರು.

ಏರ್ ಲಿಫ್ಟ್ ಮಾಡಲು ಕುಟುಂಬಸ್ಥರ ಒಲವು
ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಮಂತ್ ಇಲ್ಲಾಳರನ್ನ ಏರ್ ಲಿಫ್ಟ್ ಮಾಡಲು ಕುಟುಂಬಸ್ಥರು ಒಲುವು ಹೊಂದಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲು ಇಲ್ಲಾಳ ಕುಟುಂಬದವರು ಇಚ್ಚಿಸಿದ್ದಾರೆ.

ಕಲಬುರಗಿ ಆಸ್ಪತ್ರೆ ವೈದ್ಯರು , ಮಣಿಪಾಲ್ ಆಸ್ಪತ್ರೆ ವೈದ್ಯರು , ಏರ್ ಅಂಬುಲೆನ್ಸ್ ವೈದ್ಯರು ಪೊಲೀಸರು ಚರ್ಚೆ ನಡೆಸಿದ್ದಾರಲ್ಲದೇ ಮಣಿಪಾಲ್ ಆಸ್ಪತ್ರೆಯವರು ಎಲ್ಲಾ ರೀತಿಗ ಸಿದ್ದತೆ ಮಾಡಿಕೊಂಡಿದ್ದಾರೆ. ಏರ್ ಲಿಫ್ಟ್ ಮಾಡುವ ಕುರಿತು ಎಲ್ಲಾ ರೀತಿಯಲ್ಲಿ ತಯಾರಿ ನಡೆಯುತ್ತಿದೆ.‌ ಒಟ್ಟಾರೆ ಕುಟುಂಬಸ್ಥರ ಅಂತಿಮ‌ ನಿರ್ಧಾರದ ಬಳಿಕ ಏರ್ ಲಿಫ್ಟ್ ಮಾಡಲು ಉದ್ದೇಶಿಸಲಾಗಿದೆ.‌

ಸಿಪಿಐ ಮೇಲಿನಹಲ್ಲೆ ಪ್ರಕರಣ ಸಂಬಂಧ ಬೀದರ್ ನ ಮಂಠಾಳ ಪೊಲೀಸರು 11 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.

ಆಸ್ಪತ್ರೆಗೆ ಭೇಟಿ
ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುನೈಟೆಡ್ ಆಸ್ಪತ್ರೆಗೆ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೇವೂರ, ಸದ್ಯ ಇಲ್ಲಾಳ್‌ರ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಚೇತರಿಕೆ ಕಂಡಿದೆ. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಲಾಗಿದೆ. ಸರಕಾರ ನಿಮ್ಮೊಂದಿದೆ ಇದೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದೇವೆ. ಯಾವುದೇ ರೀತಿಯ ಚಿಕಿತ್ಸೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ. ಆರೋಗ್ಯ ಸ್ಥಿತಿಗತಿ ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಲಾಗಿದೆ. ಸಧ್ಯ ಇಲ್ಲೆ ಚಿಕಿತ್ಸೆ ಮುಂದುವರಿಸಲು ಕುಟುಂಬಸ್ಥರು ಸಮ್ಮತಿಸಿದ್ದಾರೆ. ಅಗತ್ಯ ಬಿದ್ದರೆ ಸಿಪಿಐ ಇಲ್ಲಾಳ್‌ರನ್ನ ಏರ್‌ಲಿಫ್ಟ್ ಮಾಡಲಾಗುವುದು ಎಂದರು.

ಟಾಪ್ ನ್ಯೂಸ್

ಸಿರಿಧಾನ್ಯಕ್ಕೆ ಈಗ ಅಂತಾರಾಷ್ಟ್ರೀಯ ಮಹತ್ವ

ಸಿರಿಧಾನ್ಯಕ್ಕೆ ಈಗ ಅಂತಾರಾಷ್ಟ್ರೀಯ ಮಹತ್ವ

ನಿರುದ್ಯೋಗ ದರದಲ್ಲಿ ಹೆಚ್ಚಳ: ಅವಗಣನೆ ಸಲ್ಲದು

ನಿರುದ್ಯೋಗ ದರದಲ್ಲಿ ಹೆಚ್ಚಳ: ಅವಗಣನೆ ಸಲ್ಲದು

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಸ್ಮಾರ್ಟ್‌ ನಗರಕ್ಕೆ ಕೇಬಲ್‌ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು

ಸ್ಮಾರ್ಟ್‌ ನಗರಕ್ಕೆ ಕೇಬಲ್‌ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು

ನೆಲಗಡಲೆ ಬಿತ್ತನೆಗೆ ಅಡ್ಡಿಯಾದ ಅಕಾಲಿಕ ಮಳೆ: ಕೆಲವೆಡೆ ಬಿತ್ತನೆ ಆರಂಭ

ನೆಲಗಡಲೆ ಬಿತ್ತನೆಗೆ ಅಡ್ಡಿಯಾದ ಅಕಾಲಿಕ ಮಳೆ: ಕೆಲವೆಡೆ ಬಿತ್ತನೆ ಆರಂಭ

ಮಣಿಪಾಲ: ಅಂಗನವಾಡಿ ಕೇಂದ್ರದಲ್ಲೇ ಎಲ್‌ಕೆಜಿ, ಯುಕೆಜಿ ತೆರೆಯಲು ಆಗ್ರಹ

ಮಣಿಪಾಲ: ಅಂಗನವಾಡಿ ಕೇಂದ್ರದಲ್ಲೇ ಎಲ್‌ಕೆಜಿ, ಯುಕೆಜಿ ತೆರೆಯಲು ಆಗ್ರಹ

ನಗರ, ಗ್ರಾಮಾಂತರ ಆಟೋ ಯಾನ ದರ ಪರಿಷ್ಕರಣೆ: ಕನಿಷ್ಠ ದರ 35 ರೂ.; ಬಳಿಕ ಕಿ.ಮೀ. 20 ರೂ.

ಮಂಗಳೂರು ನಗರ, ಗ್ರಾಮಾಂತರ ಆಟೋ ಯಾನ ದರ ಪರಿಷ್ಕರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

tdy-19

ಸಿದ್ದು ಮಾತಿಗೆ ಸಿ.ಟಿ.ರವಿ ಆಕ್ರೋಶ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ: ಎಚ್‌.ಡಿ.ಕುಮಾರಸ್ವಾಮಿ

mutalik

ಪ್ರಮೋದ್ ಮತಾಲಿಕ್ ಗೆ ಜೀವ ಬೆದರಿಕೆ ಸಂದೇಶ: ದೂರು ದಾಖಲು

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಸಿರಿಧಾನ್ಯಕ್ಕೆ ಈಗ ಅಂತಾರಾಷ್ಟ್ರೀಯ ಮಹತ್ವ

ಸಿರಿಧಾನ್ಯಕ್ಕೆ ಈಗ ಅಂತಾರಾಷ್ಟ್ರೀಯ ಮಹತ್ವ

ಮೊರೊಕ್ಕೊ ಐತಿಹಾಸಿಕ ಸಾಧನೆ: ನಾಕೌಟ್‌ಗೆ ಜಿಗಿತ

ಮೊರೊಕ್ಕೊ ಐತಿಹಾಸಿಕ ಸಾಧನೆ: ನಾಕೌಟ್‌ಗೆ ಜಿಗಿತ

ನಿರುದ್ಯೋಗ ದರದಲ್ಲಿ ಹೆಚ್ಚಳ: ಅವಗಣನೆ ಸಲ್ಲದು

ನಿರುದ್ಯೋಗ ದರದಲ್ಲಿ ಹೆಚ್ಚಳ: ಅವಗಣನೆ ಸಲ್ಲದು

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಸ್ಮಾರ್ಟ್‌ ನಗರಕ್ಕೆ ಕೇಬಲ್‌ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು

ಸ್ಮಾರ್ಟ್‌ ನಗರಕ್ಕೆ ಕೇಬಲ್‌ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.