ಎಫ್‌ಐಆರ್‌ ದಾಖಲಿಸದ್ದಕ್ಕೆ ಇಲಾಖೆ ತನಿಖೆ ನಡೆಸಿ


Team Udayavani, Oct 18, 2021, 11:27 AM IST

7

ಕಲಬುರಗಿ: ಸೇಡಂ ತಾಲೂಕಿನಲ್ಲಿ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಯುವಕ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸದೇ ಮುಧೋಳ ಪೊಲೀಸ್‌ ಇನ್ಸ್‌ಪೆಕ್ಟರ್‌ ನಿರ್ಲಕ್ಷ್ಯಯವಹಿಸಿರುವ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ| ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಇನ್ಸ್‌ಪೆಕ್ಟರ್‌ ನಿರ್ಲಕ್ಷ್ಯದಿಂದಲೇ ರಾಘವೇಂದ್ರ ಎನ್ನುವ ಯುವಕ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಈ ಯುವಕ ತನ್ನ ಮೇಲೆ ಹಲ್ಲೆ ನಡೆಯುವ ಭಯದಿಂದ ಪೊಲೀಸ್‌ ಠಾಣೆಗೆ ಹೋದರೂ ದೂರು ದಾಖಲಿಸಿಕೊಳ್ಳದೇ ಪೊಲೀಸರು ಯುವಕನನ್ನೇ ಬೆದರಿಸಿ ಕಳುಹಿಸಿದ್ದಾರೆ. ನಂತರ ಯುವಕ ಬಸ್‌ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಗ್ರಾಮದ ಸಂದಪ್ಪ ಮತ್ತು ಆತನ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಯುವಕ ಠಾಣೆಗೆ ಬಂದಾಗಲೇ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಕರೆಸಿ, ವಿಚಾರಣೆ ನಡೆದಿದ್ದರೆ ಈ ಹಲ್ಲೆ ಘಟನೆ ನಡೆಯುತ್ತಿರಲಿಲ್ಲ ಎಂದರು.

ಪೊಲೀಸರ ಅಲಕ್ಷ್ಯದಿಂದಲೇ ಅಮಾಯಕನೊಬ್ಬ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರುವಂತೆ ಆಗಿದೆ. ಅಲ್ಲದೇ, ಈ ಯುವಕನಿಗೆ ಬ್ರೇನ್‌ ಸರ್ಜರಿ ಸಹ ಆಗಿದೆ. ಈ ಘಟನೆ ಬಗ್ಗೆ ನಾನು ಡಿಎಸ್‌ಪಿ, ಐಜಿಪಿ ಅವರ ಗಮನ ಸೆಳೆದಾಗ ಪೊಲೀಸ್‌ ಇನ್ಸ್‌ಪೆಕ್ಟರ್‌ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ. ಅಲ್ಲದೇ, ಸುಮಾರು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೊದಲೇ ಎಫ್‌ಐಆರ್‌ ದಾಖಲಿಸಿಕೊಳ್ಳದಿರುವ ಬಗ್ಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ಇಲಾಖೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಯುವಕನ ಮೇಲೆ ಹಲ್ಲೆ ಘಟನೆ, ಕರ್ತವ್ಯ ನಿರ್ಲಲಕ್ಷ್ಯದಡಿ ಅಮಾನತಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ಪರವಾಗಿ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ಏಳು ಗಂಟೆ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡು ಸಂಗತಿ ಎಂದು ಶರಣಪ್ರಕಾಶ ಕಿಡಿಕಾರಿದರು.

ಇದನ್ನೂ ಓದಿ: ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಹಲ್ಲೆ ಆರೋಪಿಗಳನ್ನು ರಕ್ಷಣೆ ಮಾಡಲು ಶಾಸಕರು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ಗೂಂಡಾಗಿರಿ ನಡೆಯಲ್ಲ. ಇನ್ಸ್‌ಪೆಕ್ಟರ್‌ರನ್ನು ಅಮಾನತು ಮಾಡಿದ್ದು ನಾವಲ್ಲ. ಪೊಲೀಸ್‌ ಇಲಾಖೆಯೇ ಘಟನೆಗೆ ಕಾರಣರಾದವರ ಸತ್ಯಾಸತ್ಯತೆ ಅರಿತು ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ತಿಳಿದು ಅಮಾನತು ಮಾಡಿದೆ. ಇದರ ಪರಿಜ್ಞಾನವೂ ಇಲ್ಲದೇ ಸ್ವತಃ ಶಾಸಕರೇ ಪ್ರತಿಭಟನೆ ಮಾಡಿದ್ದು ಯಾರ ವಿರುದ್ಧ ಎನ್ನುವುದನ್ನಾದರೂ ಹೇಳಬೇಕು. ರಸ್ತೆ ಸಂಚಾರ ಬಂದ್‌ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೊಡ, ಇಮ್ರಾನ್‌ ಖಾನ್‌ ಇದ್ದರು.

ಸರ್ವೇ ಮಾಡಿ-ಸೌಲಭ್ಯ ಒದಗಿಸಿ ಡಾ| ಶರಣಪ್ರಕಾಶ

ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಭೂಕಂಪದ ಬಗ್ಗೆ ಸರಿಯಾದ ಸರ್ವೇ ಮಾಡಬೇಕು. ಗಡಿಕೇಶ್ವಾರ ಗ್ರಾಮದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯ ಸುಮಾರು 40 ಹಳ್ಳಿಗಳನ್ನು ಸರ್ವೇ ಮಾಡಿ ಸೌಲಭ್ಯ ಒದಗಿಸಬೇಕೆಂದು ಡಾ| ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು. ರಾಜ್ಯ ಸರ್ಕಾರ, ಜಿಲ್ಲಾಡಳಿತದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಾಗಲೇ ಗಡಿಕೇಶ್ವಾರ ಗ್ರಾಮದ ಶೇ.70ರಷ್ಟು ಜನರು ಗ್ರಾಮ ತೊರೆದಿದ್ದಾರೆ. ಇನ್ನೂ ಕೆಲವರು ಗ್ರಾಮ ಬಿಟ್ಟು ಗುಳೆ ಹೋಗಿದ್ದಾರೆ. ಭೂಕಂಪನ ಆಗುತ್ತಿದ್ದಂತೆ ಜನರಿಗೆ ಧೈರ್ಯ ತುಂಬಿ ಸೌಲಭ್ಯ ಒದಗಿಸಿದ್ದರೆ ಜನರು ಗ್ರಾಮ ತೊರೆಯುತ್ತಿರಲಿಲ್ಲ ಎಂದು ಹೇಳಿದರು. ಈಗ ಜಿಲ್ಲಾಡಳಿತ ಕೇವಲ ಗಡಿಕೇಶ್ವಾರ, ಹೊಸಳ್ಳಿ, ಕೊರವಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಾತ್ರ ಟಿನ್‌ ಶೆಡ್‌ಗಳನ್ನು ಹಾಕಿ ಊಟದ ವ್ಯವಸ್ಥೆ ಮಾಡಿದೆ. ಆದರೆ, ಗಡಿಕೇಶ್ವಾರ ಗ್ರಾಮದ ಸುತ್ತ-ಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಬೇಕು ಎಂದರು.

ಟಾಪ್ ನ್ಯೂಸ್

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

Untitled-1

20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ

ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ

ನನ್ನನ್ನು ಸೋಲಿಸಿದವರಿಗೆ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ನನ್ನನ್ನು ಸೋಲಿಸಿದವರ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ಬಿಜೆಪಿ, ಜೆಡಿಎಸ್ ವಿರುದ್ದ ಸಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ

ಎಡಿಯೂರಿನಲ್ಲಿ ಸಿದ್ದು ಚುನಾವಣಾ ಪ್ರಚಾರ ಸಭೆ : ಬಿಜೆಪಿ, ಜೆಡಿಎಸ್ ವಿರುದ್ದ ವಾಗ್ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

9bridge

ದೇಗಲಮಡಿ ಸೇತುವೆ ರಕ್ಷಣಾಗೋಡೆ ನಿರ್ಮಿಸಿ

7knowledge

ಭಾಷಾ ಜ್ಞಾನ ಅರಿತರೆ ಹೆಮ್ಮೆ

6protest

ಕಳಪೆ ಸಿಸಿ ರಸ್ತೆ ನಿರ್ಮಾಣ: ಸ್ಥಳೀಯರಿಂದ ಪ್ರತಿಭಟನೆ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಪೊದೆಗೆ ನವಜಾತ ಶಿಶು ಎಸೆತ: ಜೋಡಿ ಬಂಧನ

ಪೊದೆಗೆ ನವಜಾತ ಶಿಶು ಎಸೆತ: ಜೋಡಿ ಬಂಧನ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

Untitled-1

20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.