ಕೋಲಾರ: 18ಕ್ಕೇರಿದ ಪಾಸಿಟಿವ್‌ ಪ್ರಕರಣ


Team Udayavani, May 26, 2020, 7:15 AM IST

praka sonku

ಕೋಲಾರ: ಜಿಲ್ಲೆಯಲ್ಲಿ ಭಾನುವಾರ ತಡ ರಾತ್ರಿ ಹಾಗೂ  ಸೋಮವಾರ ತಲಾ ಎರಡು ಕೋವಿಡ್‌ 19 ಪಾಸಿಟಿವ್‌ ಪ್ರಕರಣ ಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಪಾಸಿಟಿವ್‌ ವ್ಯಕ್ತಿಗಳ ಸಂಖ್ಯೆ 18ಕ್ಕೆ ಏರಿಕೆಯಾದಂತಾಗಿದೆ. ಮುಳಬಾಗಿಲು ಪಟ್ಟಣದ ಶಾಮೀರ್‌ ಮೊಹಲ್ಲಾದ 48 ವರ್ಷಗಳ ಪುರುಷ ಚಾಲಕ ಪಿ.2129ಕ ಭಾನುವಾರ ತಡರಾತ್ರಿ ಪಾಸಿಟಿವ್‌ ಪತ್ತೆಯಾಗಿತ್ತು. ಇದೇ ದಿನ ಶ್ರೀನಿ ವಾಸಪುರ ತಾಲೂ ಕಿನ ಮೊದಲ ಪಾಸಿಟಿವ್‌ ಪ್ರಕರಣ 60 ವರ್ಷದ  ವೃದ್ಧ ಪಿ. 2137ರ ಮೂಲಕ ಆರಂಭವಾಗಿದೆ.

ಈತ ಪಿ.1963 ದಾವಣ ಗೆರೆ ವ್ಯಕ್ತಿಯ ಸಂಪರ್ಕದಲ್ಲಿದ್ದ ರೆಂದು ಆರೋಗ್ಯ ಬುಲೆಟಿನ್‌ ದೃಢಪಡಿಸಿದೆ. ಸೋಮವಾರ ಸಂಜೆ ವೇಳೆಗೆ ಬಂಗಾರಪೇಟೆಯಲ್ಲಿ ಮತ್ತೆರೆಡು ಪ್ರಕರಣಗಳು  ಪತ್ತೆಯಾಗಿವೆ. ಈ ಹಿಂದೆ ಬಂಗಾರಪೇಟೆಯಲ್ಲಿ ಪತ್ತೆಯಾಗಿದ್ದ ಚಾಲಕ ಪಿ.1946ರ ಸಂಪರ್ಕದಲ್ಲಿದ್ದ ಆತನ 27 ವರ್ಷದ ಪತ್ನಿ ಮತ್ತು 6 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್‌ 19 ಸೋಂಕು ದೃಢ ಪಟ್ಟಿದೆ. ಇದರಿಂದ 14ರಲ್ಲಿದ್ದ  ಕೋಲಾರದ ಕೋವಿಡ್‌ 19 ಪ್ರಕರಣಗಳು 18 ಕ್ಕೇರುವಂತಾಗಿದೆ.

ತಾಲೂಕುವಾರು: ಕೋಲಾರ ಜಿಲ್ಲೆಯ18 ಪ್ರಕರಣಗಳ ಪೈಕಿ ತಾಲೂಕುವಾರು ಮುಳಬಾಗಿಲಿನಲ್ಲಿ 7, ಬಂಗಾರ ಪೇಟೆಯಲ್ಲಿ 6, ಮಾಲೂರು ಹಾಗೂ ಕೆಜಿಎಫ್ನಲ್ಲಿ ತಲಾ 2 ಮತ್ತು ಶ್ರೀನಿವಾಸಪುರದಲ್ಲಿ 1 ಪ್ರಕರಣ ಸೇರಿವೆ. ಆಶ್ಚರ್ಯವೆಂದರೆ  ಕೋಲಾರ ಜಿಲ್ಲಾ ಕೇಂದ್ರದಲ್ಲಿ ಮಂಡ್ಯವ್ಯಕ್ತಿ ಪಾಸಿಟಿವ್‌ ಆಗಿ ಓಡಾಡಿ ಹೋಗಿದ್ದು ಹೊರತು ಪಡಿ ಸಿದರೆ ಇದುವರೆಗೂ ಯಾವುದೇ ನೇರ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ಈ ವ್ಯಕ್ತಿಯ ಸಂಪರ್ಕಿತ ಐವತ್ತಕ್ಕೂ ಹೆಚ್ಚು ಮಂದಿ  ಕ್ವಾರಂಟೈನ್‌ನಲ್ಲಿದ್ದು ಎಲ್ಲರೂ ನೆಗೆಟಿವ್‌ ಆಗಿದ್ದು ಸದ್ಯಕ್ಕೆ ನಿರಾಳ ಗೊಳ್ಳುವಂತಾಗಿದೆ.

22 ಪೊಲೀಸರ ಕ್ವಾರಂಟೈನ್‌ ಅವಧಿ ಮುಂದುವರಿಕೆ: ಮಾರಿಕುಪ್ಪಂ ಗಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಗೆ ಕೋವಿಡ್‌ 19 ವೈರಸ್‌ ಸೋಂಕು ಇರುವುದರಿಂದ, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಪೊಲೀಸ್‌  ಅಧಿಕಾರಿಗಳು ಮತ್ತು ಸಿಬ್ಬಂದಿಯ ಕ್ವಾರಂಟೈನ್‌ ಇನ್ನೂ ಮುಂದುವರಿದಿದೆ. ಬೆಮಲ್‌ನಗರದ ಹೋಟೆಲ್‌ ಮತ್ತು ಪಾರಾಂಡಹಳ್ಳಿಯ ಕಲ್ಯಾಣ ಮಂಟಪದಲ್ಲಿ ತಲಾ 11 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಎಲ್ಲರಿಗೂ ಪ್ರಾಥಮಿಕ ಹಂತದಲ್ಲಿ  ಪರೀಕ್ಷೆ ನಡೆದಿದ್ದು,

ಎರಡನೇ ಬಾರಿಗೆ ಪರೀಕ್ಷೆ ನಡೆದು, ವರದಿ ಬಂದ ಮೇಲೆ ಕ್ವಾರಂಟೈನ್‌ನಿಂದ ಮುಕ್ತಿ ಸಿಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ. ಗಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಗೆ ಕೋವಿಡ್‌ 19 ವೈರಸ್‌  ಬಂದ ಹಿನ್ನೆಲೆಯಲ್ಲಿ ಎಲ್ಲಾ 50 ಕೈದಿಗಳಿಗೆ ತಪಾಸಣೆ ಮಾಡಲಾಗಿದ್ದು, ಎಲ್ಲರಿಗೂ ನೆಗಟಿವ್‌ ವರದಿ ಬಂದಿದೆ. ಜೊತೆಗೆ ಆರೋಪಿ ಮನೆಯವರಿಗೂ ನೆಗೆಟಿವ್‌ ವರದಿ ಬಂದಿದೆ. ಇದರಿಂದಾಗಿ ಅಧಿಕಾರಿಗಳು ನಿರಾಳರಾಗಿದ್ದಾರೆ.

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ನಕಲಿ food inspector

ಫುಡ್‌ ಇನ್ಸ್‌ಪೆಕ್ಷರ್‌ ಎಂದು ನಂಬಿಸಿ ಮೋಸ

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

6swamiji

ಚನ್ನಮ್ಮ ಹೆಸರು ದೇಶಾದ್ಯಂತ ಪಸರಿಸುವಂತೆ ಮಾಡಲಿ: ಶ್ರೀ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

youtube – theft

ಯುಟ್ಯೂಬ್‌ ನೋಡಿ ಎಟಿಎಂ ಕಳ್ಳತನಕ್ಕೆ ಸ್ಕೆಚ್

5chinchioli

ಹಿಂಗಾರು ಬಿತ್ತನೆಗೆ ಮರಳಿ ಬಂದ ಗ್ರಾಮಸ್ಥರು

4former

ಎರಡು ಸಾವಿರ ರೈತರಿಗೆ 6 ಕೋಟಿ ರೂ. ಸಾಲ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.