Udayavni Special

ವಿಷನ್‌ 2050: ಶಿಕ್ಷಣ-ಕೃಷಿ ಸಮಿತಿ ಅಸ್ತಿತ್ವಕ್ಕೆ


Team Udayavani, Jun 15, 2021, 8:01 PM IST

d್ಗಹಜಹಗ್

ಕಲಬುರಗಿ: ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ “ಕಲಬುರಗಿ ವಿಷನ್‌-2050′ ಅನುಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಸೋಮವಾರ ಜಿಲ್ಲಾಧಿ ಕಾರಿ, ಹಿರಿಯ ಅಧಿಕಾರಿಗಳು, ತಜ್ಞರು ಮತ್ತು ನಿವೃತ್ತ ಅ ಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದರು. ಬೆಂಗಳೂರಿನಿಂದ ಜೂಮ್‌ ವಿಡಿಯೋ ಕಾನ್ಫ ರೆನ್ಸ್‌ ಮೂಲಕ ನಡೆದ ಸಭೆ ನಡೆಸಿದ ಸಚಿವರು, ಮುಂದಿನ 30 ವರ್ಷಗಳಲ್ಲಿ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ವಿಷನ್‌ -2050′ ಸಹಕಾರಿಯಾಗಲಿದೆ. ಈಗಾಗಲೇ ಶಿಕ್ಷಣ, ಕೃಷಿ ಸೇರಿದಂತೆ ಇತರ ಸಮಿತಿ ಅಸ್ತಿತ್ವಕ್ಕೆ ಬಂದಿವೆ.

ದೀರ್ಘಾವ  ಧಿಯ ಅಭಿವೃದ್ಧಿ ಯೋಜನೆ ಅಗತ್ಯವಿಲ್ಲದ ಕ್ಷೇತ್ರಗಳಿಗೆ 10 ವರ್ಷಗಳ ಸಮಯವನ್ನು ನೀಡಲಾಗುವುದು ಎಂದರು. ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ನಿವೃತ್ತ ಹೆಚ್ಚುವರಿ ಮುಖ್ಯ ಕಾಯದರ್ಶಿ ವಿ.ಬಾಲಸುಬ್ರಹ್ಮಣಿಯನ್‌ ಜಿಲ್ಲೆಯ ಪ್ರಗತಿ ಸಂಬಂಧ ಸಲಹೆಗಳನ್ನು ನೀಡಿದರು. ಯಾವುದೇ ಜಿಲ್ಲೆ ಅಥವಾ ರಾಜ್ಯದ ಅಭಿವೃದ್ಧಿಗೆ ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕಾರಣ. ಆದ್ದರಿಂದ ಈ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಜಿಲ್ಲೆಯ ವಿಭಜನೆಯ ನಂತರ ಕಲಬುರಗಿ ನೀರಾವರಿ ಪ್ರಮಾಣ ಶೇ.11ಕ್ಕೆ ಇಳಿದಿದೆ.

ಇದು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಒಂದು ವರ್ಷದಲ್ಲಿ ಜಿಲ್ಲೆಗೆ 30 ಇಂಚು ಮಳೆಯಾಗುವುದರಿಂದ ಅಂತರ್ಜಲ ಸಂರಕ್ಷಣೆ ಕ್ರಮ ವಹಿಸಬೇಕಿದೆ ಎಂದರು. ಜಿಲ್ಲೆಯು ಶ್ರೇಯಾಂಕದಲ್ಲಿ 45 ವರ್ಷಗಳ ಹಿಂದೆ ಯಾವ ಸ್ಥಾನದಲ್ಲಿತ್ತೋ, ಈಗಲೂ ಅದೇ ಸ್ಥಾನದಲ್ಲಿರುವುದು ಅತ್ಯಂತ ನೋವಿನ ಸಂಗತಿ. ಆಡಳಿತ ನಡೆಸಿದ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಜಾರಿಮಾಡದೆ ಕೇವಲ ಗುತ್ತಿಗೆದಾರರ ಹಿತಕಾಪಾಡುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿವೆ.

ಹೀಗಾಗಿ ಈ ಪ್ರದೇಶ ಹಿಂದುಳಿಯಲು ಪ್ರಮುಖ ಕಾರಣವಾಗಿದೆ ಎಂದು ಬಾಲಸುಬ್ರಹ್ಮಣಿಯನ್‌ ಅಸಮಾಧಾನ ಹೊರಹಾಕಿದರು. ರಾಜ್ಯ ಸರ್ಕಾರದ ಯೋಜನಾ ವಿಭಾಗದ ಮುಖ್ಯಸ್ಥರಾದ ಐಎಎಸ್‌ ಅಧಿ ಕಾರಿ ಶಾಲಿನಿ ರಜನೀಶ್‌, ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲ್ಲ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ವಿದ್ಯಾರ್ಥಿಗಳು ಒಗ್ಗಿಕೊಳ್ಳಬೇಕು. ಇದರಿಂದ ನಾವು ಕಾರ್ಯಪಡೆಗಳನ್ನು ಸಿದ್ಧಪಡಿಸಬಹುದು. ಇದು ಆಧುನಿಕ ಪ್ರಪಂಚದ ಸವಾಲುಗಳನ್ನು ಎದುರಿಸಲು ಮತ್ತು ಸಾಮಾಜಿಕ ಮೂಲಸೌಕರ್ಯ ಸುಧಾರಿಸಲು ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ° ಮಾತನಾಡಿ, ವಿಷನ್‌-2050 ಕುರಿತಂತೆ ಈಗಾಗಲೇ ಹಿರಿಯ ಅ ಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆಗಳನ್ನು ನಡೆಸಲಾಗಿದೆ. ವಲಯವಾರು ಸಮಿತಿಗಳು ಮತ್ತು ಉಪಸಮಿತಿಗಳನ್ನೂ ರಚಿಸಲಾಗಿದೆ. ಅಲ್ಪಾವ ಧಿ, ಮಧ್ಯಮ ಅವ ಧಿ ಮತ್ತು ದೀರ್ಘ‌ಕಾಲೀನ ಗುರಿಗಳತ್ತ ಕೆಲಸ ಮಾಡುವ ಬಗ್ಗೆ ಅಧಿ ಕಾರಿಗಳಿಗೆ ತಿಳಿಸಲಾಗಿದೆ ಎಂದು ವಿವರಿಸಿದರು. ಜನಪ್ರತಿನಿ ಧಿಗಳೊಂದಿಗೆ ಸಂವಾದ: “ಕಲಬುರಗಿ ವಿಷನ್‌-2050′ ಕುರಿತ ಸಭೆ ನಂತರ ಸಚಿವ ಮುರುಗೇಶ ನಿರಾಣಿ, ಜಿಲ್ಲೆಯ ಜನಪ್ರತಿನಿ  ಧಿಗಳೊಂದಿಗೂ ಸಂವಾದ ನಡೆಸಿದರು.

ಸಂಸದ ಡಾ.ಉಮೇಶ್‌ ಜಾಧವ್‌ ಮಾತನಾಡಿ, ಬೆಣ್ಣೆತೋರಾ, ಮುಲ್ಲಾಮರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲ ಇದ್ದರೂ, ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಎರಡು ತಿಂಗಳಲ್ಲಿ “ವಿಷನ್‌-2050′ ಕ್ರಿಯಾಯೋಜನೆ ರೂಪಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದರು. ಕೆಕೆಆರ್‌ಡಿಬಿ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಡಾ.ನಂಜುಂಡಪ್ಪ ವರದಿ ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತಾದ ಎಲ್ಲ ವರದಿಗಳನ್ನು ಮೊದಲು ಅಧ್ಯಯನ ಮಾಡಿ ಮಾಹಿತಿ ಕ್ರೂಢೀಕರಿಸಬೇಕು.

ನಂತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಣಕಾಸನ್ನು ವಿವಿಧ ಮೂಲಗಳಿಂದ ಸಂಗ್ರಹಿಸುವ ಬಗ್ಗೆ ಗಮನ ಹರಿಸಬೇಕು ಎಂದರು. ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಈ ಭಾಗದ ಅಭ್ಯರ್ಥಿಗಳಿಗಾಗಿ ಐಎಎಸ್‌, ಕೆಎಎಸ್‌ ತರಬೇತಿಗಾಗಿ ವಿಶೇಷ ಘಟಕ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.

ಎನ್‌ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ್‌ ಪಾಟೀಲ್‌ ತೇಲ್ಕೂರ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜಿಪಂ ಸಿಇಒ ಡಾ.ದಿಲೀಷ್‌ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸುಧಾಕರ ಲೋಖಂಡೆ, ಜೆಸ್ಕಾಂ ಎಂಡಿ ರಾಹುಲ್‌ ಪಾಂಡ್ವೆ, ಎನ್‌ಇಕೆಆರ್‌ಟಿಸಿ ಎಂಡಿ ಕೂರ್ಮರಾವ, ನಗರ ಪೊಲೀಸ್‌ ಆಯುಕ್ತ ರವಿಕುಮಾರ, ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಈ ರಾಶಿಯವರು ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ!

ಈ ರಾಶಿಯವರು ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

flood  at chitthapura

ಚಿತ್ತಾಪುರ: ನದಿ ದಂಡೆಯ ಗ್ರಾಮಗಳಲ್ಲಿ ನೀರಿನ ಗೋಳು

ಪ್ರವಾಸಿಗರನ್ನು ಸೆಳೆಯುತ್ತಿದೆ ಎತ್ತಪೋತ ಜಲಧಾರೆ

ಪ್ರವಾಸಿಗರನ್ನು ಸೆಳೆಯುತ್ತಿದೆ ಎತ್ತಪೋತ ಜಲಧಾರೆ

ವ್ಯಕ್ತಿ ನಾಪತ್ತೆಯಾಗಿ ಒಂದು ವಾರವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು

ವ್ಯಕ್ತಿ ನಾಪತ್ತೆಯಾಗಿ ಹನ್ನೆರಡು ದಿನವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು

fyuy

ಒಂದೇ ದಿನ ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ

ಕುತೂಹಲಕ್ಕೆ ಕಾರಣವಾದ ಮುರುಗೇಶ ನಿರಾಣಿ- ಬಸವರಾಜ ಪಾಟೀಲ್ ಸೇಡಂ ಗೌಪ್ಯ ಮಾತುಕತೆ

ಕುತೂಹಲಕ್ಕೆ ಕಾರಣವಾದ ಮುರುಗೇಶ ನಿರಾಣಿ- ಬಸವರಾಜ ಪಾಟೀಲ್ ಸೇಡಂ ಗೌಪ್ಯ ಮಾತುಕತೆ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಈ ರಾಶಿಯವರು ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ!

ಈ ರಾಶಿಯವರು ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.