ಅಂಚೆ ಸೇವಕರ ಧರಣಿಗೆ ಗ್ರಾಹಕ ಹೈರಾಣು


Team Udayavani, May 31, 2018, 1:36 PM IST

koll-1.jpg

ಚಿಕ್ಕಬಳ್ಳಾಪುರ: ವೇತನ ಪರಿಷ್ಕರಣೆ ಮಾಡಿ ತಮಗೆ ಸೇವಾ ಭದ್ರತೆ ಒದಗಿಸುವಂತೆ ಪಟ್ಟು ಹಿಡಿದು ಜಿಲ್ಲೆಯ ಗ್ರಾಮೀಣ ಅಂಚೆ ಸೇವಕರು ಅನಿರ್ಧಿಷ್ಟವಾಧಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಚೆ ಪತ್ರಗಳ ವಿಲೇವಾರಿಯಲ್ಲಿ ಭಾರೀ ವ್ಯತ್ಯಯ ಕಂಡು ಬಂದಿದ್ದು, ಗ್ರಾಹಕರಿಗೆ ತಲುಪು ಬೇಕಾದ ಸಹಸ್ರಾರು ಅಂಚೆ ಪತ್ರಗಳು ಇದೀಗ ಅಂಚೆ ಉಪ ಕೇಂದ್ರಗಳಲ್ಲಿ ರಾಶಿ ಬಿದ್ದು ವಿಲೇವಾರಿಗೆ ಎದುರು ನೋಡುತ್ತಿವೆ.

ಕಳೆದ ಮೇ.22 ರಿಂದ ದೇಶಾದ್ಯಾಂತ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸಿ ಜಿಲ್ಲೆಯ 200 ಕ್ಕೂ ಹೆಚ್ಚು ಗ್ರಾಮೀಣ ಅಂಚೆ ಸೇವಕರು ನಗರದ ಜಿಲ್ಲಾ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸುತ್ತಿರುವುದರಿಂದ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲು ವಿವಿಧಡೆಗಳಿಂದ ಬಂದಿರುವ ಅಂಚೆ ಪತ್ರಗಳು ವಿಲೇವಾರಿಯಾಗದೇ ಅಂಚೆ ಇಲಾಖೆ ಬ್ಯಾಗ್‌ಗಳಲ್ಲಿ ಠಿಕಾಣಿ ಹೂಡುವಂತಾಗಿದೆ.

 ದೇಶದಲ್ಲಿ ಅಂಚೆ ಸೇವೆ ಪ್ರಬಲವಾಗಿ ಬೇರೂರಿ ತನ್ನ ಸೇವೆಯನ್ನು ಗ್ರಾಮೀಣ ಪ್ರದೇಶದ ಬಹುಭಾಗವನ್ನು ವಿಸ್ತರಿಸಿ
ಕೊಂಡಿದ್ದು, ಸತತ 10 ದಿನಗಳಿಂದ ಅಂಚೆ ಸೇವಕರು ಪ್ರತಿಭಟನೆಗೆ ಇಳಿದಿರುವುದರಿಂದ ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಿದ್ದ ಅಂಚೆ ಸೇವೆಯಲ್ಲಿ ವ್ಯತ್ಯಯ ಆಗಿರುವುದು ಒಂದಡೆಯಾದರೆ ಬೇರೆ ಬೇರೆ ಸ್ಥಳಗಳಿಂದ
ಜಿಲ್ಲೆಯ ಜನತೆಗೆ ವಿಲೇವಾರಿಗೆ ಬಂದಿರುವ ಸಹಸ್ರಾರು ಅಂಚೆ ಪತ್ರಗಳು ಗೆದ್ದಲು ತಿನ್ನುವಂತಾಗಿದೆ.

ಮನಿಯಾರ್ಡರ್‌ ಜತೆಗೆ ಸರ್ಕಾರಿ ಇಲಾಖೆಗಳ ನೌಕರರಿಗಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ,
ಎಲ್‌ಐಸಿಯ ಬಾಂಡ್‌ಗಳು, ವಿವಿಧ ಸರ್ಕಾರಿ ಇಲಾಖೆಗಳ ಬಹಳಷ್ಟು ಸುತ್ತೋಲೆಗಳು ಇಂದಿಗೂ ಅಂಚೆ ಮೂಲಕವೇ ಇಲಾಖೆಗಳಿಗೆ ತಲುಪುತ್ತಿವೆ. ಇನ್ನೂ ಇಲಾಖೆ ಒದಗಿಸುವ ಪೋಸ್ಟಲ್‌ ಅರ್ಡರ್‌, ಪಾರ್ಸ್‌ಲ್‌ ಸೇವೆ, ಎಸ್‌ಬಿ, ಆರ್‌ಡಿ ಮತ್ತಿತರ ಸೇವೆಗಳು ಸ್ಥಗಿತಗೊಂಡಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದರೂ ಗ್ರಾಮೀಣ ಅಂಚೆ ಸೇವಕರ ಪ್ರತಿಭಟನೆ ಬಗ್ಗೆ ಸಾಬೂಬು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಗಂಡ, ಹೆಂಡತಿ ನಡುವಿನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತಿನಂತೆ ಕೇಂದ್ರ ಸರ್ಕಾರ ಹಾಗು ಗ್ರಾಮೀಣ ಅಂಚೆ ಸೇವಕರ ನಡುವಿನ ತಿಕ್ಕಾಟದಿಂದ ಜಿಲ್ಲೆಯಲ್ಲಿ ಅಂಚೆ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿ ಗ್ರಾಮೀಣ ಜನರಿಗೆ ತಲು ಪುಬೇಕಾದ ಅಂಚೆ ಪತ್ರಗಳು, ಜೀವ ವಿಮಾ ಬಾಂಡ್‌ಗಳು, ಮನಿರ್ಯಾ ಡರ್‌, ಪಾನ್‌ ಕಾರ್ಡ್‌, ಪಾರ್ಸ್‌ ಪೋಟೋ ಮತ್ತಿತರರ ಸೌಲಭ್ಯ ಗಳು ಈಗ ಗ್ರಾಹಕರ ಪಾಲಿಗೆ ಮರೀಚಿಕೆಯಾಗಿ ಅಂಚೆ ಸೌಲಭ್ಯ ಕ್ಕಾಗಿ ಜಾತಕ ಪಕ್ಷಿಗಂತೆ ಎದುರು ನೋಡುವಂತಾಗಿದೆ.

ಉಪ ವಿಭಾಗದಲ್ಲಿ 130 ಉಪ ಅಂಚೆ ಕಚೇರಿ..! 
ಕೋಲಾರ ವಿಭಾಗಕ್ಕೆ ಸೇರುವ ಜಿಲ್ಲೆಯ ಚಿಂತಾಮಣಿ ತಾಲೂಕು ಹೊರತುಪಡಿಸಿ ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ ಒಳ ಪಡುವ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಹಾಗು ಶಿಡ್ಲಘಟ್ಟ ತಾಲೂಕುಗಳಲ್ಲಿ ಬರೋಬ್ಬರಿ 130 ಉಪ ಅಂಚೆ ಕಚೇರಿಗಳಿವೆ. ಈಗ ಎಲ್ಲಾ ಗ್ರಾಮೀಣ ಅಂಚೆ ಸೇವಕರು ಅನಿರ್ಧಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿರುವುದರಿಂದ ಈಗ ಗ್ರಾಮೀಣ ಅಂಚೆ ಕಚೇರಿಗಳಿಗೆ ಬೀಗ ಬಿದ್ದಿದೆ. ತಮ್ಮ ನ್ಯಾಯಯುವಾದ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಧರಣಿ ಕೈ ಬಿಡುವ ಪ್ರಶ್ನೆ ಇಲ್ಲವೆಂದು ಅಂಚೆ ಸೇವಕರು ಪಟ್ಟು ಹಿಡಿದು ಕಳೆದ 11 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

ಅಂಚೆ ಇಲಾಖೆಗೆ ಲಕ್ಷ ಲಕ್ಷ ಅದಾಯಕ್ಕೆ ಖೋತಾ.. 
 ಜಿಲ್ಲೆಯ ಗ್ರಾಮೀಣ ಅಂಚೆ ಸೇವಕರು ತಮ್ಮ ವೇತನ ಪರಿಷ್ಕರಣೆ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಕೆಲಸ,
ಕಾರ್ಯಗಳನ್ನು ಬದಿಗೊತ್ತಿ ಕಳೆದ ಮೇ.22 ರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಅಂಚೆ ಕಚೇರಿ ಎದುರು
ಅನಿರ್ಧಿಷ್ಟಾವಧಿ ಧರಣಿ ಕೂತಿರುವುದರಿಂದ ಅಂಚೆ ಇಲಾಖೆಗೆ ವಿವಿಧ ಸೇವೆಗಳ ಮೂಲಕ ಪ್ರತಿ ನಿತ್ಯ ಸಂದಾಯವಾಗುತ್ತಿದ್ದ ಲಕ್ಷಾಂತರ ರೂ, ಅದಾಯಕ್ಕೂ ಸಹ ಈಗ ಖೋತಾ ಬಿದ್ದಿದೆ. ಅಂಚೆ ಇಲಾಖೆ ಸೇವೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಇಎಂಒ. ಸ್ಪೀಡ್‌ ಪೋಸ್ಟ್‌, ಪಾರ್ಸಲ್‌, ಮನಿರ್ಯಾರ್‌, ಎಸ್‌ಬಿ. ಆರ್‌ಡಿ ಮತ್ತಿತರ ಸೇವೆಗಳ ಮೂಲಕ ಅಂಚೆ ಇಲಾಖೆ ಪ್ರತಿ ನಿತ್ಯ ಲಕ್ಷ ಲಕ್ಷ ಆಧಾಯ ಹರಿದು ಬರುತ್ತು. ಆದರೆ ಇದೀಗ ಅಂಚೆ ಸೇವಕರ ಪ್ರತಿಭಟನೆಯಿಂದ ಎಲ್ಲದಕ್ಕೂ ಬ್ರೇಕ್‌ ಬಿದ್ದಿದೆ.

ವಯೋವೃದ್ಧರ ಪಿಂಚಣಿಗೂ ಬರ..
ಗ್ರಾಮೀಣ ಅಂಚೆ ಸೇವಕರ ಪ್ರತಿಭಟನೆಗೆ ಸಾಮಾನ್ಯ ಜನತೆ ಒಂದು ರೀತಿಯ ಸಮಸ್ಯೆ ಎದುರಿಸಿದರೆ ಮತ್ತೂಂದಡೆ
ತಿಂಗಳ ತಿಂಗಳ ಸರ್ಕಾರದ ಪಿಂಚಣಿಯಲ್ಲಿ ಬದುಕು ನಡೆಸುವ ವಯೋವೃದ್ದ ನಾಗರಿಕರು, ಮಹಿಳೆಯರು, ಅಂಗವಿಕಲರು, ಅಂಧರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಸಹಸ್ರಾರು ಪಿಂಚಣಿದಾರರಿಗೆ ಇಂದಿಗೂ ಅಂಚೆ ಇಲಾಖೆಯ ಮನಿರ್ಯಾಡರ್‌ ಮೂಲಕವೇ ವೇತನ ಪಾವತಿಯಾಗುತ್ತಿದೆ. ಅದರೆ ಜಿಲ್ಲೆಯಲ್ಲಿ ಗ್ರಾಮೀಣ ಅಂಚೆ ಸೇವಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಜಿಲ್ಲೆಯ ಪಿಂಚಣಿದಾರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನಮ್ಮ ಅಂಚೆ ಉಪ ಕಚೇರಿಗೆ ಪ್ರತಿ ದಿನ 150 ಸಾಮಾನ್ಯ ಅಂಚೆ ಪತ್ರಗಳು ವಿಲೇವಾರಿಗೆ ಬರುತ್ತಿದ್ದವು. ಅದರ ಜೊತೆಗೆ ಪಾರ್ಸಲ್‌, ಇಎಂಓ, ಮನಿರ್ಯಾಡರ್‌, ಆರ್‌ಡಿ, ಎಸ್‌ಬಿ, ಎಲ್‌ಐಸಿ ಬಾಂಡ್‌ಗಳು ಬರುತ್ತಿದ್ದವು. ಕಳೆದ 10 ದಿ®ಗಳಿಂದ ನಾವು ಯಾವುದನ್ನು ವಿತರಣೆ ಮಾಡಿಲ್ಲ. ಜಿಲ್ಲೆಯ 130 ಅಂಚೆ ಉಪ ಕಚೇರಿಗಳಿಗೆ ಬಂದಿರುವ ಸಾವಿರಾರು ಪತ್ರಗಳು ಗ್ರಾಹಕರಿಗೆ ತಲುಪದೇ ಎಲ್ಲಾವು ಚಿಕ್ಕಬಳ್ಳಾಫ‌ುರ ಅಂಚೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಇಡಲಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ತಲುಪಿಸಲು ಏನು ಕ್ರಮ ಕೈಗೊಂಡಿಲ್ಲ. ನಮ್ಮ ಬೇಡಿಕೆಗಳ ಈಡೇರಿಸುವವರೆಗೂ ಕೂಡ ನಾವು ಸೇವೆಗೆ ಮರಳುವುದಿಲ್ಲ.  
 ಮಲ್ಲಿಕಾರ್ಜುನ್‌, ಗ್ರಾಮೀಣ ಅಂಚೆ ಸೇವಕ

ಕಾಗತಿ ನಾಗರಾಜಪ್ಪ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.