Udayavni Special

ಕೆರೆ ಒತ್ತುವರಿ ತೆರವು ಮಾಡಿ, ರೈತರ ಬೆಳೆ ಉಳಿಸಿ

Team Udayavani, Jul 20, 2021, 2:29 PM IST

ಕೆರೆ ಒತ್ತುವರಿ ತೆರವು ಮಾಡಿ, ರೈತರ ಬೆಳೆ ಉಳಿಸಿ

ಬಂಗಾರಪೇಟೆ: ಕೆರೆಗಳು ತವರು ಎಂದು ಹೆಸರು ಪಡೆದಿರುವ ಜಿಲ್ಲೆಯಲ್ಲಿ ದಿನೇ ದಿನೆ ನಶಿಸಿ ಹೋಗುತ್ತಿವೆ. ಇತ್ತೀಚೆಗೆಸುರಿಯುತ್ತಿರುವ ಭಾರಿ ಮಳೆಗೆರಾಜಕಾಲುವೆಗಳಿಲ್ಲದೆ ಮಳೆ ನೀರು ಕೆರೆಗೆ ಸೇರದೆ ರೈತರ ಹೊಲ, ತೋಟಗಳಿಗೆ ನುಗ್ಗಿ ಬೆಳೆನಾಶ ಆಗುತ್ತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಹೇಳಿದರು.

ತಾಲೂಕಾದ್ಯಂತ ಒತ್ತುವರಿಯಾಗಿರುವಕೆರೆ, ರಾಜಕಾಲುವೆ, ಗುಂಡುತೋಪುಗಳನ್ನುರಾಜ್ಯ ಹೈಕೋರ್ಟ್‌ ಆದೇಶದಂತೆ ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕೆಂದು ಸಾಮೂಹಿಕ ನಾಯಕತ್ವ‌ ರೈತಸಂಘದಿಂದ ತಾಲೂಕು ಕಚೇರಿ ಎದುರು ಹೋರಾಟ ಮಾಡಿ, ಶಿರಸ್ತೇದಾರ್‌ ರವಿಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.

ಹಣ ಲೂಟಿ: ಮನುಷ್ಯನ ದುರಾಸೆಯೇ ಕೆರೆಗಳ ಸರ್ವನಾಶಕ್ಕೆ ಮೂಲ ಕಾರಣವಾಗಿವೆ. ಮತ್ತೂಂದೆಡೆ ಪೂರ್ವಜರು ಬೆವರು ಸುರಿಸಿ ಕಟ್ಟಿ ಬೆಳೆಸಿದಂತಹ ಕೆರೆ, ರಾಜಕಾಲುವೆಗಳುಒತ್ತುವರಿದಾರರ ಪಾಲಾಗುತ್ತಿದ್ದರೂ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ವಿಫ‌ಲವಾಗಿವೆ. ಮತ್ತೂಂದೆಡೆ ಕೆರೆ, ರಾಜಕಾಲುವೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಯಾಗುತ್ತಿದ್ದರೂ ಕೆರೆ ಹೆಸರಿನಲ್ಲಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರರೂ. ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾದ್ಯಂತ ಹುಡುಕಾಡಿದರೂ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇಕೆರೆ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಮಾಡದೆಟೆಂಡರ್‌ದಾರರು, ಅಧಿಕಾರಿಗಳು ಹಣಲೂಟಿ ಮಾಡುವ ದಂಧೆಯಲ್ಲಿ ತೊಡಗಿದ್ದರೂ ಇವರ ವಿರುದ್ಧ ಯಾವುದೇ ಕ್ರಮ ಏಕಿಲ್ಲ? ರಾಜಕಾರಣಿಗಳಒತ್ತಡಕ್ಕೆಮಣಿದುಒತ್ತುವರಿದಾರರತಂಟೆಗೂ ಹೋಗುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆತಾಲೂಕಿನಲ್ಲಿ ತಾಂಡವವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಸಂರಕ್ಷಿಸುತ್ತಿಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ,ಮತ್ತೂಂದೆಡೆ ಜನಪ್ರತಿನಿಧಿಗಳು ಕೆರೆಗಳನ್ನು ಉಳಿಸಿಕೊಂಡು ಪ್ರಕೃತಿದತ್ತವಾಗಿ ಬರುವ ಮಳೆ ನೀರು ಸಮರ್ಪಕವಾಗಿ ಸಂಗ್ರಹಿಸಲು ಕಾರ್ಯ ಮಾಡುತ್ತಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆ ಜಾರಿ ಮಾಡುತ್ತೇವೆಂದು ಜನರ ತೆರಿಗೆ ಹಣದಲ್ಲಿ ಕಮಿಷನ್‌ ಪಡೆಯುತ್ತಿದ್ದಾರೆ ಎಂದುದೂರಿದರು.

ಕಷ್ಟಕ್ಕೆ ಸಿಕ್ಕ ಜಯ: ಭವಿಷ್ಯದ ಹಿತದೃಷ್ಟಿಯಿಂದ ಹೈಕೋರ್ಟ್‌ ರಾಜ್ಯಾದ್ಯಂತಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗುಂಡುತೋಪುಗಳನ್ನು ಸರ್ವೆ ಮಾಡಿಸಿ, ಎಷ್ಟೇ ಪ್ರಭಾಯಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸುವಂತೆ ಆದೇಶ ಮಾಡಿರುವುದುಪೂರ್ವಜರ ಕಷ್ಟಕ್ಕೆ ಹಾಗೂ ಕೆರೆ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.

ಹೋರಾಟದಲ್ಲಿ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಹಸಿರು ಸೇನೆ ಜಿಲ್ಲಾಧ್ಯಕ್ಷಕಿರಣ್‌, ಜಿಲ್ಲಾ ಉಪಾಧ್ಯಕ್ಷ ಚಾಂದ್‌ ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಮರಗಲ್‌ ಮುನಿಯಪ್ಪ, ಆಂಜಿ, ಮಂಜುನಾಥ್‌, ಬಾಬಾಜಾನ್‌, ನವಾಜ್‌, ಜುàರ್‌, ಜಾವೀದ್‌, ಘೌಸ್‌, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮಂಜುನಾಥ್‌, ಕದಿರಿನತ್ತ ಗುಲ್ಲಟ್ಟಿ ಚಲಪತಿ, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ftrtretr

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road development

7.50 ಕೋಟಿ ರೂ.ನಲ್ಲಿ ರಸ್ತೆ ಅಭಿವೃದ್ಧಿ

Government Hospital

ಕೋಲಾರ: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಒತ್ತು

kolara incident

ಉಳುಮೆ ಭೂಮಿ ಕಬಳಿಕೆಗೆ ಯತ್ನ

Road Transport Divisional Control Officer suspended

ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು

kolara news

ನಕಲಿ ಕಟ್ಟಡ ಕಾರ್ಮಿಕರ ವಿರುದ್ದ ಕ್ರಮಕೈಗೊಳ್ಳಿ

MUST WATCH

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

ಹೊಸ ಸೇರ್ಪಡೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ghrtyryr

ಟೋಕಿಯೊ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದ ಸಿಂಧುಗೆ ರಾಜ್ಯಪಾಲರಿಂದ ಅಭಿನಂದನೆ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.