ಎಲ್ಲೆಲ್ಲೂ ಜಾಗತೀಕರಣದ ಪ್ರಭಾವ: ವೀರೇಂದ್ರ ಕುಮಾರ


Team Udayavani, Oct 28, 2021, 12:12 PM IST

14globaization

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ “ತರಕಾರಿ ವ್ಯಾಪಾರಸ್ಥರ ಮೇಲೆ ಜಾಗತೀಕರಣದ ಪ್ರಭಾವ’ ವಿಷಯ ಕುರಿತು ಪಿಎಚ್‌.ಡಿ. ಸಂಶೋಧನಾರ್ಥಿ ವೀರೇಂದ್ರ ಕುಮಾರ ಬುಧವಾರ ಪ್ರಬಂಧ ಮಂಡಿಸಿದರು.

ಸಾಂಪ್ರದಾಯಿಕ ಗ್ರಾಮೀಣ ಸಂತೆಮಾಳ ಮಾಯವಾಗಿ ಆಧುನಿಕ ಖರೀದಿ ಪ್ರಕ್ರಿಯೆಯಿಂದ ರೈ‌ತರು ಅನ್ಯಾಯ ಅನುಭವಿಸುವಂತಾಗಿದೆ. ಇದರಿಂದ ಸರಕು ವ್ಯಾಪಾರಿ ಹಾಗೂ ಚಿಲ್ಲರೆ ವ್ಯಾಪಾರಿಗಳ ನಡುವೆ ಬಹಳಷ್ಟು ವ್ಯಾತ್ಯಾಸ ಕಂಡು ಬಂದು ಆಧುನೀಕರಣದ ಪ್ರಕ್ರಿಯೆಯಲ್ಲಿ ತರಕಾರಿ ವ್ಯಾಪಾರಸ್ಥರು ತೊಂದರೆ ಅನುಭವಿಸಿದಂತಾಗಿದೆ ಎಂದರು.

ನಗದು ವಹಿವಾಟು ಕಣ್ಮರೆಯಾಗಿ ಡಿಜಿಟಲೀಕರಣದ ಅಂಶಗಳಾದ ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂಗಳಿಂದ ತಂತ್ರಜ್ಞಾನ ರಾರಾಜಿಸುತ್ತಿದೆ. ಹಾಗೆಯೇ ಎತ್ತು ಬಂಡಿಗಳಿಂದ ರವಾನಿಸುತ್ತಿದ್ದ ಸರಕು ಇಂದು ಬೈಕ್‌, ಆಟೋ, ಟ್ಯಾಕ್ಸಿ ಮುಂತಾದ ಆಧುನಿಕ ವಾಹನಗಳಿಂದ ಮನೆ ಬಾಗಿಲಿಗೆ ತಂದು ನಿಲ್ಲಿಸಿ, ವಿಶ್ವವೇ ಒಂದು ಮನೆಯನ್ನಾಗಿಸಿದೆ. ಜಾಗತೀಕರಣದಿಂದ ವಿವಿಧ ರಾಜ್ಯ ರಾಷ್ಟ್ರಗಳನ್ನು ಒಗ್ಗೂಡಿಸಿ ವಿಮಾನ ರೈಲಿನ ಮೂಲಕ ತರಕಾರಿ ವಹಿವಾಟು ನಡೆಯುತ್ತಿದ್ದು, ಈ ಸೌಲಭ್ಯವು ಗ್ರಾಮೀಣ ಭಾಗದ ರೈತರಿಗೆ ಮರೀಚಿಕೆಯಾಗಿದೆ. ಅಲ್ಲದೇ ಇ ಟೆಂಡರ್‌ನ ಮೂಲಕ ಜಾಗತೀಕರಣವು ತನ್ನ ಪ್ರಭಾವವನ್ನು ಬೀರಿ ನೇರವಾಗಿ ರೈತರ ಹೊಲಗದ್ದೆಗಳಿಗೆ ಹೋಗಿ ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಿದೆ ಎಂದರು.

ಇದನ್ನೂ ಓದಿ: ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಸಿ.ಟಿ.ಗುರುಪ್ರಸಾದ್‌ ಮಾತನಾಡಿ, 1990ರ ಅವಧಿಯಲ್ಲಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಿದ್ದು ನಕಾರಾತ್ಮಕ ಹಾಗೂ ಸಕಾರಾತ್ಮಕ ಅಂಶಗಳ ಮೂಲಕ ಪ್ರಭಾವ ಬೀರಿದೆ. ತಂತ್ರಜ್ಞಾನದ ಲಭ್ಯತೆ ದಕ್ಷತೆ ಗುಣಗಳು ಸಕಾರಾತ್ಮಕವಾಗಿ ಕಂಡು ಬಂದರೆ, ಹಣದುಬ್ಬರ ಪ್ರಮಾಣ, ವಿವಿಧ ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ನೇರ ಪರಿಣಾಮವನ್ನು ಬೀರಿ ನಕಾರಾತ್ಮಕ ಗುಣಗಳೆನಿಸಿವೆ. ಅಲ್ಲದೇ ಹಣಕಾಸು ನೀತಿ ಬಡ್ಡಿದರವು ಜಾಗತೀಕರಣದ ಪ್ರಭಾವಕ್ಕೊಳಗಾದ ಅಂಶಗಳೂ ಆಗಿವೆ ಎಂದು ಹೇಳಿದರು.

ಡಾ| ಸಿ.ಟಿ. ಗುರುಪ್ರಸಾದ್‌ ಮುಖ್ಯಸ್ಥರು ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾರ್ಥಿ ಬಸವರಾಜ ಪೂಜಾರ ನಿರೂಪಿಸಿದರು. ಸಂಶೋಧನಾರ್ಥಿ ಕೋಮಲಾ. ಬಿ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಯಮನೂರಪ್ಪ ಸ್ವಾಗತಿಸಿದರು. ಏಕಾಂತಪ್ಪ. ಬಿ ವಂದಿಸಿದರು. ನಾಗೇಶ ಪೂಜಾರ ಹಾಗೂ ಮಂಜುನಾಥ ಎಸ್‌ .ಪಿ. ವರದಿ ಮಾಡಿದರು.

ಟಾಪ್ ನ್ಯೂಸ್

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಡಿಕೆಶಿ, ಸಿದ್ದರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

udayavani youtube

ಉಡುಪಿ-ಕಾಸರಗೋಡು 400KV ವಿದ್ಯುತ್ ಮಾರ್ಗ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

udayavani youtube

Side effects ಇಲ್ಲ ಎಂದು ಖುದ್ದು DC ಬರೆದುಕೊಟ್ಟರು !

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

ಹೊಸ ಸೇರ್ಪಡೆ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಸ್ಥಳೀಯ ಸಂಸ್ಥೆ ಶಕ್ತಿ ಕುಂದಿಸುತ್ತಿದೆ ಬಿಜೆಪಿ ಸರ್ಕಾರ: ಅನ್ಸಾರಿ

ಸ್ಥಳೀಯ ಸಂಸ್ಥೆ ಶಕ್ತಿ ಕುಂದಿಸುತ್ತಿದೆ ಬಿಜೆಪಿ ಸರ್ಕಾರ: ಅನ್ಸಾರಿ

ರೂಪಾಂತರಿ ಆತಂಕ; ಮೈಮರೆತ ಜನತೆ

ರೂಪಾಂತರಿ ಆತಂಕ; ಮೈಮರೆತ ಜನತೆ

ಆರೋಗ್ಯ ಕಾಳಜಿಗೆ ಪೊಲೀಸರಿಗೆ ಡಿಸಿ ಸಲಹೆ

ಆರೋಗ್ಯ ಕಾಳಜಿಗೆ ಪೊಲೀಸರಿಗೆ ಡಿಸಿ ಸಲಹೆ

ಆಹಾರದ ಕೊರತೆ ಇಲ್ಲ

ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.